ಕುಂಚಿಟಿಗಜನರಿಗೆ ಓಬಿಸಿಮೀಸಲಾತಿ ಕೈತಪ್ಪಿ ಹೋಗಿದ್ದು, ಶಿಕ್ಷಣಹಾಗೂಉದ್ಯೋಗಕ್ಷೇತ್ರದಲ್ಲಿ ತುಂಬಾ ನಷ್ಟವಾಗಿದೆ ಕುಂಚಿಟಿಗಮಹಾಸಭಾ ಅಧ್ಯಕ್ಷರಾದ ಹೆಚ್.ಪಿ.ಗುರುನಾಥ್

by | 12/10/23 | ಪ್ರತಿಭಟನೆ


ಹಿರಿಯೂರು :
ಕುಂಚಿಟಿಗ ಜನರಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಕೈ ತಪ್ಪಿ ಹೋಗಿ ಕಳೆದ 27 ವರ್ಷಗಳಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ತುಂಬಲಾರದ ನಷ್ಟ ಉಂಟಾಗಿದ್ದು. ಇದನ್ನು ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರಿಪಡಿಸಬೇಕು ಎಂಬುದಾಗಿ ರಾಷ್ಟ್ರೀಯ ಕುಂಚಿಟಿಗ ಮಹಾಸಭಾದ ಅಧ್ಯಕ್ಷ ಹೆಚ್.ಪಿ.ಗುರುನಾಥ್ ಒತ್ತಾಯಿಸಿದರು.
ತಾಲ್ಲೂಕು ಬುರಜಿನರರೊಪ್ಪ ಶ್ರೀ ರಕ್ಷಾಗಣಪತಿ ದೇವಸ್ಥಾನದ ಹತ್ತಿರ ಎರಡನೇ ದಿನದ ಕುಂಚಿಟಿಗರ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿರಾ ಕುಂಚಿಟಿಗರ ಸಂಘದ ಆರ್.ವಿ.ಪುಟ್ಟಕಾಮಣ್ಣ ಮಾತನಾಡಿ, ಕುಂಚಿಟಿಗರು ಮಧ್ಯ ಕರ್ನಾಟಕದ ಬಹುತೇಕ ಹಳ್ಳಿಗಾಡಿನ ಕುಗ್ರಾಮಗಳಲ್ಲಿ ನೆಲೆಸಿ ಕೃಷಿ, ಕೂಲಿ, ಪಶುಸಂಗೋಪನೆ, ಹೈನುಗಾರಿಕೆ ಮಾಡಿಕೊಂಡು ಮಳೆಯಾಶ್ರಿತ ವ್ಯವಸಾಯ ಮಾಡಿಕೊಂಡು ಬುಡಕಟ್ಟು ಸಂಸ್ಕೃತಿಯ ಆಚರಣೆ ಮಾಡುತ್ತಿದ್ದಾರೆ ಎಂದರಲ್ಲದೆ,
ರಾಜ್ಯಾದ್ಯಂತ ಹರಿದು ಹಂಚಿ ಹೋಗಿರುವ ಕುಂಚಿಟಿಗರು ಪ್ರಾದೇಶಿಕ ಭಾಷೆಗಳ ವ್ಯತ್ಯಾಸ ಮತ್ತು ಸ್ಥಳೀಯ ಪಟ್ಟಭದ್ರರ ಪ್ರಭಾವಕ್ಕೆ ಮಣಿದು ಕುಂಚಿಟಿಗ ಜಾತಿಯ ಜೊತೆಗೆ ಕುಂಚವಕ್ಕಲ್, ಕಮಾಟಿ, ನಾಮದಾರಿ, ಲಿಂಗಾಯಿತ, ಒಕ್ಕಲಿಗ ಅಂತ ಸೇರಿಸಿಕೊಂಡು ಜಾತಿಪಟ್ಟಿಯಲ್ಲಿ ಅಸ್ತಿತ್ವದಲ್ಲಿಲ್ಲದ ಹೆಸರಿನಲ್ಲಿ ಜಾತಿ ಸಿಂಧುತ್ವ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಎಂಬುದಾಗಿ ಹೇಳಿದರು.
ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ಮಾತನಾಡಿ, ಕುಂಚಿಟಿಗರ ಏಕೀಕರಣ ಮತ್ತು ಧೃವೀಕರಣ ಹೋರಾಟದ ಮುಂದುವರಿದ ಭಾಗವಾಗಿ ಇದೀಗ ಕುಲ ಬೆಡಗುಗಳ ಆಧಾರ ಮತ್ತು “ಮರಳಿ ಬಾ ಕುಂಚಿಟಿಗ” ಜನಾಂದೋಲನ ಹಾಗೂ ಅಂತರ ರಾಜ್ಯ ಕುಂಚಿಟಿಗರ ಭಾವೈಕ್ಯತಾ ಪ್ರವಾಸ, ಕುಲದೈವ ಯಾತ್ರೆ ಕಾರ್ಯಕ್ರಮದಡಿ ಕುಂಚಿಟಿಗರು ಒಂದುಗೂಡುತ್ತಿದ್ದಾರೆ.
ಅಲ್ಲದೆ ಕುಂಚಿಟಿಗರು ಶಾಶ್ವತ ನೀರಾವರಿ ಸೌಕರ್ಯವಿಲ್ಲದೆ,ಮಳೆ ನೆರಳಿನ ಬಯಲು ಸೀಮೆಯಲ್ಲಿ ಬಾರದ ಮಳೆ, ಬತ್ತಿದ ಕೆರೆ, ಏರಿದ ಬಡ್ಡಿ, ತೀರದ ಸಾಲ,ಅತೀವೃಷ್ಟಿ,ಅನಾವೃಷ್ಟಿ,ಬೆಳೆ ನಷ್ಟ, ಬೆಲೆ ಕುಸಿತಗಳಿಂದ ಉತ್ಪಾದನಾ ವೆಚ್ಚ ಕೂಡ ಲಭಿಸದೆ, ಕೃಷಿ ಮತ್ತು ಬೆಳೆ ಸಾಲ ತೀರಿಸಲಾಗದೆ ವ್ಯವಸಾಯಕ್ಕೆ ವಿದಾಯ ಹೇಳಿ ನಗರ ಪ್ರದೇಶಗಳಿಗೆ ವಲಸೆ ಹೋಗಿ ಸಣ್ಣಪುಟ್ಟ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.
ಗ್ರಾಮೀಣ ರೈತಾಪಿ ಮಕ್ಕಳು ಕೂಡ ಹಗಲು ರಾತ್ರಿ,ಕಲ್ಲು ಮುಳ್ಳು,ಹಾವು ಚೇಳು ವಿಷ ಜಂತುಗಳ ನಡುವೆ ಜೀವದ ಹಂಗು ತೊರೆದು ವ್ಯವಸಾಯ ಕೆಲಸ ಮಾಡಿಕೊಂಡು,ಸಾರಿಗೆ ಸೌಕರ್ಯವಂಚಿತ ಮೂಲಭೂತ ಸೌಕರ್ಯ ವಿಲ್ಲದ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಣ ಪಡೆದು ಕೇಂದ್ರ ಸರ್ಕಾರದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಜನರಲ್ ಮೆರಿಟ್ ನಲ್ಲಿ ಸ್ಪರ್ಧೆ ಮಾಡಬೇಕಾಗಿದೆ.
ಆದ್ದರಿಂದ ಕುಂಚಿಟಿಗರಿಗೆ ಗ್ರಾಮೀಣ ಮತ್ತು ನಗರ ಎಂಬುದಾಗಿ ತಾರತಮ್ಯ ಮಾಡದೆ ಕೇಂದ್ರ ಓ ಬಿ ಸಿ ಮೀಸಲಾತಿ ಕಲ್ಪಿಸಬೇಕು, ಈಗಾಗಲೇ ಕೇಂದ್ರ ಓ ಬಿ ಸಿ ಮೀಸಲಾತಿ ಇಲ್ಲದ ಆರ್ಥಿಕವಾಗಿ ಹಿಂದುಳಿದ ಕುಂಚಿಟಿಗರಿಗೆ ಈಡಬ್ಲೂ.ಎಸ್ ಮೀಸಲಾತಿ ಇತ್ತೀಚೆಗೆ ಸಿಕ್ಕಿದ್ದು, ಈಗ ಒಕ್ಕಲಿಗರಿಗೆ ಅನುಸರಿಸಿದ ಮಾದರಿಯಲ್ಲಿ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಓ ಬಿ ಸಿ ಮೀಸಲಾತಿ ಕಲ್ಪಿಸುವ ಮಾತು ಕೇಳಿ ಬರುತ್ತಿದೆ.ಯಾವುದೇ ಕಾರಣಕ್ಕೂ ಅಂತಹ ತೀರ್ಮಾನ ಮಾಡಬಾರದು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಪರಮೋಚ್ಚ ಅಹಿಂದ ನಾಯಕರಾದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಕುಂಚಿಟಿಗರ ಹಿರಿಯ ಸಂಸದೀಯ ಪಟುಮುತ್ಸದ್ದಿ ರಾಜಕಾರಣಿ ಟಿ.ಬಿ.ಜಯಚಂದ್ರರವರು ಯಾವುದೇ ಕಾರಣಕ್ಕೂ ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ತಾರತಮ್ಯ ಮಾಡದೇ, ಸಮಸ್ಥ ಕುಂಚಿಟಿಗರಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಕಲ್ಪಿಸಲು ಶಿಫಾರಸು ಮಾಡಬೇಕೆಂದು ಮನವಿ ಮಾಡಿದ್ದಾರೆ.
ಒಂದು ವೇಳೆ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಓ ಬಿ ಸಿ ಮೀಸಲಾತಿ ಕೊಟ್ಟರೆ ನಗರ ಕುಂಚಿಟಿಗರಿಗೆ ಓ ಬಿ ಸಿ ಮೀಸಲಾತಿ ಮತ್ತು ಈಡಬ್ಲೂ.ಎಸ್ ಮೀಸಲಾತಿ ಎರಡು ಕೈ ತಪ್ಪಿ ಹೋಗಿ ಜನರಲ್ ಮೆರಿಟ್ ನಲ್ಲಿ ಬರುತ್ತಾರೆ. ಮತ್ತೊಮ್ಮೆ ಕುಂಚಿಟಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಲಿರಂಗನಾಥ್, ಕುಬೇರಪ್ಪ, ಶಶಿಕಲಾ, ಜಯಪ್ರಕಾಶ, ಚಂದ್ರಗಿರಿ, ಅವಿನಾಶ್, ಡಿ.ಹನುಮಂತರಾಯ, ಪವನ್, ವಿಶ್ವನಾಥ ಇತರರು ಉಪಸ್ಥಿತರಿದ್ಧರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page