ಚಳ್ಳಕೆರೆ ಫೆ.14ಆಂದ್ರ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡ ಆರೋಗ್ಯ ಉಪಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ ಮಹಿಳಾ ವೈಸ್ಯರನ್ನು ನೇಮಿಸುವಂತೆ ಗ್ರಾಮಸ್ಥರು ಆಗ್ರಹಿಸಿಧದಾರೆ. ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಗ್ರಾಮ ಚಳ್ಳಕೆರೆ ತಾಲೂಕು ಕೇಂದ್ರದಿಂದ ಸುಮಾರು 40 ಕೀ.ಮೀ ದೂರ ಇದ್ದರೆ ಬೇಡರೆಡ್ಡಿಹಳ್ಳಿ ಗ್ರಾಮ 12 ಕಿ.ಮೀ ದೂರ ವಿದ್ದು
ಗೌರಸಮುದ್ರ ಗ್ರಾಪಂ ವ್ಯಾಪ್ತಿಯಲ್ಲಿ 10
ಸಾವಿರ ಜನಸಂಖ್ಯೆ ಇದ್ದು ಆರೋಗ್ಯ ಕೇಂದ್ರವನ್ನು
ಮೇಲ್ದರ್ಜೆಗೇರಿಸಿ ವೈದ್ಯಕೀಯ ಸೌಲಭ್ಯ ಹೆಚ್ಚಿಸಬೇಕು.
ಇದರಿಂದ ಆಂಧ್ರದ ಗಡಿ ಅಂಚಲ್ಲಿರುವ
ತಿಮಾಪುರ: ಓಬಣ್ಣನಹಳ್ಳಿ, ಕೊತ್ತಾರ ಹಟ್ಟಿ, ಮಲ್ಲ
ಸಮುದ್ರ ದೇವರಹಳ್ಳಿ, ರುದ್ರಮ್ಮನ ಹಳ್ಳಿ, ಸೇರಿ
15ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಈ ಮಾರ್ಗವಾಗಿ ಬಸ್ ಗಳ ಸಂಖ್ಯೆ ಕಡಿಮೆ ಇದ್ದು ಹೆರಿಗೆ ಹಾಗೂ ತುರ್ತು ಚಿಕಿತ್ಸೆಗೆ ಚಳ್ಳಕೆರೆ ಹಾಗೂ ಬೇಡರೆಡ್ಡಿಹಳ್ಳಿಗೆ ಹೊಇಗ ಬೇಕಾದ ಅನಿವಾರ್ತೆ ಇದ್ದು ತುರ್ತು ಚಿಕಿತ್ಸೆ. ಹೆರಿಗೆ ಸಮಯದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.
ಬೇಡರಡ್ಡಿಹಳ್ಳಿಯಲ್ಲಿ ಆರೋಗ್ಯ ಕೇಂದ್ರವಿದ್ದರೂ
ಗೌರಸಮುದ್ರದಿಂದ ದೂರ (12 ಕಿಮೀ) ವಾಗಲಿದೆ.
ಗೌರಸಮುದ್ರದ ಮಾರಮ್ಮ ದೇವಿಯ ದೇಗುಲಕ್ಕೆ
ಬರುವವರೂ ತುರ್ತು ಚಿಕಿತ್ಸೆಗೆ ಬೇಡರಡ್ಡಿಹಳ್ಳಿಗೆ
ತೆರಳಬೇಕು, ಈ ರಸ್ತೆಯಲ್ಲಿ ಗರ್ಭಿಣಿ, ಬಾಣಂತಿಯರು,
ಮಕ್ಕಳು, ಹಿರಿಯರು ಸಂಚರಿಸುವಂತಿಲ್ಲ. ಮೇಲಾಗಿ
ಬಸ್ ಸೌಕರ್ಯದ ಕೊರತೆ ಇದೆ ಆದ್ದರಿಂದ
ಗೌರಸಮುದ್ರದ ಉಪ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಜತೆ ಮಹಿಳಾ ವೈದ್ಯರ ನೇಮಕಮಾಡುವಂತೆ ಗೌರಸಮುದ್ರ ಗ್ರಾಮಸ್ಥರು ಸರಕಾರಕ್ಕೆ ಒತ್ತಾಯಿಸಿದ್ದಾರೆ
ಗೌರಸಮುದ್ರ ಗ್ರಾಮದ ಉಪಾರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ವೈದ್ಯರನ್ನು ನೇಮಿಸುವಂತೆ ಗ್ರಾಮಸ್ಥರ ಆಗ್ರಹ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments