ಹೌದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿರುವ ಗ್ರಾಮದೇವತೆ ಯರಬಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಶನಿವಾರ ತಡ ರಾತ್ರಿ ಇಬ್ಬರು ಕಳ್ಳರು ದೇವಸ್ಥಾನದಲ್ಲಿರುವ ಹುಂಡಿಯನ್ನು ಕಳವು ಮಾಡಲು ಯತ್ನಿಸಿದಾಗ ನಾಯಿಗಳ ಬೊಗಳಿನ ಶಬ್ದ ಕೇಳಿ ಪಕ್ಕದ ಹೋಟೆಲ್ ಮಾಲಿಕ ಎದ್ದು ಯಾರು ಎಂದು ಕೂಗಿದ ತಕ್ಷಣ ಇಬ್ಬರು ಓಡಿ ಹೋಗಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಕಲ್ಲಿನ ಕಂಬಂಕ್ಕೆ ಹುಂಡಿಯ ಡಂಬಿಯನ್ನು ಕಬ್ಬಿಣ ಪಟ್ಟಿಯಿಂದ ವೆಲ್ಡಿಂಗ್ ಮಾಡಲಾಗಿತ್ತು ಒಂದು ಪಟ್ಟಿಯನ್ನು ಕತ್ತರಿಸಿದ್ದಾರೆ ಮೊತ್ತೊಂದು ಪಟ್ಟಿಯನ್ನು ಕತ್ತರಿಸಲು ವಿಫಲರಾಗಿ ಓಡಿ ಹೋಗಿದ್ದಾರೆ.
2019 ನೇ ಸಾಲಿನಲ್ಲಿ ಕಳವು.
ಇದೇ ದೇವಾಸ್ಥಾನದಲ್ಲಿ 16-2.2019 ರ ಶನಿವಾರ ತಡರಾತ್ರಿ ಹುಂಡಿ ಕಳವು ಮಾಡಿ ಗ್ರಾಮದ ಸ್ಮಶಾನದ ಸೇತುವೆ ಕೆಳಗೆ ಹೊಡೆದು ಪರಾರಿಯಾಗಿರುವುದು ಮೂರುದಿನಗಳ ನಂತರ ಪತ್ತೆಯಾಗಿದ್ದು ಅದರಲ್ಲಿ ಸಮಾರು 40 ಸಾವಿರ ರೂ ಸಂಗ್ರಹವಾಗಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು ಈ ಬಾರಿ ಹುಂಡಿ ಕಳವು ವಿಫಲವಾಗಿದೆ.
ಹುಂಡಿ ಕಳವಾಗಿರುವ ವಿಷಯ ತಿಳಿದು ಗ್ರಾಮಸ್ಥರು ವೀಕ್ಷಣೆ ಮಾಡಲು ಮುಗಿಬಿದ್ದಿದ್ದರು.
0 Comments