ಹಿರಿಯೂರು :
ಗ್ರಾಮಾಂತರ ಪ್ರದೇಶದ ಮಕ್ಕಳು ಶಿಕ್ಷಣ ಪಡೆಯಲು ಸರ್ಕಾರ ಒದಗಿಸುವ ಅನುದಾನ ಮತ್ತು ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಲು ಪೋಷಕರು ಶಾಲೆಗೆ ಆಗಾಗ್ಗೆ ಬಂದು ಶಿಕ್ಷಕರೊಂದಿಗೆ ತಮ್ಮ ಮಗುವಿನ ಶಿಕ್ಷಣದ ಪ್ರಗತಿ, ಶಾಲೆಯ ಅಭಿವೃದ್ಧಿ , ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಬೇಕು ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ ಹೇಳಿದರು.
ತಾಲ್ಲೂಕಿನ ಕಸವನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾವುಗಳು ಶಾಲೆಗೆ ಬರದಿದ್ದಲ್ಲಿ ಶಿಕ್ಷಕರು ಗಂಟೆ ಹೊಡಿ, ಸಂಬಳ ತೆಗೆದುಕೊ, ಎನ್ನುವ ಸೋತ್ರಕ್ಕೆ ಗಂಟು ಬೀಳುತ್ತಾರೆ ಆದ್ದರಿಂದ ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಾವುಗಳು ಯಾವುದೇ ಕಾರಣಕ್ಕೂ ನಿರಾಸಕ್ತಿ ಮತ್ತು ನಿರ್ಲಕ್ಷ ವಹಿಸಬಾರದು. ಇದು ನಮ್ಮ ಶಾಲೆ, ನಮ್ಮ ಮಕ್ಕಳ ಶಾಲೆ, ಒಂದು ಸಮ- ಸಮಾಜವನ್ನು ಕಟ್ಟಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಲೇಬೇಕು. ಆ ನಿಟ್ಟಿನಲ್ಲಿ ಪೋಷಕರು ಶಾಲೆಗೆ ಬರಲೇಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಹಾಗೂ ಶಿಕ್ಷಕರಾದ ಮುತ್ತುರಾಜ್ ಅವರು ಶಾಲೆಯ ಅಭಿವೃದ್ಧಿ ಬಗ್ಗೆ ಪೋಷಕರ ಪಾತ್ರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಶ್ರೀನಿವಾಸ್, ಮುಖಂಡ ಆರ್.ಪ್ರಕಾಶ್, ಭಕ್ತಪ್ರಹ್ಲಾದ, ಅಂಗನವಾಡಿ ಶಿಕ್ಷಕಿ ಮಹಾಲಕ್ಷ್ಮಿ ಇತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ರಂಗನಾಥ್ ಸ್ವಾಗತಿಸಿದರು. ಕೊನೆಯಲ್ಲಿ ಸಹ ಶಿಕ್ಷಕ ಬಸವರಾಜ್ ವಂದನಾರ್ಪಣೆ ಮಾಡಿದರು. ಗ್ರಾಮದ ಪೋಷಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಗಂಟೆ ಹೊಡಿ, ಸಂಬಳ ತೆಗೆದುಕೊ ಎನ್ನುವ ಸೂತ್ರ ತಪ್ಪಿಸಬೇಕೆಂದರೆ ಪೋಷಕರು ಶಾಲೆಗೆ ಬರಬೇಕು ಸಾಮಾಜಿಕ ಕಾರ್ಯಕರ್ತ : ಕಸವನಹಳ್ಳಿರಮೇಶ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments