ಚಳ್ಳಕೆರೆ ಜಮಧ್ವನಿ ವಾರ್ತೆ ಫೆ.14.ನೆನೆಸಿದ ಕಾಳುಗಳನ್ನು ಬೇಯಿಸಿ ಮಾಡಿದ ಪದಾರ್ಥಕ್ಕೆ ಉಸುಳಿ, ಹುಸಲಿ, ಗುಗ್ಗರಿ ಅನ್ನುತ್ತಾರೆ. ತಯಾರಿಸಲು ಸುಲಭ, ತಿನ್ನಲು ರುಚಿಕರ ಅನ್ನಬಹುದಾದ ಈ ಖಾದ್ಯ, ಆರೋಗ್ಯಕ್ಕೂ ಒಳ್ಳೆಯದು. ಹಬ್ಬ-ಹರಿದಿನಗಳ ಅಡುಗೆಯಲ್ಲಿ ಕಾಯಂ ಜಾಗ ಪಡೆದಿರುವ ಗುಗ್ಗರಿಯನ್ನು_ ಸುಗ್ಗಿ ಕಾಲದಲ್ಲಿ ದೇವಸ್ಥಾನಗಳಲ್ಲಿ ಗುಗ್ಗರಿ ಹಬ್ಬವನ್ನು ಪೂರ್ವಜರ ಕಾಲದಿಂದಲೂ ಆಚರಣೆ ಮಾಡಲಾಗುತ್ಯಿದೆ ಎಂದು ಜಡೆಎಸ್ ಪಕ್ಷದ ಆಕಾಂಕ್ಷಿ ಎಂ.ರವೀಶ್ ಕಾರ್ ಹೇಳಿದರು. ಚಳ್ಳಕೆರೆ ನಗರದ 9 ನೇ ವಾರ್ಡ್ ನಲ್ಲಿರುವ ಉಡುಸಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಗುಗ್ಗರಿ ಹಬ್ಬದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಬಾರಿ ಜೆಡಿಎಸ್ ಪಕ್ಷಕ್ಕೆ ಒಳ್ಳೆ ಭವಿಷ್ಯವಿದ್ದು ಜನರು ಬೆಂಬಲತೋರಿಸುತ್ತಿದ್ದಾರೆ ಕುಮಾರಸ್ವಾಮಿ ಮುಖ್ಯಮಂತ್ರಿ ಅವದಿಯಲ್ಲಿ ಸಾಲಾ ಮನ್ನ ಯೋಜನೆ ಹಾಗೂ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಜೆಡಿಎಸ್ ಪಕ್ಷಸಿದ್ದಾಂತ ಮೆಚ್ಚಿ ವಿವಿಧ ಪಕ್ಷದ ಮುಖಂಡು.ಕಾರ್ಯಕರ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷವನ್ನು ಸೇರುವ ಮೂಲಕ ಆನೆ ಬಲ ಬಂತಾಗಿದೆ ಈ ಬಾರಿ ಚಳ್ಳಕೆರೆ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗೆಲವು ಸಾಧಿಸಲಿದೆ ಎಂದು ನುಡಿದರು. ಪೂಜಾ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್ ತಾಲೂಕು ಅಧ್ಯಕ್ಷರು ಪಿ.ತಿಪೇ ಸ್ವಾಮಿ ನಗರಸಭಾ ಸದಸ್ಯರಾದ ವಿ.ವೈಪ್ರಮೋದ್, ಸಿ.ಶ್ರೀನಿವಾಸ್. ಮುಖಂಡರಾದ ಎಂ.ಎಸ್.ಬಾಲಾಜಿ, ಬಾಲು, ಸಂತೋಷ್,ಕಲ್ಯಾಣಿ,ಸನತ್, ಅಯ್ಯಣ ಇತರರು ಭಾಗವಹಿಸಿದ್ದರು.
ಗುಗ್ಗರಿತಿನ್ನಲು ರುಚಿಕರ ಆರೋಗ್ಯಕ್ಕೂ ಒಳ್ಳೆಯದು ಸುಗ್ಗಿ ಕಾಲದಲ್ಲಿ ಗುಗ್ಗರಿ ಹಬ್ಬ ಆಚರಣೆ ಎಂ.ರವೀಶ್ ಕಯಮಾರ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments