ಗರ್ಭಿಣಿಯರಿಗೆ ಆಸ್ಪತ್ರೆಗೆ ಹೋಗಲು ಉಚಿತ ಆಟೋ ಸೇವೆ ಒದಿಗಿಸಲು ಮುಂದಾಗಿ ಡಾ.ವಿಷ್ಟುವರ್ಧನ ಸೇನೆ

by | 23/02/23 | ಆರೋಗ್ಯ, ಸಾಮಾಜಿಕ


ಚಳ್ಳಕೆರೆ ಜನಧ್ವನಿ ವಾರ್ತೆ ಫೆ.23.
ಮನೆ ಹಾಗೂ ಬಸ್ ನಿಲ್ದಾಣದಿಂದ ಹೆರಿಗೆಗೆ ಆಸ್ಪತ್ರೆಗೆ ಹೋಗಲು ಗರ್ಭಿಣಿ ಮಹಿಳೆಯರಿಗೆ ಉಚಿತ ಆಟೋ ಸೇವೆಯನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಹೌದು ಇದು ಚಳ್ಳಕೆರೆ ನಗರದ ಡಾಕ್ಟರ್ ವಿಷ್ಣುವರ್ಧನ್ ಸ್ವರ್ಣಾರ್ಥ ಆಟೋ ಚಾಲಕರು ಗರ್ಭಿಣಿ ಮಹಿಳೆಯರಿಗೆ ಉಚಿತ ಆಟೋ ಸೇವೆಯನ್ನು ಒದಗಿಸಲು ಮುಂದಾಗಿದ್ದಾರೆ.
ಹೆರೆಗೆ ನೋವು ಕಾಣಿಸಿಕೊಂಡಾಗ ಸಕಾಲಕ್ಕೆ ತುರ್ತು ವಾಹನ ಅಥವಾ ಯಾವದೇ ವಾಹನ ಸೌಕರ್ಯ ಲಭ್ಯವಾಗದೆ ಇದ್ದಾಗ ತಾಯಿ ಮಗುವಿಗೆ ಅಪಾಯವಾಗುವ ಸಾಧ್ಯತೆಯನ್ನು ತಡಗಟ್ಟುವ ನಿಟ್ಟಿನಲ್ಲಿ ಡಾ.ವಿಷ್ಟುರ್ವರ್ಧನ ಸೇನೆ ಆಟೋ ಚಾಲಕರಿಂದ ಗರ್ಭೀಣಿಯರಿಗೆ ಉಚಿತ ಸೇವೆ ಮಾಡಲು ಮುಂದಾಗಿದ್ದಾರೆ.
ಪಿಎಸ್‌ಐ ಸತೀನಾಯ್ಕ ಆಟೋ ಉಚಿತ ಸೇವೆಗೆ ಚಾಲನೆ ನೀಡಿ ನಗರ ಪೊಲೀಸ್ ಠಾಣೆಯಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರ ಸಂಘದ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಉಚಿತ ಆಟೋ ಸೇವೆಯನ್ನು ಡಾಕ್ಟರ್ ವಿಷ್ಣುವರ್ಧನ್ ರವರು ಒಬ್ಬ ಮೇರು ನಟ ಸಾಹಸ ಸಿಂಹ ವರದ ನಾಯಕ ಇನ್ನು ಹಲವಾರು ಬಿರುದುಗಳನ್ನು ಪಡೆದು ಕರ್ನಾಟಕದ ಹೆಮ್ಮೆಯ ಪುತ್ರನಾಗಿದ್ದಾರೆ.
ಇವರು ನಟಿಸಿರುವ ಎಲ್ಲಾ ಚಿತ್ರಗಳಲ್ಲಿ ಸಾಮಾಜಿಕ ನೈಪುಣ್ಯತೆ ಹೊಂದಿದ್ದು ಸಮಾಜಕ್ಕೆ ನೇರ ಸಂದೇಶವನ್ನು ಕೊಡುವುದರ ಮೂಲಕ ತಮ್ಮ ಚಾಪನ್ನು ಮೂಡಿಸಿದ್ದಾರೆ. ಇವರ ಮೊದಲನೇ ಚಿತ್ರ ನಾಗರಹಾವು ಚಿತ್ರದಲ್ಲಿ ಒಂದೇ ಹಾಡಿನಲ್ಲಿ ಚಿತ್ರದುರ್ಗ ಕೋಟೆಯ ಇತಿಹಾಸವನ್ನು ಸೃಷ್ಟಿಸಿದ ಮಹಾನ್ ನಾಯಕ ಹಾಗೂ ಕೃಷ್ಣ ರುಕ್ಮಿಣಿ ಚಿತ್ರದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಎತ್ತಿ ಹಿಡಿದು ಕರ್ನಾಟಕದ ಮೇಲು ನಟ ಎಂದು ಹೆಸರುವಾಸಿಯಾಗಿದ್ದಾರೆ.
ಇಂತಹ ಮಹನೀಯರ ಆದರ್ಶಗಳನ್ನು ನಾವು ನೀವೆಲ್ಲ ಪಾಲಿಸಿಕೊಂಡು ಬಂದಾಗ ಮಾತ್ರ ಕನ್ನಡ ನೆಲ ಜಲ ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ, ಅಲ್ಲದೆ ಇಂದಿನ ದಿನಮಾನಗಳಲ್ಲಿ ಆಟೋ ಚಾಲಕರು ತಮ್ಮ ಸಮವಸ್ತ್ರ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಳ್ಳಬೇಕು ಹಾಗೂ ದಿನೇ ದಿನೇ ನಗರ ಅಭಿವೃದ್ಧಿ ಆಗಿರುವುದರಿಂದ ಟ್ರಾಫಿಕ್ ಜಾಮ್ ಅನ್ನು ತಪ್ಪಿಸಲು ನೀವೆಲ್ಲ ಸಹಕಾರಿಯಾಗಬೇಕು ಎಂದರು.
ಈ ವೇಳೆ ವಿಷ್ಣು ಸೇನೆ ಅಧ್ಯಕ್ಷ ರಾಘವೇಂದ್ರ ರವಿ ಕರಣ ಬೆಟ್ಟಪ್ಪ ಕೃಷ್ಣ ಅಬ್ಜಲ್ ಪಾಷಾ ಕೃಷ್ಣ ಉಪ್ಪಾರ ರಂಜಿತ್ ಕುಮಾರ್ ರಾಮಾಚಾರಿ ರಂಜಿತ್ ಬಸವರಾಜ್ ಮಧು ಪ್ರಕಾಶ್ ಇನ್ನು ಅನೇಕ ವಿಷ್ಣುಸೇನಾ ಆಟೋ ಚಾಲಕರು ಹಾಜರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *