ಕುಂಚಿಟಿಗರ ಜ್ವಲಂತಸಮಸ್ಯೆ ಕುರಿತು ಪ್ರೋ.ದೊಡ್ಡರಾಜಪ್ಪ ಜೊತೆ ಚರ್ಚೆ ನಡೆಸಿದ ರಾಜ್ಯಅಧ್ಯಕ್ಷ ಕಸವನಹಳ್ಳಿರಮೇಶ್

by | 07/11/23 | ಸುದ್ದಿ


ಹಿರಿಯೂರು :
ವೇದಾವತಿ ನಗರದ ಚಂದ್ರಾ ಲೇ ಔಟ್ ಡಾಗ್ ಸರ್ಕಲ್ ನಲ್ಲಿ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ರವರ ನಿವಾಸದಲ್ಲಿ ಹಿರಿಯೂರಿಗೆ ಕಾರ್ಯನಿಮಿತ್ತ ಆಗಮಿಸಿದ್ದ ಶಿರಾ ತಾಲ್ಲೂಕು ಕಾಮಗೊಂಡನಹಳ್ಳಿ ಶ್ರೀಮದ್ಯಮಾಂಭದೇವಿ ಪ್ರಧಾನ ಅರ್ಚಕರಾದ ಪೂಜಾರ್ ದೊಡ್ಡರಾಜಪ್ಪನವರನ್ನು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ಭೇಟಿ ಸಮಾಲೋಚನೆ ನಡೆಸಿದರು.
ದಕ್ಷಿಣ ಭಾರತದಲ್ಲಿ ಹರಿದು ಹಂಚಿ ಹೋಗಿರುವ 101 ಕುಲ ಬೆಡಗಿನ ಕುಂಚಿಟಿಗರನ್ನು ಒಂದು ಗೂಡಿಸಲು “ಮರಳಿ ಬಾ ಕುಂಚಿಟಿಗ”ಜನಾಂದೋಲನ ಕಾರ್ಯಕ್ರಮದಡಿ ಅಜ್ಜಿ ತಾತ,ಅಪ್ಪ ಅಮ್ಮನ ಜಾತಿ ಕುಂಚಿಟಿಗ ಇದ್ದು ಮಕ್ಕಳಿಗೆ ಒಕ್ಕಲಿಗ, ನಾಮದಾರಿ, ಲಿಂಗಾಯಿತ, ಅಂತ ತಪ್ಪಾಗಿ ಜಾತಿ ನಮೂದಾಗಿದ್ದರೆ ಸಿಕ್ಕಂತ ನೌಕರಿ, ಗೆದ್ದ ರಾಜಕೀಯ ಸ್ಥಾನಮಾನ ಕೂಡ ಜಾತಿ ಸಿಂಧುತ್ವ ಸಿಗದೆ ಕೈ ತಪ್ಪಿ ಹೋಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪದಡಿ ತೊಂದರೆಯಾಗುತ್ತದೆ.ಅದಕ್ಕಾಗಿ ಕುಂಚಿಟಿಗ ಜಾತಿಗೆ ತಿದ್ದುಪಡಿ ಮೂಲಕ ವಾಪಾಸ್ ಕರೆತರುವ ಬಗ್ಗೆ ಮಾತುಕತೆ ನಡೆಸಲಾಯಿತು.
ಡಿಸೆಂಬರ್ ತಿಂಗಳಲ್ಲಿ ತಮಿಳುನಾಡು, ಕೇರಳ ಅಂತರ ರಾಜ್ಯ ಕುಂಚಿಟಿಗರ ಭಾವೈಕ್ಯತಾ ಪ್ರವಾಸ ಮತ್ತು ಪಂಚ ರಾಜ್ಯಗಳ ಕುಂಚಿಟಿಗ ಮಹಾಪಂಚಾಯತ್ ಮೂಲಕ ಕುಂಚಿಟಿಗ ಧರ್ಮಾಧಿಕಾರಿ ನೇಮಕ ಹಾಗೂ ದೀರ್ಘಕಾಲ ನೆನೆಗುದಿಗೆ ಬಿದ್ದಿರುವ ಕುಂಚಿಟಿಗರ ಕೇಂದ್ರ ಓ ಬಿ ಸಿ ಮೀಸಲಾತಿ ವಿಚಾರದಲ್ಲಿರುವ ಗೊಂದಲ ಮತ್ತು ಕುಂಚಿಟಿಗ ರೈತಾಪಿ ಮಕ್ಕಳಿಗೆ ಮದುವೆ ಮಾಡಲು ಹೆಣ್ಣು ಸಿಗದೆ ಇರುವ ಕುರಿತು ಚರ್ಚಿಸಿದರಲ್ಲದೆ, ಕುಂಚಿಟಿಗ ಇತಿಹಾಸ ಪುರುಷ ಜಲಧಿಬೊಪ್ಪರಾಯ ಜಯಂತಿ ಮಾಡುವ ಕುರಿತು ಸುದೀರ್ಘ ಮಾತುಕತೆ ನಡೆಸಲಾಯಿತು ಎಂದು ಕಸವನಹಳ್ಳಿ ರಮೇಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ಸೇರಿದಂತೆ ಅನೇಕ ಕುಂಚಿಟಿಗ ಕುಲಬಾಂಧವರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *