ಖಾಯಂ ಪಿಡಿಓ ನೇಮಕ ಮಾಡದಿದ್ದರೆ ಧರಣಿ ನಡೆಸವದಾಗಿ ತಳಕು ಗ್ರಾಪಂ ಸದಸ್ಯರ ಆಗ್ರಹ.

by | 21/11/23 | ಜನಧ್ವನಿ


ಚಳ್ಳಕೆರೆ ನ.21 ಖಾಯಂ ಪಿಡಿಒ ಇಲ್ಲದೆ ಗ್ರಾಪಂ ಅಭಿವೃದ್ಧಿ ಕುಂಠಿತವಾಗಿದ್ದು ಕೂಡಲೆ ಮೂಲ ಪಿಡಿಒ ಹಾಕದಿದ್ದರೆ ಹೋರಾಟ ಮಾಡುವುದಾಗಿ ಗ್ರಾಪಂಸದಸ್ಯರು ಆಗ್ರಹಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಕೇಂದ್ರಸ್ಥಳದಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯ ಪಂಚಾಯತ್ ಅಭಿವೃದ್ಧಿ ಕಾರಿ ಸುಮಾರು ವರ್ಷಗಳಿಂದ ಬೇರೆ ಕಡೆ ನಿಯೋಜನೆಗೊಂಡಿದ್ದು ಕಚೇರಿಯಲ್ಲಿ ಪಿಡಿಒಗಳನ್ನು ಪದೇ ಪದೇ ವರ್ಗಾವಣೆ ಮಾಡುವುದರಿಂದ ಯಾವದೇ ಅಭಿವೃದ್ಧಿಕಾಮಗಾರಿಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಗ್ರಾಪಂ ಸದಸ್ಯ ಕರಿಂಸಾಬ್, ಮಾತನಾಡಿ ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 4 ಹೋಬಳಿ ಮುಖ್ಯ ಕೇಂದ್ರವಾಗಿದ್ದು, 23 ಸದಸ್ಯರನ್ನು ಹೊಂದಿದೆ. 5 ಹಳ್ಳಿಗಳಿಂದ ಕೂಡಿದ ಪಂಚಾಯಿತಿಗೆ 4 ರಿಂದ 5 ಮುಜರೆ ಗ್ರಾಮಗಳು ಸೇರಿ 25 ಗ್ರಾಮಗಳಿವೆ.
ಈ ಪಂಚಾಯಿತಿಯಲ್ಲಿ ಎ ಗ್ರೇಡ್ ಕಾರ್ಯದರ್ಶಿಗಳು ವಾರದಲ್ಲಿ 3 ದಿನ ಮಾತ್ರ ಕೆಲಸಕ್ಕೆ ಬರುತ್ತಾರೆ. ಇದರಿಂದಾಗಿ ಗ್ರಾಮದ ಅಭಿವೃದ್ಧಿಯಾಗುತ್ತಿಲ್ಲ. 45 ಸಾವಿರ ಜನಸಂಖ್ಯೆ ಹೊಂದಿರುವ ಪಂಚಾಯಿತಿಯಲ್ಲಿ ಖಾಯಂ ಪಿಡಿಓ ಇಲ್ಲ. ಇದರಿಂದ ತುಂಬಾ
ತೊಂದರೆಯಾಗಿದೆ ಎಂದು ದೂರಿದರು. ತಳಕು ಪಂಚಾಯಿತಿ ಮೂಲಕ ಪಿಡಿಓ ಸುಮಾರು 32 ತಿಂಗಳುಗಳಿಂದ ವೇತನವನ್ನು ಮಾತ್ರ ಪಡೆಯುತ್ತಿದ್ದು ಕೆಲಸ ಮಾಡುತ್ತಿಲ್ಲ. ಅಲ್ಲದೆ ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಪಂಚಾಯಿತಿ ಅಸ್ತಿತ್ವಕ್ಕೆ ಬಂದು 32 ತಿಂಗಳಾಗಿದ್ದು, ಇದುವರೆವಿಗೂ 9 ಜನ ಪಿಡಿಓಗಳು ಬಂದು ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಖಾಯಂ ಪಿಡಿಓರನ್ನು ಪಂಚಾಯಿತಿಗೆ
ನೀಡುವಂತೆ ಜಿ.ಪಂ. ಸಿಇಓ ಮತ್ತು ತಾ.ಪಂ. ಇಓರವರಿಗೆ ಮನವಿ ಮಾಡಲಾಗುತ್ತಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರೀಂಸಾಬ್ ಇದುವರೆವಿಗೂ ಆರೋಪಿಸಿದರು.ತಕ್ಷಣ ಪಿಡಿಓ ನೇಮಕ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜಿ.ಪಂ ಎದುರು ಗ್ರಾಮ ಪಂಚಾಯಿತಿಯ ಸದಸ್ಯರೆಲ್ಲಾ ಸೇರಿ ಅನಿರ್ಧಿಷ್ಟ ಕಾಲದವರೆಗೆ ಧರಣಿ
ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ತಳಕು ಪಂಚಾಯಿತಿ ಸದಸ್ಯರಾದ ಲಕ್ಷ್ಮೀ, ಮಾರಯ್ಯ, ವಾಣಿಬಾಯಿ, ಭಾಗ್ಯಮ್ಮ, ಬಿ. ತಿಪ್ಪೇಸ್ವಾಮಿ, ಶಾಮಂತಕುಮಾರ್ ಭಾಗವಹಿಸಿದ್ದರು.

ಹೆಸರೇಳಲು ಇಚ್ಚೆ ಪಡೆದ ಸದಸ್ಯರೊಬ್ಬರು ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿ ಗ್ರಾಪಂ ಕಚೇರಿಯಲ್ಲಿ ಪ್ರಭಾರ ಪಿಡಿಒಗಳು ಬಂದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಿಂತಿಲ್ಲ ನರೇಗಾ ಕಾಮಗಾರಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅಭಿವೃದ್ಧಿ ನಡೆಯತ್ತಿದೆ ಸೋಮವಾರ ಪ್ರಭಾರ ಪಿಡಿಒ ಸಾಮಾನ್ಯ ಸಭೆ ನಡೆಸಿದ್ದಾರೆ ಅಧ್ಯಕ್ಷ ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಬಗ್ಗೆ ಎಲ್ಲರ ಸಹಕಾರ ಕೇಳಿದ್ದಾರೆ ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಲಾಗಿದೆ. ಆದರೆ ಕೆಲವೇ ಕೆಲವು ಸದಸ್ಯರು ಮಾತನಾಡಿ ಪದೇ ಪದೆ ಪಿಡಿಒಗಳ ಬದಲಾವಣೆ ಮಾಡುವ ವಿಚಾರದಲ್ಲಿ ಧ್ವನಿ ಎತ್ತುತ್ತಾರೆ ಇದರಿಂದೆ ಯಾರೂ ಬರಲು ಇಷ್ಟ ಪಡುತ್ತಿಲ್ಲ ಇರುವ ಪಿಡಿಒ ಗಳೊಂದಿಗೆ ಸದಸ್ಯರು ಒಟ್ಟಾಗಿ ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಮಾಹಿತಿ ಹಂಚಿಕೊಂಡರು.

Latest News >>

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ಲಕ್ಕೂರ ಆನಂದರ ಸಾಹಿತ್ಯ ಕೃಷಿ ನಾಡಿಗೆ ಪರಿಚಯಿಸಬೇಕಿದೆ: ಹುಲಿಕುಂಟೆ ಮೂರ್ತಿ

ಚಿತ್ರದುರ್ಗ ಮೇ.26 ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ಆನಂದ್ ಸಿ.ಲಕ್ಕೂರು ಮಾಡಿರುವ ಸಾಹಿತ್ಯ ಕೃಷಿಯನ್ನು...

ಕುಂಚಿಟಿಗರಿಗೆ ಕೇಂದ್ರ OBC ಮೀಸಲಾತಿಗಿಂತ EWS ಮೀಸಲಾತಿ ಉತ್ತಮ -ಎಸ್ ವಿ ರಂಗನಾಥ್.

ಹಿರಿಯೂರು ಇತ್ತೀಚೆಗೆ ಕುಂಚಿಟಿಗ ಸಮಾಜದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿರುವ ಸುದ್ದಿ ಏನೆಂದರೆ ಅದು ಕುಂಚಿಟಿಗರಿಗೆ ಕೇಂದ್ರ ಸರ್ಕಾರದ OBC...

ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ ಕಾರಣ ಚಾನಲ್ ಒಳಗಡೆ ನೀರಿನಲ್ಲಿ ಇಳಿದು ಸಾಗಬೇಕು ಎಂಬುದು ಗ್ರಾಮಸ್ಥರ ಅಳಲು

ಹಿರಿಯೂರು: ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ಸರಿಯಾದ ದಾರಿ ಇಲ್ಲದ ಕಾರಣ ಈ ಊರಲ್ಲಿ ಯಾವುದೇ ವ್ಯಕ್ತಿ ಸತ್ತರೆ ಆ...

ವರಣುನ ಆರ್ಭಟಕ್ಕೆ ನೆಲಕ್ಕುರಿಳೆ ಬೆಳೆ- ಮನೆಗಳಿಗೆ ನುಗ್ಗಿದ ನೀರು-ಹಳ್ಳಕೊಳ್ಳಗೆ ನೀರು..

ಚಳ್ಳಕೆರೆ ಮೇ25 ವರುಣನ ಆರ್ಭಟಕ್ಕೆ ತೋಟಗಾರಿಕೆ ಬೆಳೆಗಳು ನೆಲಕ್ಕುರಿಳಿದರೆ ಮನೆಗಳಿಗೆ ನೀರು ನುಗ್ಗಿದ ಘಟನೆ ಜರುಗಿದೆ. ತಾಲೂಕಿನಾದ್ಯಂತ...

ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ. ₹ 71.41.325 ರೂ ಸಂಗ್ರಹ ಸಂತಾನ ಭಾಗ್ಯ ನೌಕರಿ ಆರ್ಥಿಕ ಆರೋಗ್ಯ ಸಂಪತ್ತು ಕರುಣಿಸುವಂತೆ ಹುಂಡಿಯಲ್ಲಿ ಲಿಖಿತ ಪತ್ರಗಳು‌ ಪತ್ತೆ ..!.

ನಾಯಕನಹಟ್ಟಿ:: ಮೇ.24. ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರುತಿಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವನ್ನು...

ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ.

ನಾಯಕನಹಟ್ಟಿ:: ಮೇ.23. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ....

ತಾಲ್ಲೂಕಿನ ಶುಭೋದಯ ಸೇವಾವೃದ್ದಾಶ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಲ್.ಮೂರ್ತಿ ರವರ ಹುಟ್ಟುಹಬ್ಬಆಚರಣೆ: ಮುಖ್ಯಸ್ಥ ತೇಜೋಮೂರ್ತಿ

ಹಿರಿಯೂರು: ಅಭಿಮತ ಪತ್ರಿಕೆಯ ಸಂಪಾದಕರು ಹಾಗೂ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಸಿ.ಸೆಲ್. ಘಟಕ ಅಧ್ಯಕ್ಷರಾದ ಜಿ.ಎಲ್.ಮೂರ್ತಿ...

ಮೌಡ್ಯಗಳಿಂದ ಹೊರಬಂದು ಬುದ್ಧನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ:ಪ್ರೊ.ಸಿಕೆ ಮಹೇಶ್ವರಪ್ಪ ಅಭಿಮತ 

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ಧ...

ವಾಣಿವಿಲಾಸಸಾಗರ ಜಲಾಶಯಕ್ಕೆ ತಗ್ಗಿದ ಒಳಹರಿವು ಮುಂಗಾರು ಮಳೆಯಿಂದಾಗಿ 1.65ಅಡಿ ನೀರು ಸಂಗ್ರಹ

ಹಿರಿಯೂರು : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರ್ವ ಮುಂಗಾರು ಮಳೆಯಿಂದಾಗಿ 1.65 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page