ಚನ್ನಗಿರಿ ನೂತನ ತಾಲೂಕು ಭಗೀರಥ ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಅಸ್ತಿತ್ವಕ್ಕೆ

by | 18/10/23 | ಸುದ್ದಿ


ಚನ್ನಗಿರಿ, ಅ.17- ದಾವಣಗೆರೆ ಜಿಲ್ಲೆಯ ಚನ್ನಗಿರಿ
ತಾಲೂಕಿನಲ್ಲಿ, ತಾಲೂಕು ಭಗೀರಥ ಉಪ್ಪಾರ ನೌಕರರ
ಕ್ಷೇಮಾಭಿವೃದ್ಧಿಸಂಘ (ರಿ) ವನ್ನು ಪುನಶ್ಚತನಗೊಳಿಸಿ,
ಹೊಸದಾಗಿ ಪದಾಧಿಕಾರಿಗಳನ್ನು ಚನ್ನಗಿರಿ ತಾಲೂಕು
ಉಪ್ಪಾರ ಸಮಾಜದ ಸಮಕ್ಷಮದಲ್ಲಿ ನೇಮಿಸಲಾಯಿತು.
2009 ರಿಂದ ಅಸ್ಥಿತ್ವದಲ್ಲಿರುವ ತಾಲೂಕಿನ ಮೊದಲ
ಸರ್ಕಾರಿ ನೌಕರರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರ
ವಾಗಿರುವ ಸಂಘವು, ಕಳೆದ 15 ವರ್ಷಗಳಿಂದ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವಿಶೇಷ ಸಾಧನೆ
ಮಾಡಿದ ಸಮಾಜದ ಬಂಧುಗಳಿಗೆ ಸನ್ಮಾನ, ದತ್ತಿ
ಕಾರ್ಯಕ್ರಮಗಳು, ಉಚಿತ ಕಣ್ಣಿನ ತಪಾಸಣಾ ಶಿಬಿರ,
ಉಚಿತ ರಕ್ತದಾನ ಶಿಬಿರ, ಸಮಾಜದ ನೌಕರ ಬಂಧುಗಳಿಗೆ
ಅನುಕೂಲವಾಗುವಂತೆ ಒಂದೇ ಕಡೆ ಭಗೀರಥ ಲೇಔಟ್
ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹೀಗೆ
ಹತ್ತು ಹಲವು ಕಾರ್ಯಕ್ರಮಗಳನ್ನು ಹಿಂದಿನ ಅಧ್ಯಕ್ಷರು
ಗಳಾದ, ರಾಜಪ್ಪ ಶಿಕ್ಷಕರು, ರಮೇಶ್ ಶಿಕ್ಷಕರು,
ಸಿದ್ಧಲಿಂಗಪ್ಪ, ಶಿಕ್ಷಕರು ಹಾಗೂ ಹನುಮಂತಪ್ಪ ಶಿಕ್ಷಕರು
ಇವರ ಆಡಳಿತ ಅವಧಿಯಲ್ಲಿ ಮಾಡಿದ್ದು, ಈಗ ಸಂಘಕ್ಕೆ
ಯುವಸಾರಥ್ಯ ನೀಡಿ ಕಾರ್ಯ ಚಟುವಟಿಕೆಗಳಿಗೆ ಚಾಲನೆನೀಡಲಾಯಿತು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾಗಿ ಈಶ್ವರಪ್ಪ
ಎಂ.ಎನ್. ದೇವರಹಳ್ಳಿ ಕಾರ್ಯದರ್ಶಿಗಳಾಗಿ ಶೇಖರಪ್ಪ
ಹೊದಿಗೆರೆ, ಉಪಾಧ್ಯಕ್ಷರಾಗಿ ದೇವೇಂದ್ರಪ್ಪ ಜಿ. ಎನ್.
ನಲ್ಲೂರು, ಮಹಂತೇಶ್ ಹೆಚ್, ಕಿಚಡಪ್ಪ (ಪ್ರಸನ್ನ)
ಚಿರಡೋಣಿ, ಖಜಾಂಚಿಯಾಗಿ ಬಸವರಾಜಪ್ಪ ಯು.
ಚನ್ನಗಿರಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ
ಕವಿತಾ ಜಗದೀಶ್, ಚನ್ನಗಿರಿ, ಸಹಕಾರ್ಯದರ್ಶಿಯಾಗಿ
ರವಿ ಹೆಚ್.ಎನ್. ಹಾಗೂ ನಿರ್ದೇಶಕರಾಗಿ ಪ್ರಸನ್ನ
ಕುಮಾರ್ ಎಂ.ಹೆಚ್., ರಂಗನಾಥ ಕೆ ಎನ್, ಶ್ರೀಮತಿ
ಲಕ್ಷ್ಮಿದೇವಿ ಎಂ.ಜಿ., ಮೈಲಾರಪ್ಪ ಎಸ್, ಮಲ್ಲೇಶ್
ಎಲ್,ಶ್ರೀಮತಿ ಲಕ್ಷ್ಮಿದೇವಿ ಯು,ಸ್ವಾಮಿ.ಎಸ್. ಇವರನ್ನು
ನೇಮಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಭಗೀರಥ ಸಮಾಜದ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಜಿಲ್ಲಾ
ಸಂಘದ ಪದಾಧಿಕಾರಿಗಳು, ಸಮಾಜದ ಮುಖಂಡರು,
ಕಟ್ಟೇಮನೆ ಗೌಡರುಗಳು, ತಾಲೂಕಿನ ಎಲ್ಲಾ ಸರ್ಕಾರಿ
ಹಾಲಿ ಮತ್ತು ನಿವೃತ್ತ ನೌಕರರುಗಳು ಹಾಜರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *