ಹೊಳಲ್ಕೆರೆ, ನವೆಂಬರ್ 17 : ಹೊಳಲ್ಕೆರೆ ತಾಲ್ಲೂಕಿನ ಕೊಡಗವಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ ಜೆ
ಸುಮಾರು 28 ವರ್ಷ ವಯಸ್ಸು, ಕೂಲಿ ಕೆಲಸ ರವರು ದಿನಾಂಕ: 17.11.2023 ರಂದು ಬೆಳಿಗ್ಗೆ 11.00 ಎ.ಎಂ
ರ ಸಮಯದಲ್ಲಿ ತನ್ನ ಮೋಟಾರ್ ಸೈಕಲ್ ನಂ: ಕೆಎ-41 ಇಎನ್-7167 ನ್ನು ತೆಗೆದುಕೊಂಡು ಅಪ್ಪು ತಂದೆ
ಕೆಆರ್ ರೇವಪ್ಪ (22) ಕೊಡಗವಳ್ಳಿ ಗ್ರಾಮ, ಮತ್ತು ತಿಪ್ಪೇಶ ತಂದೆ ಗಂಗಪ್ಪ ಕೊಡಗವಳ್ಳಿ ಗ್ರಾಮ, ಸುಮಾರು
(35) ರವರೊಂದಿಗೆ ಶಿವಗಂಗ ಗ್ರಾಮದ ಸಮೀಪ ಹೋಗುತ್ತಿರುವಾಗ ಯಾವುದೋ ಒಂದು ಕಾರು ಅತೀವೇಗ
ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ಬೈಕ್
ಸವಾರ ಶಿವಕುಮಾರ್ ಸೇರಿದಂತೆ ಮೂವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಶಿವಕುಮಾರ್ ಜೆ ರವರು
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಇನ್ನುಳಿದ ಅಪ್ಪು ಮತ್ತು ತಪ್ಪೇಶನಿ ಗೆ ಬಲವಾದ ಪೆಟ್ಟು ಬಿದ್ದು
ರಕ್ತಗಾಯಗಳಾಗಿರುತ್ತದೆ. ಮೋಟಾರ್ ಸೈಕಲ್ ಸವಾರ ಶಿವಕುಮಾರನನ್ನು ಮತ್ತು ಗಾಯಾಗೊಂಡ ಇಬ್ಬರನ್ನು
ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದಾಗ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ
ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸು
ದಾಖಲಾಗಿರುತ್ತದೆ.
ಕಾರು ಡಿಕ್ಕಿ ಮೋಟಾರ್ ಸೈಕಲ್ ಅಪಘಾತ ಇಬ್ಬರಿಗೆ ಗಾಯ ಒರ್ವ ವ್ಯಕ್ತಿ ಸಾವು
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments