ಚಿತ್ರದುರ್ಗ ಫೆ.13:
ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ ವತಿಯಿಂದ 2022-23ನೇ ಸಾಲಿನಲ್ಲಿ ಗಿರಿಜನ ಉಪ ಯೋಜನೆಯಡಿ ಹಾಗೂ ವಿಶೇಷ ಘಟಕ ಯೋಜನೆಯಡಿ ಗುರುಶಿಷ್ಯ ಪರಂಪರೆಯಲ್ಲಿ ಅಕಾಡೆಮಿ ವ್ಯಾಪ್ತಿಯೊಳಗೆ ಬರುವ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ, (ಭರತನಾಟ್ಯ, ಕಥಕ್, ಕೂಚಿಪುಡಿ,) ಕಥಾಕೀರ್ತನ ಮತ್ತು ಗಮಕ ಕ್ಷೇತ್ರಗಳಲ್ಲಿ ಯುವಕಲಾವಿದರಲ್ಲಿ ಕಲಾನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ಪ್ರತಿಷ್ಠಿತ ಸಂಸ್ಥೆಯ ಗುರುಗಳ ಮೂಲಕ 5 ತಿಂಗಳು ಸಂಗೀತ ನೃತ್ಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಸಂಬಂಧ ಅರ್ಜಿ ಅಹ್ವಾನಿಸಲಾಗಿದೆ. ಫೆ.28 ಅರ್ಜಿ ಸಲ್ಲಿಸಲು ಕೊನೆಯ ದಿನ.
ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳ 16 ರಿಂದ 20 ವರ್ಷ ಒಳಗಿರಬೇಕು. ಗುರುಗಳ ಬಳಿ ಕನಿಷ್ಠ 2 ವರ್ಷ ಅಭ್ಯಾಸ ಮಾಡಿರಬೇಕು. ಗುರುಗಳ ಪ್ರಮಾಣ ಪತ್ರ ಲಗತ್ತಿಸಬೇಕು. ಓದು ಬರಹ ಬಲ್ಲವರಾಗಿರಬೇಕು. ಕಲಿಯುವ ಆಸಕ್ತಿಯಿದ್ದು, ಹೆಚ್ಚಿನ ಅಭ್ಯಾಸ ಮಾಡುವ ಉತ್ಸುಕತೆ ಇರಬೇಕು.
ಪ್ರತಿಷ್ಠಿತ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಕನಿಷ್ಟ 10 ವರ್ಷಗಳ ಸೇವೆ ಸಲ್ಲಿಸಿರಬೇಕು. ಸಂಸ್ಥೆ ನೋಂದಣಿ ಹಾಗೂ ನವೀಕರಣ ಪತ್ರ ಲಗತ್ತಿಸಬೇಕು.
ತರಬೇತಿ ಶಿಬಿರದಲ್ಲಿ ಭಾಗವಹಿಸಲು ಶಿಬಿರಾರ್ಥಿಗಳು ಹಾಗೂ ಪ್ರತಿಷ್ಠಿತ ಸಂಸ್ಥೆಗಳ ಗುರುಗಳು ನಿಗದಿತ ಅರ್ಜಿಯನ್ನು ಅಕಾಡೆಮಿ ಕಚೇರಿ ವೇಳೆಯಲ್ಲಿ ಅರ್ಜಿ ಪಡೆಯಬಹುದು ಹಾಗೂ ಅಕಾಡೆಮಿ ಜಾಲತಾಣ https://sangeetanrityaacademy.karnataka.gov.xn--in-bvh3c2bt0hsa7bd/ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬೇರೆ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಉಚಿತವಾಗಿ ಅರ್ಜಿ ಪಡೆಯಬಹುದಾಗಿದೆ. ಭರ್ತಿಮಾಡಿದ ಅರ್ಜಿಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಬೆಂಗಳೂರು-2 ಇಲ್ಲಿಗೆ ಸಲ್ಲಿಸಬೇಕು,
ಬಂದ ಅರ್ಜಿಗಳನ್ನಾಧರಿಸಿ ಅಕಾಡೆಮಿ ವತಿಯಿಂದ ಪ್ರತಿಷ್ಠಿತ ಸಂಸ್ಥೆಯ ಗುರುಗಳನ್ನು ಆಯ್ಕೆ ಮಾಡಿ, ಗುರುಗಳಿಗೆ ಗೌರವ ಧನ ಹಾಗೂ ಶಿಬಿರಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಅಕಾಡೆಮಿ ವತಿಯಿಂದ ನೀಡಲಾಗುವುದು. ಅಕಾಡೆಮಿ ತೀರ್ಮಾನವೇ ಅಂತಿಮವಾದುದ್ದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ.ನೀಲಮ್ಮ ತಿಳಿಸಿದ್ದಾರೆ.
ಗುರುಶಿಷ್ಯ ಪರಂಪರೆ ತರಬೇತಿ ಶಿಬಿರಕ್ಕೆ ಅರ್ಜಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments