ಕೈಕೊಟ್ಟ ಮಳೆ ಶೇಂಗಾ ಬೆಳೆ ಒಣಗಲು ಪ್ರಾರಂಭ ಅನ್ನದಾತ ಮಳೆಗಾಗಿ ಮುಗಿಲಿನತ್ತ ಕೈಮುಗಿದು ಮಳೆಗಾಗಿ ಪ್ರಾರ್ಥನೆ

by | 17/08/23 | ಕೃಷಿ

ಚಳ್ಳಕೆರೆ ಆ.17.ಕಳೆದ ತಿಂಗಳು ಸ್ವಲ್ಪಮಟ್ಟಿಗೆ ಕರುಣೆ ತೋರಿದ ಅಕಾಲಿಕ ಮಳೆ ನಂತರ ಮಾಯವಾದ ಮಳೆರಾಯ ಬಿತ್ತನೆ ಮಾಡಿದ ಬೆಳೆ ಬಾಡುತ್ತಿದ್ದು ಮತ್ತೊಂದೆಡೆ ರೋಗಬಾಧೆ ಕೂಡ ಹೆಚ್ಚಾಗಿದ್ದು ಅನ್ನದಾತರನ್ನು ಚಿಂತೆಗೀಡು ಮಾಡುವಂತಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಬಡವರ ಬಾದಾಮಿ ಎಂದು ಖ್ಯಾತಿ ಪಡೆದಿರುವ ಶೇಂಗಾ ಬೆಳೆ ಮೇಲೆ
ಮಳೆರಾಯನ ವಕ್ರದೃಷ್ಟಿಯಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆಗಳು ಸಕಾಲಕ್ಕೆ ಮಳೆ ಬಾರದೆ
ಬಿಸಿಲಿನ ತಾಪಕ್ಕೆ ಬಾಡಲು ಪ್ರಾರಂಭವಾಗಿದ್ದು ಅನ್ನದಾತ ಮಳೆರಾಯನ ಕೃಫೆಗಾಗಿ ಮುಗಿಲು ನೋಡುವಂತಾಗಿದೆ. ರೈತರು ಮುಂಗಾರು ಹಂಗಾಮಿನಲ್ಲಿ ಸುರಿದ ಕಡಿಮೆ ಪ್ರಮಾಣದ ಮಳೆಯಿಂದ ಕಡಿಮೆ ಭೂಮಿ ತೇವಾಂಶ ಹಾಗೂ ಒಣ ಭೂಮಿಗೆ ದುಬಾರಿ ಬೆಲೆಯ ಬಿತ್ತನೇ ಶೇಂಗಾ ಬಿತ್ತನೆ ಮಾಡಿದ ನಂತರ ಕಳೆದ ತಿಂಗಳಲ್ಲಿ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಶೇಂಗಾ ಬೆಳೆಯಲ್ಲಿ ಹೆಚ್ಚು ಕಳೆಹುಲ್ಲು ಬೆಳೆದು ಕಳೆತೆಗೆಯಲು ಕೀಟನಾಶಕ. ಎಡೆಕುಂಟೆ ಹೊಡೆದು ಕೂಲಿ ಹಾಳುಗಳ ಸಹಾಯದಿಂದ ಕಳೆ ಹುಲ್ಲು ಸ್ವಚ್ಚ ಪಡಿಸಿಕೊಂಡಿದ್ದು ಶೇಂಗಾ ಬೆಳೆ ಬಿತ್ತನೆ ಮಾಡಿ ಎರಡು ತಿಂಗಳು ಕಳೆದರೂ ಶೇಂಗಾ ಬೆಳೆ ನೆಲ ಬಿಟ್ಟು ಎತ್ತರಕ್ಕೆ ಬೆಳೆದಿಲ್ಲ ಈಗ ಹೂ .ಕಾಯಿ ಕಟ್ಟಲು ಪ್ರಾರಂಭಿಸಿದ್ದು ಮಳೆಯ ಕೊರತೆಯಿಂದ ಭೂಮಿಯಲ್ಲಿ ತೇವಾಂಶವಿಲ್ಲದೆ ಬೆಳೆಗಳು ಒಣಗಲು ಪ್ರಾರಂಭಿಸಿದ್ದು ಇನ್ನು ಒಂದು ವಾರದೊಳಗೆ ಮಳೆ ಬಾರದಿದ್ದರೆ ಬೆಳೆಗಳು ಸಂಪೂರ್ಣವಾಗಿ ಒಣಗಲಿದ್ದು ಈ ಬಾರಿಯೂ ಮಳೆ ಕೈಕೊಟ್ಟರೆ
ತೀವ್ರ ಬರಗಾಲಕ್ಕೆ ಸಿಲುಕುವ ಆತಂಕ ರೈತರಲ್ಲಿ ಮನೆ ಮಾಡಿದೆ.
ತಾಲೂಕಿನ ಮು೦ಗಾರು ಆರಂಭದಲ್ಲಿ ಉತ್ತಮ ಮಳೆ ಬಂದು ರೈತಾಪಿ
ವರ್ಗಕ್ಕೆ ಒಂದಿಷ್ಟು ಸಂತಸದ ಸನ್ನಿವೇಶ ಉಂಟಾಗಿ ಶೇಂಗಾ ಬಿತ್ತನೆ
ಮಾಡಿದ್ದರು. ಎಡಕು೦ಟೆ, ಕಳೆ, ತೆಗೆದು ಹೂವು ಕಾಯಿ ಕಟ್ಟುವ ಸಮಯಕ್ಕೆ
ಸರಿಯಾಗಿ ಮಳೆ ಕೈಕೊಟ್ಟ ಕಾರಣ ಬೆಳೆಗಳಿಗೆ ಕೊಳ, ಬೆಂಕಿ ರೋಗ
ಕಾಣಿಸಿಕೊಂಡಿತ್ತು. ಈಗ ಬಿಸಿಲಿನ ತಾಪ ಹೆಚ್ಚಾಗಿದ್ದು ರೈತರು ಸಾಲ-ಸೂಲ
ಮಾಡಿ ಬಿತ್ತನೆ ಮಾಡಿದ್ದ ಶೇ೦ಗಾ ಬೆಳೆಹೂವು, ಕಾಯಿಕಟ್ಟುವ ಸಮಯದಲ್ಲಿ
ಮಳೆ ಕೈ ಕೊಟ್ಟಿದ್ದರಿ೦ದ ಬೆಳೆ ಸುಟ್ಟು ಕರಲಾಗಲು ಪ್ರಾರಂಭಿಸಿದೆ.
. ಆಗೊಮ್ಮೆ ಈಗೊಮ್ಮೆ ಕೆಲವು ಕಡೆ ಮಳೆ
ಬಂದರೆ ಮತ್ತೊ೦ದು ಕಡೆ ಮಳೆ ಬಾರದೆ ಮುಗಿಲಿನತ್ತ ನೋಡುತ್ತ ರೈತ,
‘ಎಲ್ಲಿ ಓಡುವಿರಿ ನಿಲ್ಲಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ಹೋಗಿ’
ಎಂದು ಪ್ರಾರ್ಥನೆ ಮಾಡಿದರೂ ಮಳೆರಾಯ ಕರುಣೆ ತೋರಿಸುತ್ತಿಲ್ಲ.
ಬಯಲು ಸೀಮೆಯ ರೈತರು ಸುಮಾರು 15 ವರ್ಷಗಳಿಂದ ಸಕಾಲಕ್ಕೆ
ಮಳೆ ಬೆಳೆಯಾಗದೇ ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿ ನಷ್ಟ ಅನುಭವಿಸು
ತ್ತಲೇ ಇದ್ದಾರೆ. ಬೆಳೆ ಬಾರದೆ ಇದಕ್ಕೆ ಸಂಬಂಧಿಸಿದ ವಿಮೆ ಸಹ ಬರದೇ
ರೈತರು ಸಾಲದ ದವಡಗೆ ಸಿಲುಕುವಂತೆ ಮಾಡಿದೆ. ಈ ಹಿಂದೆ ಮಾಡಿರುವ ಸಾಲ ಒಂದು ಕಡೆ
ಯಾದರೆ ಈಗ ಮತ್ತೆ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಎದುರಾಗು
ತಲೇ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಈರುಳ್ಳಿ, ಶೇಂಗಾ, ತೊಗರಿ,ಸಜ್ಜೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದು,
ಮಳೆ ಕೈಕೊಟ್ಟ ಕಾರಣ ಋಷ್ಠಿ ಭೂ ಪ್ರದೇಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ
ಹೊಲಗಳಲ್ಲಿ ಶೇಂಗಾ ಒಣಗಲು ಪ್ರಾರಂಭಿಸುವ ದೃಶ್ಯ ಕಂಡುಬರುತ್ತದೆ. ರೈತರಿಗೆ ಈ
ಬಾರಿಯೂ ಭರದ ಛಾಯೆ ಇದ್ದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.
ಬೆಳೆ ಹಾನಿದರೂ ಅವೈಜ್ಞಾನಿಕ ಬೆಳೆ ವಿಮೆ ಪದ್ದತಿಯಿಂದ ಕಳೆದ
ವರ್ಷ ಬಿತ್ತನೆ ಮಾಡಿದ ಶೇಂಗಾ ಬೆಳೆ ನಷ್ಟ ವಾದರೂ ಬೆಳೆ ವಿಮೆ ಪಾವತಿ
ಮಾಡಿಲ್ಲ. ಈ ಬಾರಿಯೂ ಮಳೆಯಿಲ್ಲದೆ ಬೆಳೆಗಳು ಒಣ ಗಲು ಪ್ರಾರ೦ಭಿ
ಸಿದ್ದು ಈಗಲಾದರೂ ರೈತರು ಕಟ್ಟಿದ ಬೆಳೆ ವಿಮೆ ಈ ಬಾರಿಯಾದರು ಬಿಡುಗಡೆ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗುವರೇ ಕಾದು ನೋಡ ಬೇಕಿದೆ.

Latest News >>

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಸಹಾಯವಾಣಿ ಆರಂಭ

ಚಿತ್ರದುರ್ಗ ಮೇ.30: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಶಿಕ್ಷಕರು ಮತ ಚಲಾಯಿಸಲು ಮತದಾರರಿಗೆ ಸಹಾಯ ಮಾಡಲು ಮತದಾರರ...

ಜೆಜೆಎಂ ಕಾಮಗಾರಿ ಪರಿಶೀಲಿಸಿದ ಜಿ.ಪಂ ಸಿಇಒ ಸೋಮಶೇಖರ್

ಮೊಳಕಾಲ್ಮೂರು ಮೇ.30: ಮೊಳಕಾಲ್ಮರು ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಂಡಾಪುರ ಗ್ರಾಮ ಹಾಗೂ ಅಶೋಕ ಸಿದ್ದಾಪುರ ಗ್ರಾಮ...

ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ: ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತರ್

ಚಳ್ಳಕೆರೆ: ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಅವರ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ...

ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಕಾರ್ತಿಕ್.

ಚಳ್ಳಕೆರೆ ಜನಧ್ವನಿಮೆ30 ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು...

ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್.

ಚಳ್ಳಕೆರೆ ಮೇ.30 ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್...

ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಎಂ.ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆ.

ನಾಯಕನಹಟ್ಟಿ::ಮೇ28. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜಿನಾಮೆಯಿಂದ ತೆರವಾಗಿದ್ದ ಉಪಧ್ಯಾಕ್ಷ ಸ್ಥಾನಕ್ಕೆ ಮಂಗಳವಾರ ನಡೆದ...

ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಸಂಪತ್ತನ್ನು ಕೆಲವೇ ಶತ ಕೋಟ್ಯಾಧಿಪತಿಗಳಿಗೆ ಧಾರೆ ಎರೆದಿದೆ ಸಿ.ವೈ. ಶಿವರುದ್ರಪ್ಪ

ಚಳ್ಳಕೆರೆ ಮೋದಿ ಸರ್ಕಾರ ದೇಶದ ಕಾನೂನುಗಳನ್ನು ಕಾರ್ಪೊರಿಕ್ ಸಾಗರ ಪ ತಿದ್ದುಪಡಿ ಮಾಡಿ, ಅವುಗಳ ಲಕ್ಷಾಂತರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ...

ಯುಪಿ ಯಿಂದ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ ಪ್ರಾರಂಭಿಸಲು ಪರವಾನಗಿ ನೀಡದಿರಲು ಮನವಿ

ಹಿರಿಯೂರು : ಉತ್ತರಪ್ರದೇಶ ರಾಜ್ಯದಿಂದ ಹಿರಿಯೂರು ನಗರಕ್ಕೆ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ...

ವಿದ್ಯುತ್ ತಂತಿ ಹರಿದು ಬಿದ್ದು ಎಮ್ಮೆ ಸ್ಥಳದಲ್ಲೇ ಸಾವು.

ಚಳ್ಳಕೆರೆ ಮೇ28 ಹಳ್ಳದಲ್ಲಿ ಮೇಯುತ್ತಿದ್ದ ಎಮ್ನೆ ಮೇಲೆ ವಿದ್ಯುತ್ ತಂತಿ ಹರಿದ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು...

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page