ಕಿರು ನೀರು ಸರಬರಾಜು ಟ್ಯಾಂಕ್ ಇದೆ. ನೀರಿನ ತೊಟ್ಟಿ ಇದೆ ನಲ್ಲಿಗಳೂ ಇವೆ ಆದರೆ ನೀರು ಮಾತ್ರ ಬರಲ್ಲ ಯಾರಿಗೆ ಹೇಳಲಿ ನಮ್ಮ ಕುಡಿಯುವ ನೀರಿನ ಪ್ರಾಬ್ಲಮ್ ? ಓಬಯ್ಯನಹಟ್ಟಿ ಗ್ರಾಮಸ್ಥರ ಅಳಲು.

by | 25/10/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಅ 25. ಕಿರು ನೀರು ಸರಬರಾಜು ಟ್ಯಾಂಕ್ ಇದೆ. ನೀರಿನ ತೊಟ್ಟಿ ಇದೆ ನಲ್ಲಿಗಳೂ ಇವೆ ಆದರೆ ನೀರು ಮಾತ್ರ ಬರಲ್ಲ ಯಾರಿಗೆ ಹೇಳಲ್ಲಿ ನಮ್ಮ ಕುಡಿಯುವ ನೀರಿನ ಪ್ರಾಬ್ಲಮ್ ? ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ವ್ಯಾಪ್ಯಿಯ ಓಬಯ್ಯನಹಟ್ಟಿ ಗ್ರಾಮದ ಸಮೀಪವಿರುವ ಬಡಹುಚ್ಚಯ್ಯರ ಕಪಿಲೆ ಗಟ್ಟಿ ಬೋರಯ್ಯ ಕಪಿಲೆ ಹಾಗೂ ತಿಪ್ಪಳ್ಳಿ ಕಪಿಲೆ ವ್ಯಾಪ್ತಿಯಲ್ಲಿ ಸುಮಾರು 27 ರಿಂದ30 ಮನೆಗಳಿದ್ದು ಕಿರು ನೀರು ಸಬರಾಜು ಕುಡಿಯುವ ನೀರಿನ 4 ಟ್ಯಾಂಕ್ ಗಳಿವೆ 2 ಜಾನುವಾರು ತೊಟ್ಟಿಗಳಿವೆ ಕಳೆದ ಸುಮಾರು 8 ವರ್ಷಗಳಿಂದ ವರ್ಷಗಳಿಂದ ನೀರು ಬಿಡದೆ ಖಾಲಿ ಇವೆ ಇಲ್ಲಿನ ಜನರು ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಈ ಬಗ್ಗೆ ಸಾಕಷ್ಟು ಬಾರಿ ಗ್ರಾಪಂ ಸದಸ್ಯರ ಹಾಗೂ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಮುಂಗಾರು ಮಳೆ ಕೊರತೆಯ ನಡುವೆಯೂ ಮಳೆಗಾಲದಲ್ಲೂ ಸಹ ಬೇಸಿಗೆ ಬಿಸಲನ್ನು ಮೀರಿಸುವಂತಹ ಬಿಸಿಲ ತಾಪ ಹೆಚ್ಚಾಗಿದ್ದು ಜಾನುವಾರು.ಕುರಿ ಮೇಕೆಗಳಿಗೆ ಹಾಗೂ ಇಲ್ಲಿನ ವಾಸಿಗಳಿಗೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ .
<

ಮೋಟರ್ ಪಂಪ್ ಮಾರಾಟ.
ಇಲ್ಲಿನ ಸ್ಥಳೀಯರಿಗೆ ಕುಡಿಯುವ ನೀರಿಗಾಗಿ ಗ್ರಾಮಪಂಚಾಯತ್ ವತಿಯಿಂದ ಬೋರನ್ನು ಕೊರೆಸಿ ಮೋಟರ್ ಬಿಟ್ಟಿರುವುದನ್ನು ಬೇರೊಬ್ಬರಿಗೆ ಕೊಟ್ಟಿತ್ತಾರೆ ಹಾಗೂ ಇಲ್ಲಿ ಇದ್ದ ಎರಡು ಕೈಪಂಪ್ ಜಗ್ಗನಲ್ಲಿ ವಸ್ತುಗಳನ್ನು ಮಾರಿಕೊಂಡಿದ್ದಾರೆ ಇದರಿಂದ ಇಲ್ಲಿನ ವಾಸಿಗಳಿಗೆ ಕೃತಕ ನೀರಿನ ಆಭಾವ ಉಂಟಾಗಿದ್ದು ಇಲ್ಲಿ
ಸುಮಾರು ನೂರಾರು ಜಾನುವರುಗಳು. ಕುರಿ ಮೇಕೆ ಗಳಿದ್ದು‌ ನೀರಿನ ಅಭಾವ ತುಂಬಾ ಹೆಚ್ಚಾಗಿದ್ದು
ಈ ಹಳ್ಳಿಗಳಿಗೆ ನೀರು ಸರಬರಾಜು ಮಾಡಿಸಬೇಕು ಎಂದು ಪಿಮಲ್ಲೇಶ್ ಗ್ರಾಮಸ್ಥರು ಆರೋಪಿಸಿದ್ದಾರೆ[/box]
ಹಣ ಖರ್ಚಾದರೂ ಅಭಿವೃದ್ಧಿ ಶೂನ್ಯ.

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ
ಕುಡಿಯುವ ನೀರು .ನೈರ್ಮಲ್ಯಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಾಕಷ್ಡು ಅನುದಾನ ಬಂದರೂ ಸಹ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು. ರಸ್ತೆ.ಚರಂಡಿ .ಬೀದಿ ದೀಪ. ಸ್ವಚ್ಚತೆ ಮಾಡಿದುತ್ತಿಲ್ಲ ಎಂಭ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಪ್ರಸ್ತುತ ಎಲ್ಲಡೆ ಮುಂಗಾರು ಮಳೆ ಕೊರತೆ, ಅಂತರ್ಜಲ ಕುಸಿತದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಕೆರೆ, ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿದ್ದು, ಜನ, ಜಾನುವಾರುಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇದರ ನಡುವೆ ಕುಡಿಯುವ ನೀರಿನ ಕೊರತೆಯ ಕೂಗು ಕೇಳಿ ಬರುತ್ತಿದೆ.
ಬರಗಾಲ ಎಂದು ಘೋಷಣೆಯಾಗಿರುವುದರಿಂದ ಜನ ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ಮುಂಜಾಗೃತೆ ವಹಿಸುವಂತೆ ಸರಕಾರ ಹಾಗೂ ಜಿಲ್ಲಾಡಳೀತ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಗ್ರಾಪಂ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ನೀರಿನ ಸಮಸ್ಯೆ ನೀಗಿಸಲು ಇಚ್ಚಾಶಕ್ತಿ ತೋರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *