ಚಳ್ಳಕೆರೆ ನಗರಸಭೆ: ಬಿಡಾಡಿ ದನಗಳ ಮಾಲೀಕರಿಗೆ ಔರಾಯುಕ್ತ ಚಂದ್ರಪ್ಪ ಸೂಚನೆ.

by | 16/09/23 | ಸುದ್ದಿ

ಚಳ್ಳಕೆರೆ ಸೆ.16:
ಚಳ್ಳಕೆರೆ ನಗರದಲ್ಲಿ ಬಿಡಾಡಿ ದನಗಳ ಉಪಟಳ ಹೆಚ್ಚಾಗಿದ್ದು, ರಸ್ತೆಯಲ್ಲಿ ಗುಂಪು ಗುಂಪಾಗಿ ಓಡಾಡುತ್ತಾ, ರಸ್ತೆಯಲ್ಲಿ ಓಡಾಡುವ ನಗರದ ನಾಗರೀಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ, ವೃದ್ದರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿರುತ್ತವೆ. ದನಗಳು ಗುದ್ದಾಡುತ್ತಾ ಜನಗಳ ಮತ್ತು ರಸ್ತೆಯಲ್ಲಿ ಓಡಾಡುವ ವಾಹನಗಳ ಮೇಲೆರಗುವುದರಿಂದ ಪ್ರಾಣಾಪಾಯವಾಗುವ ಸಂಭವವಿರುತ್ತದೆ. ಸಾರ್ವಜನಿಕರಿಂದ ಈ ಬಗ್ಗೆ ನಗರಸಭೆ ದೂರುಗಳು ಬಂದಿರುತ್ತವೆ.
ಆದ್ದರಿಂದ ದನಗಳ ಮಾಲೀಕರು ತಮ್ಮ ದನಗಳನ್ನು ರಸ್ತೆಗೆ ಬಿಡದಂತೆ ತಮ್ಮ ಜಾಗದಲ್ಲಿ ಪಾಲನೆ ಮಾಡಲು ತಿಳಿಸಿದೆ. ತಪ್ಪಿದಲ್ಲಿ ಚಳ್ಳಕೆರೆ ನಗರಸಭೆಯಿಂದ ಬಿಡಾಡಿ ದನಗಳನ್ನು ಹಿಡಿದು ಕುರುಡಿಹಳ್ಳಿಯಲ್ಲಿರುವ ಪುಣ್ಯಕೋಟಿ ಸರ್ಕಾರಿ ಗೋ ಶಾಲೆಗೆ ಸಾಗಿಸಲಾಗುವುದು. ಗೋಶಾಲೆಗೆ ಸಾಗಿಸಿದ ನಂತರ ದನಗಳ ಮಾಲೀಕರು ನಮ್ಮ ದನ ಎಂದು ವಾಪಸ್ ಪಡೆಯಬೇಕಾದಲ್ಲಿ ಪಶು ಸಂಗೋಪನಾ ಇಲಾಖೆಯ ನಿಯಮಗಳಂತೆ ಒಂದು ದಿನಕ್ಕೆ ರೂ.300 ಗಳಂತೆ ಪಾವತಿಸಿ ಹಿಂಪಡೆಯಬೇಕಾಗಿರುತ್ತದೆ. ಪ್ರಯುಕ್ತ ತಮಗೆ ಸಂಬಂಧಿಸಿದ ದನಗಳಿಗೆ ತಾವೇ ಜವಾಬ್ದಾರರಾಗಿದ್ದು, ಈ ಪ್ರಕಟಣೆಯ ಒಂದು ವಾರದ ನಂತರ ಬಿಡಾಡಿ ದನಗಳನ್ನು ಹಿಡಿದು ಸಾಗಿಸಲಾಗುವುದು ಎಂದು ಚಳ್ಳಕೆರೆ ನಗರಸಭೆ ಪೌರಯುಕ್ತ ಸಿ.ಚಂದ್ರಪ್ಪ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *