ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೇರಿ 25 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಭಾಗ್ಯ .

by | 29/10/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಅ.29.
ಶಾಸಕರ ಬಹಿರಂಗ ಅತೃಪ್ತಿ ಬೆನ್ನಲ್ಲಿಯೇ ಕಾಂಗ್ರೆಸ್ ಅದನ್ನು ಶಮನಗೊಳಿಸಲು ನಿಗಮ, ಮಂಡಳಿಗಳ ತಂತ್ರಕ್ಕೆ ಮೊರೆ ಹೋಗಿದೆ. ಅದರಂತೆ ಆಡಳಿತಾರೂಢ ಕಾಂಗ್ರೆಸ್ ತನ್ನ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಂಚುವ ಮತ್ತೊಂದು ಮಹತ್ವದ ಟಾಸ್ಕ್ಗೆ ಅಣಿಯಾಗುತ್ತಿದೆ. ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ನಾಮ ನಿರ್ದೇಶನ ಸಂಬಂಧ ಮಾನದಂಡಗಳಡಿ ಅಧಿಕಾರ ಹಂಚಲು ಪಟ್ಟಿ ಸಿದ್ಧಪಡಿಸಿದ್ದ ಜಿಲ್ಲಾ ಉಸ್ತುರವರಿ ಸಚಿವ ಸ್ಥಾನ ಜತೆಗೆ ಈಗ ಕೋಟೆ ನಾಡಿಗೆ ಎರಡು ನಿಮಗಂಡಿಯ ಅಧ್ಯಕ್ಷ ಸ್ಥಾನಗಳು ಮುಡಿಗೇರುವ ಸಾಧ್ಯತೆ ಇದೆ.
ಹೌದು ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಹಾಗೂಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಇಬ್ಬರ ಹೆಸರುಗಳು ಸೇರಿ ಒಟ್ಟು 25 ಶಾಸಕರ ಹೆಸರುಗಳು ನಿಗಮ ಮಂಡಳಿಯ ಅಧ್ಯಕ್ಷ ಪಟ್ಟ ಗದ್ದುಗೇರಲಿದ್ದಾರ

ಕಡಿಮೆ ಅವಧಿಯಲ್ಲೇ ಖ್ಯಾತಿ ಪಡೆದ ಕೀರ್ತಿ.

ಹಟ್ಟಿ ಗಣಿ ಅಧ್ಯಕ್ಷರಾಗಿ ಆರು ತಿಂಗಳಲ್ಲಿ ಗಣಿ ಕಾರ್ಮಿಕರ ಬಾಕಿ ಇದ್ದ ವೇತನ ಸೇರಿದಂತೆ ಇತರೆ ಸ್ಔಲಭ್ಯಗಳನ್ನು ಕಲ್ಪಿಸಿಕೊಟ್ಟದ್ದ ಶಾಸಕ ಟಿ.ರಘುಮೂರ್ತಿಗೆ ಶಾಸಕರ ಭವನದಲ್ಲಿ 27/2/2021 ಹಟ್ಟಿಗಣಿ ಕಾರ್ಮಿಕರು ಶಾಸಕ ಭವನದಲ್ಲಿ ಸನ್ಮಾನ ಮಾಡಿದ ಸಂದರ್ಭ

ಹಟ್ಟಿ ಚಿನ್ನದಗಣಿ ಅಧ್ಯಕ್ಷರಾಗಿ ಆರುತಿಂಗಳಲ್ಲೇ ಕಾರ್ಮಿಕರ ಸಮ್ಯೆಗಳನ್ನು ಬಗೆಹರಿಸಿ ಬಾಕಿ ಇದ್ದ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಿದ ಏಕೈಕ ಹಟ್ಟಿಗಣಿ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿಗೆ ಸಲ್ಲುತ್ತದೆ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದ ಶಾಸಕ ಟಿ.ರಘುಮೂರ್ತಿಗೆ ಈಗ ಮತ್ತೆ ಯಾವ ನಿಗಮ ಅಧ್ಯಕ್ಷ ಸ್ಥಾನದ ಲಭಿಸಲಿದೆ.
ಶಾಸಕ ಟಿ.ರಘುಮೂರ್ತಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಚಿವ ಸ್ಥಾನ ಸೇರಿನಲ್ಲಿದ್ದ ಶಾಸರಿಗೆ ಕೊನೆಗೆ 2019 ರ ಜನವರಿ 11 ರಂದು ಹಟ್ಟಿಚಿನ್ನದ ಗಣಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಜೂನ್ 11 ಕ್ಕೆ ಅಧಿಕಾರ ಇದ್ದಾಗಲೆ ಸರಕಾರ ಬೀಳುವ ಸೂಚನೆ ಸಿಕ್ಕಾಗ ಸರಕಾರಿ ವಾಹನ ಮರಳಿಸಿದ್ದರು. ಆದರೆ ಸರಕಾರ ಜೂನ್ 27 ಕ್ಕೆ ಬಿದ್ದು ಹೋಯಿತು. ಹಟ್ಟಿಗಣಿ ಅಧ್ಯಕ್ಷರಾಗಿ 6 ತಿಂಗಳ ಅವಧಿಯಲ್ಲಿ ಗಣಿ ಕಾರ್ಮಿಕರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಮಿಕರ ಸಮಸ್ಯೆ ಹಾಗೂ ಗಣಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಇಂಗಳದಾಳ್, ಕೋಲಾರ ಸೇರಿದಂತೆ ವಿವಿಧ ಚಿನ್ನದ ಗಣಿಗಳ ಅಭಿವೃದ್ಧಿ ಪಡಿಸುವ ಕನಸು ಬಗ್ನವಾದರೂ ಸಹ ಪಕ್ಷ ನಿಷ್ಟೆಯಿಂದ ಕಾಂಗ್ರೆಸ್ ತೊರೆದು ಅಧಿಕಾರದ ಆಸೆಗೆ ಹೋಗದೆ ಪಕ್ಷದಲ್ಲೇ ಉಳಿದಿಕೊಂಡು ಪಕ್ಷ ನಿಷ್ಠೆ ಮೆರೆದಿದ್ದಾರೆ.
ಆರು ತಿಂಗಳು ಕಾಲ ಹಟ್ಟಿಚಿನ್ನದ ಗಣಿ ಅಧ್ಯಕ್ಷರಾದರೂ ಸಹ ಗಣಿ ಕಾರ್ಮಿಕರಿಗೆ ಮೆಚ್ಚಿಗೆ ಪಡುವಂತಹ ಹಾಗೂ ಜೀವನ ಪರಿಯಂತಹ ಕೆಲಸ ಮಾಡಿರುವುದನ್ನು ಇಂದಿಗೂ ಸಹ ಹಟ್ಟಿ ಗಣಿ ಕಾರ್ಮಿಕರು ಶಾಸಕ ಟಿ.ರಘುಮುರ್ತಿಯವರನ್ನು ನೆನೆದು ಕೊಳ್ಳುತ್ತಾರೆ. ಸರಕಾರ ಬಿದ್ದುಹೋದಾಗ ಹಟ್ಟಿಗಣಿ ಅಧ್ಯಕ್ಷ ಸ್ಥಾನ ಹೋದಾರು ಸಹ ಹಟ್ಟಿ ಕಾರ್ಮಿಕರ ಮನದಲ್ಲಿ ಉಳಿಯುವಂತೆ ಕೆಲಸ ಮಾಡಿದ್ದಾರೆ ಅದೇ ರೀತಿ ಚಳ್ಳಕೆರೆ ವಿಧಾನ ಸಭೆ ಕ್ಷೇತ್ರದಲ್ಲೂ ಸಹ ಅಭಿವೃದ್ಧಿ ಮಾಡಿರುವುದರಿಂದ ಇಲ್ಲಿನ ಜನರು ಕೈಇಡಿಯುವ ಮೂಲಕ ಹ್ಯಾಟ್ರಿಕ್ ಗೆಲುವ ನೀಡಿದ್ದಾರೆ ಇಂಹತ ಶಾಸಕ ಟಿ.ರಘಮೂರ್ತಿಗೆ ಶಾಸಕ ಸ್ಥಾನ ನೀಡುವಂತೆ ಒತ್ತಆಯಿದ್ದರು ಸಚಿವ ಸ್ಥಾನದ ರೇಸ್ ನಲ್ಲಿದ್ದರೂ ಸಹ ಕೊನೆಗಳಿಯಲ್ಲಿ ಹಿರಿಯೂರು ಶಾಸಕ ಡಿ.ಸುಧಾಕರ್ ಸಚಿವ ಸ್ಥಾನ ಒಲಿಯಿತು.

ಹಟ್ಟಿ ಗಣಿ ಕಾರ್ಮಿಕರಿಂದ ಸನ್ಮಾನ

ನಗರದ ಶಾಸಕರ ಭವನದಲ್ಲಿ ಸುಮಾರು 270 ಕಿ.ಮೀ ದೂರದ ರಾಯಚೂರಿನ ಹಟ್ಟಿಚಿನ್ನದ ಗಣಿಯ ಸುಮಾರು 40 ಕ್ಕೂ ಹೆಚ್ಚು ಕಾರ್ಮಿಕರು 27-2-2021 ರಂದು ಬಂದು ಸನ್ಮಾನಿಸಿ ಗೌರವಿಸಿದ್ದರು. ರಾಜ್ಯ ಸರಕಾರದ ಲಾಭದಾಯಕ ಉದ್ಯಮವಾದ ಹಟ್ಟಿ ಚಿನ್ನದ ಗಣಿಯಲ್ಲಿ 4056 ಕಾರ್ಮಿಕರು ಹಾಗೂ ಸಿಬ್ಬಂದಿಗಳ ವೇತನ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಸ ಏಕೈಕ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರೆಂದರೆ ಅದು ಚಳ್ಳಕೆರೆ ಶಾಸಕ ಟಿ.ತಘುಮೂರ್ತಿಗೆ ಸಲ್ಲುತ್ತದೆ ಎಂದು ಹಟ್ಟಿಚಿನ್ನದ ಗಣಿಯ ಕಾರ್ಮಿಕ ಸಂಘಟನೆಯ ಅಂದಿನ ಪ್ರಧಾನ ಕಾರ್ಯದರ್ಶಿ ಎಂ.ಡಿ. ಅಮೀರ ಅಲಿ ಕೊಂಡಾಡಿರುವುದು ನೆನೆಪಿಗೆ ಬರುತತದೆ. ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರನ್ನು ಹಟ್ಟಿ ಚಿನ್ನದಗಣಿಯ ನೂತನ ಅಧ್ಯಕ್ಷರನ್ನಾಗಿ ಮಾಡಿದಾಗ ಈ ಭಾಗದ ಸಚಿವರು, ಶಾಸಕರು ಎಷ್ಟೋ ಜನರು ಅಧ್ಯಕ್ಷರಾದರೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಅದೂ ದೂರದ ಶಾಸಕರೊಬ್ಬರು ಬಂದು ಇಲ್ಲೇನು ಅಭಿವೃದ್ದಿ ಮಾಡುತ್ತಾರೆ ಎಂದು ವಿರೋಧವ್ಯಕ್ತಪಡಿಸಿ ವ್ಯಗ್ಯವಾಗಿ ಮಾತನಾಡಿದ್ದರು. ಶಾಸಕ ಟಿ.ರಘುಮೂರ್ತಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದಾಗ ಕಾರ್ಮಿಕರ ಸಂಘಟನೆಗಳು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಮಾಡಿಕೊಂಡಾಗ ನಾನು ಭರವಸೆ ಕೊಡುವುದಿಲ್ಲ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದರು ಕಾರ್ಮಿಕರ ಕಳೆದ 2016 ನೇ ಸಾಲಿನಿಂದ ಸುಮಾರು 5 ವರ್ಷಗಳ ವೇತನ ಬಾಕಿ ಇದ್ದ ವೇತನ ಅಧ್ಯಕ್ಷರಾಗಿ 6 ತಿಂಗಳ ಅವಧಿಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿ ಸಭೆ ಕರೆದು ಕಾರ್ಮಿಕರ ವೇತನ ಒಬ್ಬಂದ ಜಾರಿಗೆ ತಂದು 2.24 ಕೋಟಿ ರೂ ವೇತನ ಬಿಡುಗಡೆಗೊಳಿಸಿದರು. ಗಣಿಯಲ್ಲಿ ಸುಮಾರು 300ಅಡಿಗಳ ಸುರುಂಗ ಮಾರ್ಗದಲ್ಲಿ ಕೆಲಸ ಮಾಡುವ 55 ವರ್ಷದಾಟಿದ ಕಾರ್ಮಿಕರ ಆರೋಗ್ಯ ಹದಗೆಡುತ್ತದೆ ಪರಿಹಾರ ನೀಡಿ ಮನೆಗೆ ಕಳಿಸುತ್ತಿದ್ದರು. ಇದರಿಂದ ಸುಮಾರು 4 ಸಾವಿರ ಕುಟುಂಬಗಳು ಬೀದಿಗೆ ಬೀಳುತ್ತಿದ್ದವು ಇವರು ಅಧ್ಯಕ್ಷರಾದ ಮೇಲೆ ಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಕೆಲಸ ನೀಡುವಂತೆ ಸರಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಕಾರ್ಮಿಕರ ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಶಿಗೆ ಮುಂದಾಗಿ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಮನದಲ್ಲಿ ಇಂದಿಗೂ ಉಳಿಯುವಂತೆ ಮಾಡಿದ್ದಾರೆ.

ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ಕೊನೆಕ್ಷಣದಲ್ಲಿ ತಪ್ಪಿದ್ದು ಮತ್ತೆ ಈಗ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಹೆಸರು ಕೇಳಿ ಬಂದಿದ್ದು ಒಳ್ಳೆಯ ನಿಮಗಮಂಡಳಿ ಸ್ಥಾನ ನೀಡುವ ಜತಗೆ ಮುಂದಿನ ದಿನಗಳಲ್ಲಿ ಇವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಕ್ಷೇತ್ರದ ಜನತೆಯ ಮನವಿ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page