ಚಳ್ಳಕೆರೆ ಜನಧ್ವನಿ ವಾರ್ತೆ 17 ನೂತನ ಗ್ರಾಮ
ಪಂಚಾಯ್ತಿ ಕಟ್ಟಡ ನಿರ್ಮಾಣಕ್ಕೆಂದು ಆನುದಾನ ಬಿಡುಗಡೆಯಾಗಿ ವರ್ಷ ಕಳೆದರೂ ಕಟ್ಟಡಕಾಮಗಾರಿ ಮಾಡದೆ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪಅಧಿಕಾರವದಿಲ್ಲಿ 17-4-2022 ರಂದು 26 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ. ಈ ಅನುದಾನವನ್ನು ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು ಬಿಡುಗಡೆ ಮಾಡುವಂತೆ ಜಿಲ್ಲಾಪಂಚಾಯ್ ಸಿಇಒ ಆದೇಶ ಮಾಡುತ್ತಾರೆ ಇವರ ಆದೇಶದ ಮೇರೆಗೆ ದಿನಾಂಕ6-8-2022 ರಂದು ಗ್ರಾಪಂ ಅಂದಿನ ಅಧ್ಯಕ್ಷೆ ಲಕ್ಷ್ಮಮ್ಮಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರಕ್ಕೆ ನೀಡಲು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುತ್ತಾರೆ ಸಭೆಯ ನಡುವಳಿ ಬರೆಯುತ್ತಾರೆ ಆದರೆ ಅನುದಾನ ಮಾತ್ರ ನಿರ್ಮಿತಿ ಕೇಂದ್ರಕ್ಕೂ ನೀಡದೆ ಕಟ್ಟಡ ನಿರ್ಮಿಸದೆ ಸುಮಾರು 10 ಲಕ್ಷ ರೂ ಗೂ ಅಧಿಕ ಹಣ ಬಿಡಿಸಿ ಬೇರೆ ಉದ್ದೇಶಕ್ಕೆ ಬಿಡಿಸಿ ವರ್ಗ1 ರ ಅನುದಾನ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ . ಇದು ಬೇಲಿಯೇ ಹೊಲ ಎದ್ದು ಮೇಯ್ದಂತಾಗಿದೆ.
*ಅನುದಾನದ ಹೊಳೆ*
ಕೇಂದ್ರ ಹಾಗೂ ರಾಜ್ಯ ಸರಕಾರ ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಸ್ಥಳೀಯ ಪಂಚಾಯತ್‌ಗಳಿಗೆ ಅನುದಾನದ ಹೊಳೆಯನ್ನು ಹರಿಸುತ್ತಿದ್ದರೂ ಗ್ರಾಮಗಳ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
*ಹಳ್ಳಹಿಡಿದ ಸ್ವಚ್ಛ ಭಾರತ್* ಸ್ವಚ್ಚ ಭಾರತ್ ಪರಿಕಲ್ಪನೆಯಡಿ
ಗ್ರಾಮ ಮಟ್ಟದಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ
ಸಾವಯವ ಗೊಬ್ಬರ ಬಳಕೆಗೆ ಉತ್ತೇಜನ
ನೀಡುವುದಲ್ಲದೆ, ವೈಜ್ಞಾನಿಕವಾಗಿ ಕಸ ವಿಲೇವಾರಿ
ಮಾಡುವ ನಿಟ್ಟಿನಲ್ಲಿ ಪ್ರತಿ ಗ್ರಾ.ಪಂ.ಗಳಲ್ಲಿ ಘನ
ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸುವ ಮಹತ್ತರ
ಯೋಜನೆಗೆ ಜನಪ್ರತಿನಿಧಿಗಳಿಂದಲೇ ವಿಘ್ನ
ಎದುರಾಗಿದೆ.
ಸರಕಾರಿ ಗೋಮಾಳದಲ್ಲಿ ನರೇಗಾದಡಿ 10 ಲಕ್ಷ ಹಾಗೂ 15ನೇ ಹಣಕಾಸು
ಯೋಜನೆಯಡಿ ಕೇಂದ್ರವು ಸ್ವಚ್ಛಭಾರತ್ ಅಭಿಯಾನ
ಆರಂಭಿಸಿದೆ. ಇದರಡಿ ಗ್ರಾ.ಪಂ.ಗಳಿಗೆ ತ್ಯಾಜ್ಯ
ವಿಲೇವಾರಿ ಘಟಕ ಸ್ಥಾಪನೆಗೆ ಸರಕಾರಗಳು ಹಣ
ಬಿಡುಗಡೆ ಮಾಡುತ್ತಿವೆ. ಅದರಲ್ಲಿ ಗೋಪನಹಳ್ಳಿಯಲ್ಲಿ
ತ್ಯಾಜ್ಯ ಘಟಕ ನಿರ್ಮಿಸಿ ಸುಮಾರು ಎರಡು ವರ್ಷಗಳು
ಕಳೆದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ
ನಿರ್ಲಕ್ಷ್ಯತೆಯಿಂದ ಮಹತ್ತರ ಯೋಜನೆಗೆ ಎಳ್ಳು
ನೀರು ಬಿಟ್ಟಂತಾಗಿದೆ.
ಗ್ರಾ.ಪಂ.ಸದಸ್ಯರು ಯಾವುದೇ ಸಿವಿಲ್ ಕಾಮಗಾರಿ
ನಡೆಸುವಂತಿಲ್ಲ ಎಂದು ಕಾನೂನು ಹೇಳುತ್ತಿದೆ. ಈ
ಕಾಮಗಾರಿ ಹೊಣೆಯನ್ನು ಅಂದಿನ ಗ್ರಾ.ಪಂ. ಅಧ್ಯಕ್ಷ ಹಾಗೂಉಪಾಧ್ಯಕ್ಷ ಇಬ್ಬರು ವಹಿಸಿದ್ದರು. ಅಧ್ಯಕ್ಷ-ಉಪಾಧ್ಯಕ್ಷರ ಗದ್ದುಗೆಯ ಮುಸುಕಿನ ಜಗಳದಲ್ಲಿ ಘನ ತ್ಯಾಜ್ಯ ಘಟಕಕಾಮಗಾರಿ ಸುಮಾರು ಎರಡು ವರ್ಷಗಳಿಂದಲೂ ಕಾಮಗಾರಿ ಪೂರ್ಣಗೊಳ್ಳದೆ ಅರೆ ಬರೆಯಾಗಿ ನಿಂತಿದೆ.
ನರೇಗಾದಲ್ಲಿ 1.60 ಲಕ್ಷ ರೂ. 15ನೇಹಣಕಾಸು ಯೋಜನೆಯಡಿ 3 ಲಕ್ಷ ಕಾಮಗಾರಿ ಜಿಲ್
ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವರೇ ಕಾದು ನೋಡ ಬೇಕಿದೆ.
ಗ್ರಾಮಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ ದುರುಪಯೋಗ-ಹಳ್ಳ ಹಿಡಿದ ಸ್ವಚ್ಚಭಾರತ ಘನ ತ್ಯಾಜ್ಯ ಘಟಕ ಕಾಮಗಾರಿ..
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments