ಕುಶಲ ಕರ್ಮಿಗಳನ್ನು ತಯಾರಿಸುವ ಕೇಂದ್ರ ಐಟಿಐ ಕೇಂದ್ರಗಳಾಗಿವೆ. ಒಳ್ಳೆಯ ಕೌಶಲ್ಯ ಪಡೆದು ಸಾಧನೆ ಮಾಡಿದರೆ ನಮ್ಮ ದೇಶ ಪ್ರಗತಿಯಾಗುತ್ತದೆ ಎಂದು ಪ್ರಾಚರ್ಯ ಡಿ.ಜಿ.ಪುನಿತ್ ನಾಗ್.

by | 17/10/23 | ಶಿಕ್ಷಣ


ಚಳ್ಳಕೆರೆ ಅ.17ಕುಶಲ ಕರ್ಮಿಗಳನ್ನು ತಯಾರಿಸುವ ಕೇಂದ್ರ ಐಟಿಐ ಕೇಂದ್ರಗಳಾಗಿವೆ. ಒಳ್ಳೆಯ ಕೌಶಲ್ಯ ಪಡೆದು ಸಾಧನೆ ಮಾಡಿದರೆ ನಮ್ಮ ದೇಶ ಪ್ರಗತಿಯಾಗುತ್ತದೆ ಎಂದು ಪ್ರಾಚರ್ಯ ಡಿ.ಜಿ.ಪುನಿತ್ ನಾಗ್ ಕಿವಿಮಾತು ಹೇಳಿದರು.
ನಗರದ ಭಾಗ್ಯಶ್ರೀ ಗ್ರಾಮೀಣ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಘಟಿಕೋತ್ಸವ ಪ್ರಯುಕ್ತ ಐಟಿಐ ತರಬೇತಿ ಪೂರ್ಣಗೊಳಿಸಿದ ತರಬೇತಿದಾರರಿಗೆ ಪ್ರಮಾಣ ಪತ್ರ ಮತ್ತು ಅಂಕಪಟ್ಟಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಕೌಶಲ್ಯದ ಜೊತೆಗೆ ಶಿಸ್ತನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯವೂ ಕೂಡ ಉಜ್ವಲವಾಗತ್ತದೆ. ಸಾಧನೆಗೆ ಸಾವಿರ ದಾರಿಗಳು ಇವೆ ಉತ್ತಮ ದಾರಿಯಲ್ಲಿ ಸಾಗಿ ಮುಂದಿನ ದಿನಗಳಲ್ಲಿ ದೇಶ ಕಂಡ ಉತ್ತಮ ಪ್ರಜೆಯಾಗಿ ಹೊರಹುಮ್ಮತ್ತೀರಿ ಹೇರಳ ಉದ್ಯೋಗಾವಕಾಶಗಳು ಲಭ್ಯವಿದ್ದು ಹಾಗೂ ಯಾವುದೇ ಕಾರಣಕ್ಕೂ ನಿಂತ ನೀರಾಗದೆ ತಮ್ಮ ಜೀವನವನ್ನು ಉತ್ತಮರೀತಿಯಲ್ಲಿ ರೂಪಿಸುಕೊಳ್ಳುವಂತೆ ತಿಳಿಸಿದರು..

ಇದೇ ವೇಳೆಕಾರ್ಯಕ್ರಮದಲ್ಲಿ ನವದೆಹಲಿಯಲ್ಲಿ ಪ್ರಧಾನಮಂತ್ರಿಗಳ ಉಪಸ್ಥಿತಯಲ್ಲಿ ನಡೆದ ಕೌಶಲ್ ಧಿಕ್ಷಾಂತ್ ಸಮಾರೋಹ್ ಕಾರ್ಯಕ್ರಮದ ನೇರಪ್ರಸಾವನ್ನು ಸಂಸ್ಥೆಯ ತರಬೇತುದಾರರು ಮತ್ತು ಸಿಬ್ಬಂದಿ ವರ್ಗದವರು ವೀಕ್ಷಿಸಿದರು.. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಣಿತ ಸಹ ಶಿಕ್ಷಕ ನಾಗೇಂದ್ರಪ್ಪ. ಗೋವಿದಪ್ಪಾ ಹಾಗೂ ತರಬೇತಿ ಅಧಿಕಾರಿಗಳಾದ ಸೀತಾ ಪಿ ಎಲ್ ಹಾಗು ಸಿಬ್ಬಂದಿಗಳಾದ ಸುರೇಶ, ವಿದ್ಯಾ , ಶಿವಾನಂದ್ , ಹರ್ಷಿಣಿ ರಾಜಶೇಖರ್ ಮೂರ್ತಿ ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *