*ಕುಡಿಯುವ ನೀರು ಮತ್ತು ನೈರ್ಮಲ್ಯ ಘನ ತಾಜ್ಯ ನಿರ್ವಹಣೆ ಕುರಿತು ಬೀದಿ ನಾಟಕ ಪ್ರದರ್ಶನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲಾಗಿದೆ ಪಟ್ಟಣ ಪಂಚಾಯತಿ ಪ್ರಭಾರೆ ಮುಖ್ಯ ಅಧಿಕಾರಿ ಶಿವಕುಮಾರ್ ಚಾಲನೆ*

by | 28/08/23 | ಆರೋಗ್ಯ


ನಾಯಕನಹಟ್ಟಿ ::ಪಟ್ಟಣ ಪಂಚಾಯಿತಿ ಮತ್ತು ಸೃಷ್ಟಿ ನಗರ ಮತ್ತು ಗ್ರಾಮೀಣ ಸಂಸ್ಥೆ ಸಹಯೋಗದೊಂದಿಗೆ ಕುಡಿಯುವ ನೀರು ಹಾಗೂ ನೈರ್ಮಲ್ಯ ಕುರಿತು ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪಟ್ಟಣ ಪಂಚಾಯತಿ ಪ್ರಭಾರ ಮುಖ್ಯ ಅಧಿಕಾರಿ ಆದ ಶ್ರೀಯುತ ಶಿವಕುಮಾರ್ ಕಾರ್ಯಕ್ರಮವನ್ನು ತಮಟೆ ಹೊಡೆಯುವವರ ಮುಖಾಂತರ ಉದ್ಘಾಟಿಸಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಕನತ್ಯಾಜ್ಯ ನಿರ್ವಹಣೆ ಕುರಿತು ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಗಿದೆ.

ಇದರ ಉದ್ದೇಶವೇನೆಂದರೆ ಕುಡಿಯುವ ನೀರು ಶುದ್ಧವಾಗಿಲ್ಲವಾದರೆ ಮನುಷ್ಯನಿಗೆ ಹಲವಾರು ರೋಗಗಳು ಸಂಭವಿಸಬಹುದು.

ಮನೆಯಲ್ಲಿ ನೀರಿನ ಗುಡಾಣುಗಳು ಪ್ರತಿನಿತ್ಯ ಸ್ವಚ್ಛವಾಗಿರಬೇಕು ನೀರಿನ ಟ್ಯಾಂಕರಗಳು ಸ್ವಚ್ಛವಾಗಿರಬೇಕು.

ಚರಂಡಿಗಳು ಸ್ವಚ್ಛವಾಗಿರಬೇಕು ಪೈಪ್ನಲ್ಲಿಗಳಲ್ಲಿ ಜಾಗದಂತೆ ನೋಡಿಕೊಳ್ಳುವುದು ವಾರ್ಡಿನ ಸ್ಥಳೀಯ ಜನಪ್ರತಿನಿಧಿಗಳು ಸಾರ್ವಜನಿಕರು ಹಾಗೂ ಸ್ವ ಸಹಾಯ ಸಂಘದ ಸದಸ್ಯರುಗಳು ಕಾಳಜಿ ವಹಿಸಿ ಜವಾಬ್ದಾರಿ ತೆಗೆದು ಕೊಳ್ಳಬೇಕು ನಮ್ಮ ಚಿತ್ರದುರ್ಗದಲ್ಲಿ ಜಿಲ್ಲೆಯಲ್ಲಿ ಕಲುಷಿತ ನೀರಿನಿಂದ ಕೆಲವು ಕಡೆ ಕಹಿ ಘಟನೆಗಳು ನಡೆದಿದೆ ನಮ್ಮ ಪಟ್ಟಣ ಪಂಚಾಯತಿ ಶುದ್ಧ ನೀರು ಪೂರೈಸಲಾಗುವುದು ಎಂದು ತಿಳಿಸಿದರು.

ಮತ್ತು ಈ ಬೀದಿ ನಾಟಕ ಮುಖಾಂತರ ನಗರದ ಪ್ರಮುಖ ಬೀದಿಗಳಲ್ಲಿ ಜನಜಾಗೃತಿ ಮೂಡಿಸಲಾಗುವುದು ಈ ಕಾರ್ಯಕ್ರಮದಲ್ಲಿ ಭಾಗವಹಿಸು ಸಹಕರಿಸಬೇಕೆಂದು ಅವರು ಮಾತನಾಡಿ ದರು.

ನಾಯಕನಹಟ್ಟಿ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಬಸಪ್ಪ ನಾಯಕ ಮಾತನಾಡಿ ಬೀದಿ ನಾಟಕದ ಮೂಲಕ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯ ಎಂದರು ನಂತರ ಮಾತನಾಡಿದಅವರು

ಕೇವಲ ಪಟ್ಟಣ ಪಂಚಾಯತಿಯವರೇ ಕೆಲಸ ಮಾಡಿದರೆ ಸಾಲದು ಪಟ್ಟಣ ಪಂಚಾಯತಿ ಎಲ್ಲ ವಾರ್ಡಿನ ಜನರು ಕುಡಿಯ ನೀರಿನ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರಿಗೆ ತಿಳಿಸಿದರು.

ನಮ್ಮ ಕುಟುಂಬದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನೈರ್ಮಲ್ಯ ಮತ್ತು ಘನ ತ್ಯಾಜ್ಯಗಳ ಬಗ್ಗೆ ಜವಾಬ್ದಾರಿ ಇರಬೇಕು ಎಂದು ತಿಳಿಸಿದರು.

ನಂತರ ಸೃಷ್ಟಿ ನಗರ ಮತ್ತು ಗ್ರಾಮೀಣ ಟ್ರಸ್ಟ್ ನ ಕಲಾತಂ ಬೀದಿ ನಾಟಕ ಪ್ರಾರಂಭವಾಯಿತು.

ಕುಡಿಯುವ ನೀರು ಹೀಗಿರಬೇಕು ಸ್ವಚ್ಛತೆ ಬಗ್ಗೆ ಕುಟುಂಬ ಮತ್ತು ಸಮುದಾಯದಲ್ಲಿ ನಿರ್ಮಲ ಮತ್ತು ಘನ ತ್ಯಾಜ್ಯದ ಬಗ್ಗೆ ಮೂಡಿಸಿದರು.

ಮತ್ತು ವಾಲ್ಮೀಕಿ ವೃತ್ತ ಪಾದಗಟ್ಟೆ ಸಂತೆ ಬಜಾರ ಹಟ್ಟಿ ಮಲ್ಲಪ್ಪ ನಾಯಕ ಸರ್ಕಲ್ ಹಾಗೂ ಅಂಬೇಡ್ಕರ್ ನಗರ ದಲ್ಲಿ ವಿವಿಧ ಕಡೆ ಬೀದಿ ನಾಟಕವನ್ನು ಉತ್ತಮ ಪ್ರದರ್ಶನ ಮಾಡಲಾಯಿತು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದ್ವಿತೀಯ ದರ್ಜೆ ಸಹಾಯಕ ತಿಪ್ಪೇಸ್ವಾಮಿ ಮಾತನಾಡಿ ಸಾರ್ವಜನಿಕರು ಶುದ್ಧವಾದ ನೀರು ಕುಡಿಯಬೇಕು ಮತ್ತು ನೀರು ಕಾಯಿಸಿ ಹಾ ಯಿಸಿ ಕುಡಿಯಬೇಕು ಕಲುಷಿತ ನೀರನ್ನು ನೋಡಿ ತಡೆಗಟ್ಟಬೇಕು ಮನುಷ್ಯರಾದ ನಾವು ಕಲುಷಿತ ನೀರನ್ನು ಕುಡಿದರೆ ಕೆಲವು ರೋಗಗಳು ಬರುವ ಸಾಧ್ಯತೆ ಇರುತ್ತವೆ. ಎಂಬುದನ್ನು ಮಾತ್ರ ಮರೆಯಬೇಡಿ.ಮತ್ತು ನೀರನ್ನು ಕುದಿಸಿ ಆಹಾರಕ್ಕೆ ಕೂಡ ಕುದಿಸಿದ ನೀರನ್ನು ಬಳಸಬೇಕು ಕಲುಷಿತ ವಾದ ಕುಡಿಯುವ ನೀರಿನ ಮೂಲಕ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ ಮೊದಲು ಶುದ್ದವಾದ ಕುಡಿಯುವ ನೀರು ಬಂದಿದೆಯಾ ಇಲ್ಲಂತ ಮೊದಲು ಪರೀಕ್ಷೆ ಮಾಡಬೇಕು ಎಂದು ಅವರು ಸಾರ್ವಜನಿಕರಿಗೆ ಸಲಹೆ ನೀಡಿದರು.

ಸೃಷ್ಟಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿಯಾದ ಆರ್ ಯನ್ನಪ್ಪ, ಬೀದಿನಾಟಕ ಸಂಯೋಜಕರಾದ ಟಿ .ಮರಿಪಾಲಯ್ಯ ಭಾಗವಹಿಸಿದ್ದರು .

ಎಲ್ಲಾ ಬೀದಿಗಳಲ್ಲಿ ಸಾರ್ವಜನಿಕರು ಬೀದಿ ನಾಟಕದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೆ ವೇಳೆ ಬೀದಿ ನಾಟಕದ ಕಲಾವಿದರಾದ ಚನ್ನಬಸಪ್ಪ,ಯ ಲ್ಲಪ್ಪ ಐಹೊಳೆ, ಕುಮಾರಣ್ಣ, ಕಮಲಮ್ಮ, ಇ ಬಿ ಆಶಾ, ಹಂಪಣ್ಣ, ಇತರರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *