ಗೃಹಲಕ್ಷ್ಮೀ ಅರ್ಜಿ ನೋಂದಣಿ ಲಾಗಿನ್ ಐಡಿ ದುರ್ಬಬಳಕೆ-ಜಿಲ್ಲಾಧಿಕಾರಿ ದಿವ್ಯಪ್ರಭು…

by | 29/07/23 | Uncategorized

ಹೊಸದುರ್ಗ ಹೊಸದುರ್ಗ ಪಟ್ಟಣದಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ನೋಂದಣಿಗೆ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಕೇಂದ್ರಗಳ ಲಾಗಿನ್ ಐಡಿ ದುರ್ಬಬಳಕೆ ಮಾಡಿಕೊಂಡು, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆಯುತ್ತಿರುವ ಕಂಪ್ಯೂಟರ್ ಸೆಂಟರ್‍ಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದಕ್ಕೆ ಸಹಕರಿಸಿದವರ ಲಾಗಿನ್ ಐಡಿಗಳನ್ನು ರದ್ದು ಮಾಡಿಲಾಗಿದೆ.
ಈ ಕುರಿತು ಪತ್ರಿಕೆಗಳಲ್ಲಿ ವರದಿ ಹಾಗೂ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನಲೆಯಲ್ಲಿ, ಹೊಸದುರ್ಗ ಪುರಸಭೆ ಮುಖ್ಯ ಅಧಿಕಾರಿ, ಸಿಡಿಪಿಓ, ಪೊಲೀಸ್, ಹೊಸದುರ್ಗ ಟೌನ್ ಗ್ರಾಮ ಆಡಳಿತ ಅಧಿಕಾರಿ ಹಾಗೂ ಗ್ರಾಮ ಸಹಾಯಕರ ತಂಡ ಹೊಸದುರ್ಗ ಪಟ್ಟಣದ ಖಾಸಗಿ ಕಂಪ್ಯೂಟರ್ ಸೆಂಟರ್‍ಗಳ ಭೇಟಿ ನೀಡಿ ಪರಿಶೀಲನೆ ನಡೆಸಿತು.
ದಾಳಿಯ ವೇಳೆ ಹೊಸದರ್ಗು ಪಟ್ಟಣದ ಜೈನ್ ದೇವಸ್ಥಾನ ಬಳಿಯ ಜನಸ್ನೇಹಿ ಕಂಪ್ಯೂಟರ್, ಎಸ್.ಜೆ.ಎಂ ಬಡಾವಣೆಯ ಮಾರುತಿ ನರ್ಸಿಂಗ್ ಹೋಂ ಹತ್ತಿರದ ಸ್ಪೂರ್ತಿ ಆನ್‍ಲೈನ್ ಸೆಂಟರ್, ಅಜ್ಜಂಪುರ ರಸ್ತೆಯ ವೈಷ್ಣವಿ ಕಂಪ್ಯೂಟರ್ ಸೆಂಟರ್‍ಗಳಲ್ಲಿ ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆ ನೊಂದಣಿ ಮಾಡಿ ಹಣ ಪಡೆಯುತ್ತಿರುವುದು ಕಂಡುಬಂತು. ತಕ್ಷಣವೇ ಕ್ರಮ ಕೈಗೊಂಡು ಕಂಪ್ಯೂಟರ್ ಸೆಂಟರ್ ಮುಟ್ಟುಗೋಲು ಹಾಕಿ, ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ದಾಳಿ ಮಾಹಿತಿ ಗೊತ್ತಾದ ಪಟ್ಟಣದ ಹಲವು ಕಂಪ್ಯೂಟರ್ ಸೆಂಟರ್ ಮಾಲಿಕರು ಅಂಗಡಿ ಮುಚ್ಚಿ, ಪರಾರಿಯಾಗಿದ್ದಾರೆ. ಈ ಸೆಂಟರ್‍ಗಳನ್ನು ಸೀಜ್ ಮಾಡಲಾಗಿದೆ.
ಅಕ್ರಮವಾಗಿ ಲಾಗಿನ್ ಐಡಿ ಬಳಕೆ : ಈ ಪ್ರಕರಣಗಳಲ್ಲಿ ಸರ್ಕಾರದಿಂದ ಲಾಗಿನ್ ಐಡಿ ಪಡೆದ ವ್ಯಕ್ತಿಗಳು ಖಾಸಗಿ ಕಂಪ್ಯೂಟರ್ ಸೆಂಟರ್‍ಗಳಿಗೆ ಲಾಗಿನ್ ಐಡಿ ನೀಡಿ ದ್ರೋಹ ಬಗೆದಿದ್ದಾರೆ. ಇದು ಅಪರಾಧ ಕೃತ್ಯವಾಗಿದೆ. ಜನಸ್ನೇಹಿ ಕಂಪ್ಯೂಟರ್ ಸೆಂಟರ್‍ನಲ್ಲಿ ಕಬ್ಬಳ ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ, ಸ್ಪೂರ್ತಿ ಆನ್‍ಲೈನ್ ಸೆಂಟರ್‍ನಲ್ಲಿ ಆನಿವಾಳ ಗ್ರಾಮ ಒನ್ ಕೇಂದ್ರ ಲಾಗಿನ್ ಐಡಿ ಹಾಗೂ ವೈಷ್ಣವಿ ಕಂಪ್ಯೂಟರ್ ಸೆಂಟರ್‍ನಲ್ಲಿ ದೊಡ್ಡಘಟ್ಟ ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ ಬಳಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಪೊಲೀಸ್ ದೂರು ದಾಖಲಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಗ್ರಾಮ್ ಒನ್ ಕೇಂದ್ರಗಳ ನೋಂದಣಿ ಲಾಗಿನ್ ಐಡಿಯನ್ನು ನಿರ್ಬಂಧಿಸಿ, ಬ್ಲಾಕ್ ಲೀಸ್ಟ್‍ಗೆ ಸೇರಿಸಲಾಗಿದೆ.
ಈ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಗೃಹಲಕ್ಷ್ಮೀ ಯೋಜನೆ ನೊಂದಣಿಗೆ ಹಣ ಪಡೆದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ನೊಂದಣಿ ಸುಗಮವಾಗಿ ನೆರವೇರುತ್ತಿದೆ. ಗ್ರಾಮಗಳಲ್ಲಿ ಗ್ರಾಮ ಒನ್, ನಗರ ಪ್ರದೇಶದಲ್ಲಿ ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ನೊಂದಣಿ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳೂವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Latest News >>

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಸಹಾಯವಾಣಿ ಆರಂಭ

ಚಿತ್ರದುರ್ಗ ಮೇ.30: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಶಿಕ್ಷಕರು ಮತ ಚಲಾಯಿಸಲು ಮತದಾರರಿಗೆ ಸಹಾಯ ಮಾಡಲು ಮತದಾರರ...

ಜೆಜೆಎಂ ಕಾಮಗಾರಿ ಪರಿಶೀಲಿಸಿದ ಜಿ.ಪಂ ಸಿಇಒ ಸೋಮಶೇಖರ್

ಮೊಳಕಾಲ್ಮೂರು ಮೇ.30: ಮೊಳಕಾಲ್ಮರು ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಂಡಾಪುರ ಗ್ರಾಮ ಹಾಗೂ ಅಶೋಕ ಸಿದ್ದಾಪುರ ಗ್ರಾಮ...

ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ: ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತರ್

ಚಳ್ಳಕೆರೆ: ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಅವರ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ...

ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಕಾರ್ತಿಕ್.

ಚಳ್ಳಕೆರೆ ಜನಧ್ವನಿಮೆ30 ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು...

ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್.

ಚಳ್ಳಕೆರೆ ಮೇ.30 ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್...

ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಎಂ.ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆ.

ನಾಯಕನಹಟ್ಟಿ::ಮೇ28. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜಿನಾಮೆಯಿಂದ ತೆರವಾಗಿದ್ದ ಉಪಧ್ಯಾಕ್ಷ ಸ್ಥಾನಕ್ಕೆ ಮಂಗಳವಾರ ನಡೆದ...

ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಸಂಪತ್ತನ್ನು ಕೆಲವೇ ಶತ ಕೋಟ್ಯಾಧಿಪತಿಗಳಿಗೆ ಧಾರೆ ಎರೆದಿದೆ ಸಿ.ವೈ. ಶಿವರುದ್ರಪ್ಪ

ಚಳ್ಳಕೆರೆ ಮೋದಿ ಸರ್ಕಾರ ದೇಶದ ಕಾನೂನುಗಳನ್ನು ಕಾರ್ಪೊರಿಕ್ ಸಾಗರ ಪ ತಿದ್ದುಪಡಿ ಮಾಡಿ, ಅವುಗಳ ಲಕ್ಷಾಂತರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ...

ಯುಪಿ ಯಿಂದ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ ಪ್ರಾರಂಭಿಸಲು ಪರವಾನಗಿ ನೀಡದಿರಲು ಮನವಿ

ಹಿರಿಯೂರು : ಉತ್ತರಪ್ರದೇಶ ರಾಜ್ಯದಿಂದ ಹಿರಿಯೂರು ನಗರಕ್ಕೆ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ...

ವಿದ್ಯುತ್ ತಂತಿ ಹರಿದು ಬಿದ್ದು ಎಮ್ಮೆ ಸ್ಥಳದಲ್ಲೇ ಸಾವು.

ಚಳ್ಳಕೆರೆ ಮೇ28 ಹಳ್ಳದಲ್ಲಿ ಮೇಯುತ್ತಿದ್ದ ಎಮ್ನೆ ಮೇಲೆ ವಿದ್ಯುತ್ ತಂತಿ ಹರಿದ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು...

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page