ಚಳ್ಳಕೆರೆ ನ.18 ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಬೀದಿ ದೀಪ, ವಸತಿ, ಸ್ವಚ್ಚತೆ ಸೇರಿದಂತೆ ಸರಕಾರಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಸಪಿಸಿದಾಗ ನಿಮ್ಮ ಬಗ್ಗೆ ಯಾವ ದೂರುಗಳು ಬರುವುದಿಲ್ಲ ಎಂದು ಜಿಪಂ ಸಿಇಒ ಸೋಮಶೇಖರ್ ಕವಿಮಾತು ಹೇಳಿದರು,
ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿರುವ ಸಾಮಾರ್ಥ್ಯ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಯಿಂದ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಅಧಿಕಾರಿಗಳಿಗೆ ನಾಹಿತಿ ಮತ್ತು ಸಂವಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಕೇಂದ್ರಿಕರಣ ನೀತಿಯಿಂದಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಮೇಲೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಜವಾಬ್ದಾರಿ ಹೆಚ್ಚಾಗಿದೆ. ಕುಡಿಯುವ ನೀರು, ವಸತಿ, ಸ್ವಚ್ಛ ಗ್ರಾಮ ಆಂದೋಲನ, ಕಡ್ಡಾಯ ಶೌಚಾಲಯ ನಿರ್ಮಾಣ ಹೀಗೆ ಹತ್ತಾರು ಕಾರ್ಯಕ್ರಮಗಳ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಗ್ರಾಪಂಗಳಿಗೆ ಅಭಿವೃದ್ಧಿ ಅಧಿಕಾರಿಗಳ ಹೊಣೆಗಾರಿಕೆ ಹೆಚ್ಚಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬರುವ ಸೌಭ್ಯಗಳನ್ನು ಗ್ರಾಮಸಭೆ ನಡೆಸುವ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ನೀಡಬೇಕಿದೆ. ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸ ಬೇಕಾದರೆ ಸಾಮಾನ್ಯ ಸಭೆ, ನಡೆಸಿ ಕ್ರಿಯಾಯೋಜನೆ ರೂಪಸಿ ಬೇಕು, ಸಕಾಲಕ್ಕೆ ಗ್ರಾಮಸಭೆ, ವಾರ್ಡ್ ಸಭೆ, ಸಮಾನ್ಯ ಸಭೆ, ವಿಶೇಷ ಸಭೆಗಳನ್ನು ನಡೆಸಬೇಕು, ಎಲ್ಲಾ ಯೋಜನೆಗಳನ್ನು ಸಂಬಂಧಿಸಿದ ತಂತ್ರಾಂಶದಲ್ಲಿ ಅಳವಡಿಸಬೇಕು.

ಗ್ರಾಪಂ ಅಭಿವೃದ್ಧಿ ಪ್ರಕಾರ್ಯಗಳು, ಜವಾಬ್ದಾರಿಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು ಸಾಕಷ್ಟು ಅನುದಾನ ಗ್ರಾಪಂಗೆ ಬರುತ್ತಿದೆ. ಈ ಕಾರ್ಯಗಳನ್ನು ಪ್ರಾಮಾಣಿಕ, ಪಾರದರ್ಶಕವಾಗಿ ನಿಗದಿಯ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸ್ಥಳೀಯವಾಗಿ ಪಿಡಿಒಗಳ ಲಭ್ಯತೆ ಬಹು ಮುಖ್ಯವಾಗಿದೆ. ಸರಕಾರದ ಕಾರ್ಯಕ್ರಮ, ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾದರೇ ಸ್ಥಳೀಯ ಗ್ರಾಮಮಟ್ಟದ ಪಿಡಿಒ ಗಳು ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ.
ಗ್ರಾಮೀಣಾಭಿವೃದ್ಧಿ ,ಮತ್ತು ಪಂಚಾಯತ್ ರಾಜ್ ವಿಷಯಗಳ ಕುರಿತುಇಲಾಖೆಯ ಹಿರಿಯ ಅಧಿಕಾರಿಗಳ ಮತ್ತು ವಿಷಯ ತಜ್ಞರು ನೀಡುವ ಮಾಹಿತಿಯನ್ನು ನೋಟ್ ಮಾಡಿಕೊಂಡು ಪಂಚಾಯಿಗಳಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಡಾ.ರಂಗನಾಥ್, ತಾಪಂ ಇಒ ಶಶಿಧರ್, ನರೇಗಾ ಸಹಾಯಕ ನಿರ್ಧೇಶಕ ಸಂತೋಷ್, ಪಿಆರ್ ಡಿ ಸಹಾಯಕ ನಿರ್ದೇಶಕ ಸಂಪತ್, ಹಾಗೂ ಎಲ್ಲಾ ಗ್ರಾಪಂ ಪಿಡಿಒ ಗಳು ಉಪಸ್ಥಿತರಿದ್ದರು
0 Comments