ಚಳ್ಳಕೆರೆ ಜನಧ್ವನಿ ವಾರ್ತೆ ಮೇ 27. ವರ್ತಕರೇ ಎಚ್ಚರ ಅಪರಿತರು ಐದು ನೂರು ಮುಖಬೆಲೆಯ ನೋಟು ತಂದು ಸಾಮಗ್ರಿ ಖರೀದಿ ಮಾಡಲು ಅಥವಾ ಚಿಲ್ಲರೆ ನೆಪದಲ್ಲಿ ಬಂದು ನಕಲಿ ನೋಟು ನೀಡಿ ಕಣ್ಮರೆಯಾಗುತ್ತಾರೆ.
ಚಳ್ಳಕೆರೆ ನಗರದ ಹಳೆ ಟೌನ್ ತಿಮ್ಮಪ್ಪನ ದೇವಸ್ಥಾನದ ಕಿರಾಣಿ ಅಂಗಡಿಗೆ ಅಪರಚಿತನೊಬ್ಬ 500 ರೂ ಮುಖ ಬೆಲೆಯ ಜೆರಾಕ್ಸ್ ನೋಟು ನೀಡಿ ಚಿಲ್ಲರೆ ಪಡೆದಿರುವುದು.
ಹೌದು ಇದು ಚಳ್ಳಕೆರೆ ನಗರದ ಹಳೆ ಟೌನ್ ತಿಮ್ಮಪ್ಪನ ದೇವಸ್ಥಾನ ಕಿರಾಣಿ ಅಂಗಡಿಗೆ ಕಳೆದ ಎರಡು ದಿನಗಳ ಹಿಂದೆ ಶಾಲಾ ಬಾಲಕನಂತೆ ಮವಸ್ತ್ರ ಹಾಗೂ ಬ್ಯಾಗ್ ಹಾಕಿಕೊಂಡು ಬಂದು ಜನ ದಟ್ಟಣೆ ಇದ್ದಾಗ ಐದು ನೂರು ರೂ ಮುಖಬೆಲೆಯ ನೋಟು ನೀಡಿ ಚಿಲ್ಲರೆ ಪಡೆದು ಕಣ್ಮರೆಯಾಗಿದ್ದಾನೆ. ನಂತರ ಅಂಗಡಿಯಲ್ಲಿ ಮಹಿಳೆ ಕಿರಾಣಿ ಸಾಮಾಗ್ರಿ ತರಲು ಹೋದಾಗ ಅದು ಜೆರಾಕ್ಸ್ ನೋಟು ಎಂದು ತಿಳಿದು ಬಂದು ಅಘಾತಗೊಂಡೊದ್ದಾರೆ.ಜೆರಾಕ್ಸ್ ಮಾಡಿದ ನೋಟು ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಹೊರಗಿಂದ ಬಂದ ಬಂದ ಕಿಡಿಗೇಡಿಗಳು ನೋಟನ್ನು ಜೆರಾಕ್ಸ್ ಮಾಡಿ ಕೃತ್ಯ ಎಸಗಿರುವ ಎಂಬ ಶಂಕೆ ವ್ಯಕ್ತವಾಗಿದೆ.
ಕಿಡಿಗೇಡಿಗಳು ಜೆರಾಕ್ಸ್ ಮಾಡಿದ 500 ರೂ. ನೋಟು ಕೊಟ್ಟು. ಸಣ್ಣ ಹೋಟೆಲ್, ಬೀಡ ಅಂಗಡಿ, ಜನರಲ್ ಸ್ಟೋರ್ ಹೀಗೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಜೆರಾಕ್ಸ್ ನೋಟುಗಳನ್ನ ನೀಡಿದ್ದಾರೆ. ಹೊರಗಿನಿಂದಬಂದು ಈ ಕೃತ್ಯ ಎಸಗಿರಬುದು ಎಂಬ ಅನುಮಾನವಿದೆ. ಹೆಚ್ಚು ಜನರಿರುವ ಸಮಯ ನೋಡಿ ಜೆರಾಕ್ಸ್ ನೋಟು ಕೊಟ್ಟು ಮೋಸ ಮಾಡಿದ್ದಾರೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
0 Comments