ಚಳ್ಳಕೆರೆ ಜನಧ್ವನಿ ವಾರ್ತೆ ಅ16.
ಕಾಗದ ರಹಿತ ಆಡಳಿತಕ್ಕಾಗಿ ತಾಲೂಕು ಕಚೇರಿ ಇ-ಕಚೇರಿ ತಂತ್ರಾಂಶವನ್ನು ಅಳವಡಿಸಲಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.
ಗ್ರಾಮೀಣ ಭಾಗದ ಜನರು ವಿವಿಧಯೋಜನೆಗಳ ಸರಕಾರಿ ಸೌಲಭ್ಯ ಕಂದಾಯ ಇಲಾಖೆಯ ಭೂ ದಾಖಲೆ ಪಡೆಯಲು ಅರ್ಜಿಗಳನ್ನು ಇಡಿದು. ದೂರು ಹೊತ್ತು, ನಾವು ದೂರು ನೀಡಿ ಒಂದು ತಿಂಗಳಾಗಿದೆ ಇನ್ನು ಕೆಲಸವಾಗಿಲ್ಲ ಎಂಬ ಆರೋಗಪಗಳನ್ನು ದೂರ ಮಾಡಲು ಸಾರ್ವಜನಿಕ ಕೆಲಸಗಳನ್ನು ತುರ್ತು ನಿವಾರಣೆಗಾಗಿ ಕಾಗದ ರಹಿತ ಇ-ಕಚೇರಿಯನ್ನು ಜಾರಿಗೆ ತರಲಾಗುತ್ತಿದೆ ಇನ್ನು ಮುಂದೆ ಕಚೇರಿಗೆ ಅಲೆಯುವಂತಿಲ್ಲ ಆನ್ ಲೈನ್ ನಲ್ಲಿ ಮನವಿ ಸ್ವೀಕರಿಸುವ ವ್ಯವಸ್ಥೆಯನ್ನು ತಾಲೂಕು ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ತರಲು ತ್ವರಿತವಾಗಿ ಕಡತಗಳನ್ನು ವಿಲೆವಾರಿ ಮಾಡಲು, ಸಮಯ ಉಳಿತಾಯ, ದಕ್ಷತೆ ಹೆಚ್ಚಳ, ಸಾರ್ವಜನಿಕರು ಕಚೇರಿಗೆ ಅಲೆದಾಟ ತಪ್ಪಿಸಲು ಸೇವೆಯನ್ನು ತುರ್ತಾಗಿ ನೀಡಲು ಇ-ಕಚೇರಿಯನ್ನು ಪ್ರಾರಂಬಿಸಲಾಗುವುದು. ರೈತರು . ಸಾರ್ವಜನಿಕರು ಇನ್ನು ಮುಂದೆ ಕಚೆರಿಯ ಆಯಾ ವಿಭಾಗದ ಸಿಬ್ಬಂದಿಗಳ ಬಳಿ ಆನ್ ಲೈನ್ ಮೂಲಕವೇ ಅರ್ಜಿಗಳನ್ನು ಪಡೆಯಲಾಗುತ್ತದೆ ಸ್ಥಳದಲ್ಲಿಯೇ ರಶೀದಿ ನೀಡಿ ಮೊಬೈಲ್ ಸಂಖ್ಯೆ ಪಡೆದು ಕಡತದ ಪ್ರತಿ ಹಂತದ ಮಾಹಿತಿಯನ್ನು ಮೊಬೈಲ್ ಮೂಲಕ ಕಾಲ ಕಾಲಕ್ಕೆ ಕಳುಹಿಸಲಾಗುವುದು ಅರ್ಜಿದಾರರು ತಮ್ಮ ಕಡತದ ಕುರಿತಾದ ಮಾಹಿತಿಯನ್ನು ಆನ್‌ಲೈನ್ ಮೂಲಕ ತಾವು ಇರುವಲ್ಲಿ ಅಂಗೈಯಲ್ಲಿನ ಮೊಬೈಲ್ಲಿನಲ್ಲೇಯೇ ನೋಡಿಕೊಳ್ಳಬಹುದು .
ಸಂಬಂಧಪಟ್ಟ ಗುಮಾಸ್ತರುಗಳು ಕಡತಗಳನ್ನು ಕೈಯಲ್ಲಿಡಿದು ವಿಭಾಗದಿಂದ ವಿಭಾಗಕ್ಕೆ ತೆರಳಿ ಹಸ್ತಾಂತರಸುವುದು ತಪ್ಪುತ್ತದೆ. ಇ-ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಕಡತಗಳು ಆನ್‌ಲೈನ್‌ಗೆ ಅಪ್‌ಡೇಟ್ ಮಾಡಲಾಗುತ್ತದೆ.ಕಚೇರಿಗೆ ಸಾರ್ವಜನಿರು ಸೇವೆಗಳಿಗಾಗಿ ಅಲೆದಾಡ ತಪ್ಪಿಸಲು ಇ- ಕಚೇರಿಯನ್ನು ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಪ್ರಥಮಬಾರಿಗೆ ಅಳವಡಿಸಲಾಗುತ್ತಿದೆ ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ಮಾಹಿತಿ ನೀಡಿದರು.
ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಪ್ರಥಮಬಾರಿಗೆ ಇ-ಕಚೇರಿ ಕಾಗದ ರಹಿತ ಅಳವಡಿಸಲಾಗುತ್ತಿದೆ ತಹಶೀಲ್ದಾರ್ ರೇಹಾನ್ ಪಾಷ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments