ಕೀಟ ಬಾದೆಗೆ ತುತ್ತಾದ ಕರ್ಬೂಜ ಹಾಕಿದ ಬಂಡವಾಳ ಕೈಸೇರದೆ ಸಂಕಷ್ಟಕ್ಕೆ ಸಿಲುಕಿದ ರೈತ ಕಿರಣ್ ಗೌಡ.

by | 21/12/23 | ಕೃಷಿ


ಚಳ್ಳಕೆರೆ ಡಿ. 21 ಈಗಾಗಲೆ ರೈತರು ಅತಿ ವೃಷ್ಠಿ ಅನಾವೃಷ್ಠಿಗೆ ಸಿಲುಕಿ ಬಿತ್ತನೆ ಮಾಡಿದ ಶೇಂಗಾ ಬೆಳೆ ನಷ್ಟವಾಗಿ ಹಾಕಿದ ಬಂಡವಾಳ ಕೈ ಸೇರದೆ ಸಾಲದ ಸುಳಿಗೆ ಸಿಲುಕಿದ ಬೆನ್ನಲ್ಲೇ ಇಲ್ಲೊಬ್ಬ ರೈತ ಕರ್ಬೂಜ ಹಾಕಿ ಕೈತುಂಬ ಹಣ ಸಿಗುವ ಕನಸು ಕಂಡ ರೈತ ಕೀಟ ಬಾದೆಗೆ ಸಿಲುಕಿ ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಕಮ್ಮತ್ ಮರಿಕುಂಟೆ ಗ್ರಾಮದ ರೈತ ಕಿರಣ್ ಗೌಡ ಕರ್ಬೂಜ ನಾಟಿ ಮಾಡಿ ಉತ್ತಮ ಇಳುವರಿ ಬಂದಿತ್ತು ಇನ್ನೇನು ಕಟಾವ್ ಮಾಡಬೇಂಬಷ್ಟರಲ್ಲಿ ಕೀಟ ಬಾದೆಗೆ ಸಿಲುಕಿ ಬಳ್ಳಿಯಲ್ಲೇ ಹಣ್ಣು ಬಿರುಕು ಬಿಟ್ಟು ಬಳ್ಳಿ ಒಗಲು ಪ್ರಾರಂಬಿಸಿರುವುದು ಉತ್ತಮ ಫಸಲು ಪಡೆಯುವ ಆಸೆಯಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ

ರೈತನದ ಕಿರಣ್ ಗೌಡ ತನ್ನ ಮೂರು ಎಕರೆ ಜಮೀನಿನಲ್ಲಿ ಕರ್ಬೂಜ ಹಣ್ಣನ್ನು ಬೆಳೆಯಲು, ಅನಂತಪುರದ ಶ್ರಾವಣಿ ಅಂಗಡಿಯಲ್ಲಿ, ಪಟಜಮ್ ತಳಿಯ ನಿರ್ಮಲಾ 24-24 ಒಂದು ಕೆ.ಜಿ.ಬೀಜ 20 ರೂ ನಂತೆ ಎರಡು ಕೆ.ಜಿ 40 ಸಾವಿರೂ ಗಳಿಗೆ ಖರೀದಿ ಮಾಡಿಕೊಂಡು ಬಂದ ಕರ್ಬೂಜ ಬೀಜವನ್ನು ಬಿತ್ತನೆ ಮಾಡಿ ಕೋಳಿ ಗೊಬ್ಬರ ಹಾಕಿ ಬೀಜ ಗೊಬ್ಬರ ಸೇರಿ ಸುಮಾರು 2 ಲಕ್ಷ ರೂ ಅಧಿಕ ಖರ್ಚು ಮಾಡಿದ್ದಾನೆ ಬೆಳೆಯು ಸಹ ಉತ್ತಮ ಇಳಿವರಿ ಬಂದಿದೆ ಇನ್ನೇನು ಮೊದಲ ಬೆಳೆ ಕರ್ಬೂಜ ಹಣ್ಣು ಕಟಾವ್ ಮಾಡ ಬೇಕು ರೋಗ ಬಾದೆಗೆ ಸಿಲುಕಿ ಕಣ್ಮುಂದೆಯೇ ಕೀಟ ಬಾದೆಗೆ ತುತ್ತಾಗಿ ಹಣ್ಣು ಬಿರುಕು ಬಿಟ್ಟು ಬೆಳೆ ನಷ್ಟವಾಗಿದೆ. ರೀತಿಯಲ್ಲಿ ಬಂದಿದ್ದು, ಫಸಲಿಗೆ ಬಂದಂತಹ ಸಮಯದಲ್ಲಿ ಹಣ್ಣುಗಳು ಸಂಪೂರ್ಣವಾಗಿ ಹೊಸ ರೀತಿಯ ರೋಗಕ್ಕೆ ತುತ್ತಾಗುತ್ತಿದ್ದು. ಇದರಿಂದ ರೈತನ ಕೈ ಸೇರಬೇಕಿದ್ದ 25 ರಿಂದ 30 ಟನ್ ಹಣ್ಣು ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ರೈತ ಕಿರಣ್ ಗೌಡ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿ ಕರ್ಬೂಜ 60 ದಿನಗಳ ಬೆಳೆ ಈಗಾಲೆ 68 ದಿನಗಳು ಕಳೆದಿದ್ದು ಉತ್ತಮ ಇಳುವರಿ ಬಂದಿತ್ತು ಈಗ ಮಾರುಟ್ಟೆಯ ಧರ ಕೆ.ಜಿ.50ರೂ ಇದೆ ಕಟಾವು ಮಾಡಿ ತರುವುದಾಗಿ ಮಾತನಾಡಿದ್ದೆ ಏಕಾ ಏಕಿ ಕೀಟ ಬಾದೆಯಿಂದ ಒಂದೇ ದಿನದಲ್ಲಿ ಬೆಳೆ ನಷ್ಟವಾಗಿದೆ ಕೋಳಿ ಗೊಬ್ಬರ.ಬೀಜ ಕೀಟನಾಷಕ ಸೇರಿದಂತೆ ಇತರೆ ಖರ್ಚು ಒಟ್ಟ2.5 ಲಕ್ಷ ರೂ ಖರ್ಚು ಮಾಡಲಾಗಿತ್ತು 25 ರಿಂದ 30 ಟನ್ ನೀರಿಕ್ಷೆ ಈಗಿನ ಮಾರುಕಟ್ಟೆ ಬೆಲೆ ಗೆ ಸುಮಾರು 10 ಲಕ್ಷ ರೂ ಆದಾಯವನ್ನು ನಿರೀಕ್ಷೆ ಇಟ್ಟು ಕೊಳ್ಳಲಾಗಿತ್ತು
ಬರಗಾಲದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಾಲವನ್ನು ಮಾಡಿ ಕರ್ಬೂಜ ಹಣ್ಣನ್ನು ಬೆಳೆಯಲು ಮುಂದಾಗಿದ್ದೇನೆ. ಆದರೆ ಫಸಲಿಗೆ ಬಂದ ಹಣ್ಣುಗಳು ಸಂಪೂರ್ಣವಾಗಿ ರೋಗಕ್ಕೆ ತುತ್ತಾಗಿರುವುದರಿಂದ ಹಾಕಿದ ಬಂಡವಾಳವೂ ಸಿಗದೆ ಶ್ರಮಕ್ಕೂ ಫಲ ಸಿಗದೆ ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ.

ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆ ನಷ್ಟ ಪರಿಹಾರ ಕೊಡಿಸುವರೇ ಕಾದು ನೋಡ ಬೇಕಿದೆ.

Latest News >>

ಕಾಣೆಯಾದ ಐದು ವರ್ಷದ ಬಾಲಕಿ ಪತ್ತೆ ಕುಟುಂಬಸ್ಥರ ಮಡಿಲು ಸೇರಿದ ಬಾಲಕಿ

ಚಳ್ಳಕೆರೆ ಮಾ.3 ಮನೆಯಿಂದ ಕಾಣೆಯಾಗಿದ್ದ 5 ವರ್ಷದ ಬಾಲಕಿ‌ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾಳೆ. ಹೌದು ಇದು ಚಳ್ಳಕೆರೆ ನಗರದ ಶಾಂತಿನಗರದ...

ಚಳ್ಳಕೆರೆಯಲ್ಲಿ 700 ಮನೆಗಳ ಲೋಕಾರ್ಪಣೆ ಮನೆ ಹಂಚಿಕೆ, ಹಕ್ಕುಪತ್ರಗಳ ವಿತರಣಾ ಸಮಾರಂಭ

ಚಿತ್ರದುರ್ಗ ಮಾ.01: ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ‘ಸರ್ವರಿಗೂ ಸೂರು’...

ಸಹಕಾರ ಸಂಘಗಳು ಲೆಕ್ಕಪರಿಶೋಧಕರ ನೇಮಕ ಮಾಹಿತಿ ಸಲ್ಲಿಸಲು ಸೂಚನೆ

ಚಿತ್ರದುರ್ಗ ಫೆ.29: ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 29-ಬಿ(8)ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ...

ಬಾಲನಟರ ಪಾತ್ರಕ್ಕಾಗಿ ಮಕ್ಕಳ ಬಳಕೆ: ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ

ಚಿತ್ರದುರ್ಗ ಫೆ.28: ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ, 2016ರನ್ವಯ ಕರ್ನಾಟಕ...

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ...

ಇ-ಆಸ್ತಿ ಆಂದೋಲನ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತ ಚಂದ್ರಪ್ಪ.

ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ...

ನೀರಿನ ಅಸಮರ್ಪಕ ಬಳಕೆಯಿಂದ ಬರ ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಿ

ಚಿತ್ರದುರ್ಗ ಫೆ.23: ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಸಮಸ್ಯೆ ಹಾಗೂ ಬರ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ...

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ಜೂನ್ ವೇಳೆಗೆ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ: ವರ್ಷಾಂತ್ಯಕ್ಕೆ ನೇರ ರೈಲು ಕಾಮಗಾರಿ ಆರಂಭ

ಚಿತ್ರದುರ್ಗ. ಫೆ.26: ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page