ಕೃಷಿ‌ ಇಲಾಖೆಯ ದ.ಕ.ಜಿಲ್ಲಾ ಉಪನಿರ್ದೇಶಕಿ ಭಾರತಮ್ಮ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ.

by | 21/10/23 | ಕ್ರೈಂ


ಮಂಗಳೂರು, ಅ.21: ಕಾಮಗಾರಿಯ ಬಿಲ್
ಮೊತ್ತದ ಪಾವತಿಗಾಗಿ 1 ಲಕ್ಷ ರೂ. ಲಂಚ
ಬೇಡಿಕೆ ಮುಂದಿಟ್ಟು ಮತ್ತು ಅದನ್ನು ಸ್ವೀಕರಿಸುತ್ತಿದ್ದ ಆರೋಪದ ಮೇರೆಗೆ ಕೃಷಿ‌ ಇಲಾಖೆಯ ದ.ಕ.ಜಿಲ್ಲಾ ಉಪನಿರ್ದೇಶಕಿ ಭಾರತಮ್ಮನನ್ನು ಲೋಕಾಯುಕ್ತ
ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಯಾಗಿದ್ದ ಮತ್ತು ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು
ಕೃಷಿ ಇಲಾಖೆಯಲ್ಲಿ ನಿಯೋಜನೆಯ
ಮೇರೆಗೆ ಅಧಿಕಾರಿಯಾಗಿದ್ದ ಪರಮೇಶ್ವರ್ಎ ನ್‌ಪಿ ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ‌ ಪೊಲೀಸರು ಲಂಚ ಸ್ವೀಕರಿಸುವಾಗಲೇ
ದಾಳಿ ನಡೆಸಿ ಬಲೆಗೆ ಕೆಡವಿದ್ದಾರೆ.ಸದ್ಯ ಇಲಾಖೆಯಿಂದ ನಿವೃತ್ತರಾಗಿರುವ‌ಪರಮೇಶ್ವರ್ ಎನ್‌ಪಿ ಅವರು ಕರ್ತವ್ಯದ ವೇಳೆ 2022-23 ಮತ್ತು 2023-24ನೆ ಸಾಲಿನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ
ಬರುವ ಜಲಾನಯನ ಅಭಿವೃದ್ಧಿ ವಿಭಾಗದ ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ’ ಯೋಜನೆಯಡಿ ಸಜಿಪ
ಮುನ್ನೂರು, ಸಜಿಪ ಮೂಡ, ಸಜಿಪ ಪಡು,ಸಜಿಪ ನಡು, ಕುರ್ನಾಡು, ನರಿಂಗಾನ ಬಾಳೆಪುಣಿ, ಮಂಜನಾಡಿ ಗ್ರಾಮಗಳ ಸಾರ್ವಜನಿಕರರಿಗೆ ಸರಕಾರದ

ವತಿಯಿಂದ 50 ಲಕ್ಷ ರೂ. ಮೌಲ್ಯದ ವಿವಿಧ
ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಉಚಿತವಾಗಿ ಸರಬರಾಜು ಮತ್ತು ನಾಟಿ ಕಾಮಗಾರಿ ಮಾಡಿಸಿದ್ದರು. ತೋಟಗಾರಿಕಾ ಸಸಿಗಳನ್ನು ಕಣ್ಣನ್
ನರ್ಸರಿ ಮಾಲಕ ಧೋರಿ, ಶಬರೀಶ ನರ್ಸರಿಯ ಭೈರೇಗೌಡಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ
ಸಿ.ಎ. ಸೈಮನ್, ಡಿವೈಎಸ್ಪಿಗಳಾದ ಕಲಾವತಿ
ಮತ್ತು ಚಲವರಾಜು ಬಿ., ಇನ್‌ಸ್ಪೆಕ್ಟರ್ಸು ರೇಶ್ ಕುಮಾರ್ ಪಿ. ಪಾಲ್ಗೊಂಡಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *