ಕುಡಿಯುವ ನೀರಿನ ಪೈಪ್ ಒಡೆದು ಕಲುಷಿತ ನೀರು ಮಿಶ್ರಣ ದುರಸ್ಥಿಗಾಗಿ ರೆಡ್ಡಿಹಳ್ಳಿ ಗ್ರಾಮಸ್ಥರ ಆಗ್ರಹ.

by | 17/09/23 | ಜನಧ್ವನಿ

. ಚಳ್ಳಕೆರೆ ಸೆ.17 ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲ್ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣದಿಂದ ಸಾಂಕ್ರಮಿಕ ರೋಗ ಬೀತಿಯಲ್ಲಿಯಲ್ಲಿ ಗ್ರಾಮಸ್ಥರು. ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಪಂ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ ದೇವರಮರಿಕುಂಟೆಗೆ ಹೋಗುವ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದ ರಸ್ತೆಯಲ್ಲಿ ಗುಂಡಿ ಬಿದ್ದು ಕಲುಷಿತ ನೀರು ಕುಡಿಯುವ ನೀರಿನ ಪೈಲ್ ನಲ್ಲಿ ಮಿಶ್ರಣವಾಗುತ್ತಿದೆ . ಪದೇ ಪದೆ ಕುಡಿಯುವ ನೀರಿನ ಪೈಪ್ ಒಡೆಯುತ್ತಿರುತ್ತದೆ ಕಲುಷಿತ ನೀರು ಕುಡಿದು ಸಾಂಕ್ರಮಿಕ ರೋಗಗಳಿಗೆ ತುತ್ತಾದರೆ ಯಾರು ಹೊಣೆ?
. ಈಗಾಲೆ ಹಲವು ಕಡೆ ಕಲುಷಿತ ನೀರು ಕುಡಿದು ಸಾವು ನೋವು ಕಂಡ ಪ್ರಕರಣಗಳು ನಮ್ಮ ಮುಂದೆ ಇವೆ ಅಂತಹ ಪ್ರಕರಣ ನಮ್ಮ ಗ್ರಾಮದಲ್ಲಿ ಸಂಭವಿಸುವ ಮುನ್ನವೇ ಕುಡಿಯುವ ನೀರಿನ ಪೈಪ್ ದುರಸ್ಥಿ ಪಡಿಸುವಂತೆ ರೆಡ್ಡಿಹಳ್ಳಿ ಗ್ರಾಮದ ಯುವಕನೋರ್ವ ಜನಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ . ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಒಡೆದ ಕುಡಿಯುವ ನೀರಿನ ಪೈಪ್ ದುರಸ್ಥಿ ಪಡಿಸಲು ಮುಂದಾಗುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *