ಕೃಷಿ ಮತ್ತು ತೋಟಗಾರಿಕೆ ಒಣ ಕೃಷಿ ಭೂಮಿಸಂಶೋಧನಾ ಕೇಂದ್ರ ಸ್ಥಾಪನೆಗೆ ಕೂಡಲೆ ಅನುದಾನ ಬಿಡುಗಡೆ ಮಾಡುವಂತೆ ರೈತಮುಖಂಡರ ಒತ್ತಾಯ…

by | 08/02/24 | ಕೃಷಿ, ಜನಧ್ವನಿ


ಚಳ್ಳಕೆರೆ ಫೆ 8. ಬಯಲು ಸೀಮೆ ,ಬರದ ನಾಡು, ಬಿಸಿಲ ನಾಡು ಎಂದು ಖ್ಯಾತಿ ಪಡೆದಿರುವ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಒಣ ಕೃಷಿ ಭೂಮಿಸಂಶೋಧನಾ ಕೇಂದ್ರ ಸ್ಥಾಪನೆಗೆ ಕೂಡಲೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಒತ್ತಾಯಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಸಾಣೀಕೆರೆ ಸಮೀಪದ ಬಡವನಹಳ್ಳಿ ಕಾವಲು ಪ್ರದೇಶದಲ್ಲಿ ಈಗಾಗಲೆ ಸುಮಾರು 95 ಎಕರೆ ಭೂಮಿ ಮೀಸಲಿಟ್ಟು ಸುಮಾರು 10 ವರ್ಷಗಳು ಕಳೆಯಲು ಬಂದರೂ ಸಕರಾರ ಇನ್ನು ಅನುದಾನ ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಿದೆ. ಬಿಜೆಪಿ ಸರಕಾರ ಮುಖ್ಯ ಮಂತ್ರಿ ಯಡಿಯೂರಪ್ಪ ಅವಧಿಯಲ್ಲೂ ಅನುದಾನ ಬಿಡುಗಡೆ ಮಾಡುವಂತೆ ಮನವಿ ನೀಡಲಾಗಿತ್ತು. ಜಿಲ್ಲಾಧಿಕಾರಿಗಳ ಮೂಲಕವೂ ಸರಕಾರ ಅನುದಾನ ಬಿಡುಗಡೆ ಮಾಡುವಂತೆ ಸಾಕಷ್ಟು ಬಾರಿ ಮನವಿ ನೀಡಲಾಗಿದೆ.

ಹಿರಿಯೂರು ಸಮೀಪದ ಬಬ್ಬೂರು ಗ್ರಾಮದ ಕೃಷಿ ಮತ್ತು ಸಂಶೋಧನಾ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಕ್ಕೆ ಬಂದಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ನೀಡಿದಾಗ ಅನುದಾನ ಬಿಡುಗಡೆ ಮಾಡುವುದಾಗ ರೈತರಿಗೆ ಭರವಸೆ ನೀಡಿದ್ದರೂ ಸಹ ಅನುದಾನ ನೀಡಲು ಮುಂದಾಗುತ್ತಿಲ್ಲ ಈ ಬಾರಿ ಬಜೆಟ್ ನಲ್ಲಿ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಶ್ರಮ.

ಒಣಕೃಷಿ ಭೂಮಿ ಸಂಶೋದನಾ ಕೇಂದ್ರ ಸ್ಥಾಪಿಸಲುಸುಮಾರು 20 ವರ್ಷಗಳಿಂದ ಭೂಮಿಗಾಗಿ ಹುಡುಕಾಟಮಂಜೂರಾತಿಗಾಗಿ ಅಲೆದಾಡಿದ ಶ್ರಮದಿಂದಕೊನೆಗೂ 95 ಎಕರೆ ಭೂಮಿ ಮಂಜೂರಾತಿ ಪಡೆಯುವಲ್ಲಿ ಕ್ಷೇತ್ರದ ರಘುಮೂರ್ತಿ ಯಶಸ್ವಿಯಾಗಿದ್ದಾರೆ.
ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಉದ್ದೇಶಕ್ಕಾಗಿ ಭೂಮಿಯನ್ನು
ಮಾಡುವಂತೆ 2015ರಲ್ಲಿ ಮಂಜೂರು ಕಾಂಗ್ರೆಸ್ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ತಾಲೂಕಿನ ಕಸಬಾ ಹೋಬಳಿಯ ಸಾನಕರ ಗ್ರಾಮದ ಸಮೀಪ ರಿ.ಸೆ. 48 ರಲ್ಲಿ 95,13 ಎಕರೆ ಭೂಮಿ ಕರ್ನಾಟಕ ಭೂ ಕಂದಾಯನಿಯಮ 1966 ನಿಯಮ 97(4)ರ ಆನ್ವಯ
ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳ 1966ರ ನಿಯಮ 20(3) ಅನ್ವಯ ಮಾರುಕಟ್ಟೆ ದರದ ಶೇ. 50ರಷ್ಟು ದರ ಹಾಗೂ ನಿಯಮಾನುಸಾರ ಇತರೆ ಶುಲ್ಕ ವಿಧಿಸಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಇವರಿಗೆ ಮಂಜೂರು ಮಾಡಲು ಸರಕಾರ ಪೂರ್ವಾನುಮೋದನೆ ನೀಡಿದೆ.
ಭೂಮಿಗಾಗಿ ಹುಡುಕಾಟ:

ಶಾಸಕ ಟಿ .ರಘುಮೂರ್ತಿಯವರು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಬರೆದಿರುವ ಪತ್ರಗಳು.
ಕೃಷಿ ಮತ್ತು ಸಂಶೋಧನಾ ಭೂಮಿಗಾಗಿ ಹುಡುಕಾಟ ನಡೆಸಿ ಕೊನೆಗೆ ಚಳ್ಳಕೆರೆ ಕ್ಷೇತ್ರದ ಸಾಣೀಕೆರೆ ಗ್ರಾಮದ ಬಳಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಪ್ರಾರಂಭಿಸಲು ಸೂಕ್ತವಾದ 95 ಎಕರೆ ಭೂಮಿ ಸರಕಾರ ಮಂಜುರಾತಿಗೆ ಗ್ರೀನ್ ಸಿಗ್ನಲ್ ದೊರೆತು ಸುಮಾರು ಹತ್ತು ವರ್ಷಗಳು ಕಳೆದರೂ ಅನುದಾನ ಬಿಡುಗಡೆ ಮಾಡಿಲ್ಲ ಈ ಬಗ್ಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯೂ ಸಹ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಸಂಶೋಧನಾ ಕೇಂದ್ರದಲ್ಲಿನ ಚಟುವಟಿಕೆ: ಹಿರಿಯೂರು ತಾಲೂಕಿನ ಮಾರಿಕಣಿವೆ ಬಳಿ 1907ರಲ್ಲಿ ವಾಣಿವಿಲಾಸ ಸಾಗರ ಜಲಾಶಯ ನಿರ್ಮಾಣದ ನಂತರ ಬಟ್ಟೂರು ಗ್ರಾಮದ ಬಳಿ 1916ರಲ್ಲಿ ಸುಮಾರು 175 ಎಕರೆ ಭೂ ಪ್ರದೇಶದಲ್ಲಿ ಡಾ.ಕೋಲ್ಡನ್ ನಿರ್ದೇಶದಲ್ಲಿ ಕೃಷಿ ಸಂಶೋಧನಾ ಕೇಂದ್ರ ಆರಂಭಗೊಂಡು ರೈತರಿಗೆ ಹೊಸ ತಂತ್ರಜ್ಞಾನ ಕೃಷಿ ಯಂತ್ರೋಪಕರಣ, ಅಧಿಕ ಇಳುವರಿ ಬೀಜೋತ್ಪಾದನೆ ರೈತರಿಗೆ ಪರಿಚಯಿಸುವ ಮೂಲಕ ಹೆಮ್ಮರವಾಗಿದೆ. ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಪಡೆಯುವ ರೈತರು ಕೃಷಿ ನಗರಕ್ಕೆ ಅಲೆಯದಂತೆ ತಮ್ಮ ಜಮೀನಿನಲ್ಲೇಬೆಳೆದ ಮರಗಳಿಂದ ಕೃಷಿ ಪರಿಕರ ತಯಾ- ರಿಸಿಕೊಳ್ಳುವಂತೆ ಟೀಕ್, ಬೇವು, ಬಿದಿರು, ಮಾವು, ದಾಳಿಂಬೆ, ಪೇರಲೆ, ಬಾರೆ, ಶ್ರೀಗಂಧ ವಿವಿಧ ಮರ ಜೊತೆಗೆ ಎಳ್ಳು, ಕುಸುಬೆ, ಕುರೆಸಾನಿ, ಸಾವೆ, ಕೊರೆ, ನವಣೆ, ಉದ್ದು, ಅಲಸಂತೆ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳ ಬೆಳೆ ಸಂಶೋಧನೆ ಹಾಗೂ ಶೇಂಗಾ ಬೆಳೆಯ ನಿಖರ ಕೃಷಿಯ ಸೋಷಕಾಂಶ ನಿರ್ವಹಣೆ, ಸಮಗ್ರ ಪೀಡೆ ಮತ್ತು ರೋಗ ನಿರ್ವಹಣೆ ಸಂಶೋಧನೆ ಸೇರಿದಂತೆ ಒಣ ಕೃಷಿ ಭೂಮಿ ನಿರ್ವಹಣೆ ಬಗ್ಗೆ ಹೊಸ ಕೃಷಿ ಯಂತ್ರೋಪಕರಣ ರೈತರಿಗೆ ಪರಿಚಯಿಸಿ ರೈತರೇ ಜಮೀನಿನಲ್ಲಿ ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಪಡೆದು ಆರ್ಥಿಕವಾಗಿ ಮುಂದೆ ಬರುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಬರ ಪೀಡಿತ ಪ್ರದೇಶವಾದ ಕಾರಣ ಸಕಾಲಕ್ಕೆ ಮಳೆ ಬೆಳೆ ಇಲ್ಲದೆ ರೈತರು ಸಾಲ ಮಾಡಿಕೊಂಡು ಕೃಷಿಗೆ ಗುಡ್ಬೈ ಹೇಳ ನಗರಗಳತ್ತ ವಲಸೆ ಹೋಗುತಿದ್ದಾರೆ.ಸಂಶೋಧನಾ ಕೇಂದ್ರದಿಂದ ನೂರಾರು ನಿರುದ್ಯೋಗ ಯುವಕರಿಗೆ, ರೈತರಿಗೆ ಬೀಜೋತ್ಪಾದನೆ, ಸಮಗ್ರ ನೀರಾವರಿ ನಿರ್ವಹಣೆ,ಒಣ ಬೇಸಾಯ ಪದ್ಧತಿಗಳಲ್ಲಿ ಸಂಶೋಧನೆ, ಸಾವಯವಗೊಬ್ಬರಗಳ ಉತ್ಪಾದನೆ ಮತ್ತು ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಲಿದೆ ಇದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಕನಸಿನ ಕೂಸಾಗಿದೆ

ಈಗಲಾದರೂ ಸರಕಾರ ಈ ಬಾರಿಯ ಬಜೆಟ್ ನಲ್ಲಿ ಬಯಲು ಸೀಮೆಯ ರೈತರಿಗೆ ನೀಡಿದ ಭರಸವೆಯನ್ನು ಅನುದಾನ ಬಿಡುಗಡೆ ಮಾಡುವ ಮೂಲಕ ಈಡೇರಿಸುವುದೇ ಕಾದು ನೋಡ ಬೇಕಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page