ಕಳೆದ ಸಾಲಿನಲ್ಲಿ ರೈತರ ಹೆಸರಿನಲ್ಲಿ ಬೆಳೆ ಪರಿಹಾರ ವಂಚನೆ ಪ್ರಕರಣ ತನಿಖೆ ನಡೆಸಿ ಸೂಕ್ತ ಕ್ರಮಗೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ತಾಕೀತು.

by | 10/11/23 | ಸುದ್ದಿ


ಚಳ್ಳಕೆರೆ ನ.10
ಭೀಕರ ಬರಗಾಲವಿದ್ದರೂ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ ಬೇಕಾಗೆ ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕ ಟಿ.ರಘುಮೂರ್ತಿ ತಾಕೀತು ಮಾಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಡಳೀತ ಅಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕ ಡಾ,ಮಂಜನಾಥ್ ಅಧ್ಯಕ್ಷತೆಯಿಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಮೇವಿನ ಸಮಸ್ಯೆ ಉಲ್ಭಣವಾಗದಂತೆ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸ ಬೇಕು , ಹೋಬಳಿಗೊಂದು ಗೋಶಾಲೆಗಳನ್ನು ಪ್ರಾರಂಭಿಸಿ ದೇವರ ಎತ್ತುಗಳಿಗೆ ಹಾಗೂ ರೈತರ ಎತ್ತುಗಳಿಗೆ ಮೇವಿನ ಕೊರತೆಯಾಗದಂತೆ ನಿಗವಹಿಸುವಂತೆ ಸೂಚಿಸಿದರು.
ಆಡಳೀತ ಅಧಿಕಾರಿ ಡಾ.ಮಂಜುನಾಥ್ ಮಾತನಾಡಿ ತಾಲೂಕಿನ ಅನಿರ್ಭಂದಿತ ಯೋಜನೆಯಡಿ 2.46 ಕೋಟಿ ಅನುದಾನ ಸರಕಾರ ಬಿಡುಗಡೆ ಮಾಡಿದ್ದು ತಾಲೂಕಿಗೆ ಇಬ್ಬರು ಶಾಸಕರು ಬರುವುದರಿಂದ ಮೊಳಕಾಲ್ಮೂರು ಕ್ಷೇತ್ರವ್ಯಾಪ್ತಿಗೆ 20 ಹಾಗೂ ಚಳ್ಳಕೆರೆ ಕ್ಷೇತ್ರಕ್ಕೆ 20 ಗ್ರಾಮಪಂಚಾಯಿತಿಗಳು ಬರುವುದರಿಂದ ಸಮನಾಗಿ ಅನುಧಾನ ತಲಾ 1.23 ಕೋಟಿ ಅನುಧಾನ ಹಂಚಿಕೆಯಾಗಲಿದೆ ಎಂದು ತಿಳಿಸಿದರು.

ಈ ಅನುದಾನವನ್ನು ಶಿಕ್ಷಣ ಇಲಾಖೆ ಶೇ 15,ಆರೋಗ್ಯ ಇಲಾಖೆ ಶೇ 15, ಪರಿಶಿಷ್ಟ ಜಾತಿ ಹಾಗೂ ಪಂಗಡ ಶೇ25. ವಿಕಲಚೇತನರಿಗೆ ಶೇ0.05,ಸಾಮಾಜಿಕ ಲೆಕ್ಕ ಪರಿಶೋನೆಗೆ ಹೀಗೆ ನರೇಗಾ ಹಾಗೂ ಅನಿರ್ಭಂದಿತ ಅನುದಾನ ಒಗ್ಗೂಡಿಸಿ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಪ ಮಾತನಾಡಿ ಅನುದಾನದಲ್ಲಿ ಸರಕಾರಿ ಶಾಲೆಗಳ ದುರಸ್ಥಿ,ಗ್ರಾಮೀಣ ರಸ್ತೆಗಳ ಅಭಿವೃದ್ಧಿ , ಉಗ್ರಾಣ, ಅಂಗನವಾಡಿ, ಶಾಲೆಗಳ ಕಟ್ಟಡ ನಿರ್ಮಾಣ, ಗ್ರಾಮೀಣ ಸಂತೆ, ಉದ್ಯಾನವನ, ಸಾಮಾಜಿಕ ಅರಣ್ಯ ಅಭಿವೃದ್ಧಿ ಮಾಡಲು ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ಸಭಗೆ ಮಾಹಿತಿ ನೀಡಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಗ್ರಾಮೀಣ ಸಂಪರ್ಕ ರಸ್ತೆಗಳು ಕೆಲವು ೫೦ ವರ್ಷಗಳಿಂದ ನಿರ್ಮಿಸಿದ ರಸ್ತೆಗಳು ಗುಂಡಿ ಬಿದ್ದಿದ್ದು ಅವುಗಳು ದುರಸ್ಥಿ ಕಂಡಿಲ್ಲ ರಸ್ತೆಗಳ ಅಕ್ಕ ಪಕ್ಕ ಜಾಲಿ ಬೆಳೆದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಡಿಮೆ ಮೊತ್ತದಲ್ಲಿ ಕಟ್ಟಡಗಳ ನಿರ್ಮಾಣ ಮಾಡಲು ಸಾಧ್ಯವಿಲ್ಲ ಇರುವ ವ್ಯವಸ್ಥೆಯಲ್ಲಿ ಸೋರುತ್ತಿರುವ ಶಿಥಿಲವಾದ ಕಟ್ಟಡಗಳನ್ನು ದುರಸ್ಥಿ ಪಡಿಸಲು ಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.


ಆಡಳೀತ ಅಧಿಕಾರಿ ಮಂಜುನಾಥ್ ಮಾತನಾಡಿ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಾಡಲು ಅವಕಾಶ ಇದೆ ಎಂದಾಗ,
ಶಾಸಕ ಟಿ.ರಘಮೂರ್ತಿ ಮಾತನಾಡಿ ಈಗಾಗಲೆ 1.40 ಕೋಟಿ ವೆಚ್ಚದಲ್ಲಿ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಾಡಲಾಗಿದ್ದು ಎಲ್ಲಿ ಮಾಡಿದ್ದಾರೆ ಯಾವ ಶಾಲೆಗಳಿಗೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ ಮೊದಲು ತನಿಖೆ ನಂತರ ಸ್ಮಾರ್ಟ್ ಕ್ಲಾಸ್ ಈಗ ಮೊದಲು ಶಾಲೆಗಳ ದುರಸ್ಥಿಯಾಗಲಿ ಯೋರ ಕಾಮಗಾರಿ ಮಾಡುವುದು ಇದು ಬಿಲ್‌ಗಾಗಿ ಕಾಮಗಾರಿಯಾಗಿದೆ ಎಂದು ಗರಂ ಆದರೂ.
ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಸಭೆಗೆ ಮಾಹಿತಿ ನೀಡುವಾಗ ರೈತರು ಸಂಕಷ್ಟದಲ್ಲಿದ್ದಾರೆ ಬೆಳೆ ವಿಮೆ ,ಬೆಳೆ ಪರಿಹಾರದಿಂದ ಯಾವ ರೈತರು ವಂಚನೆ ಯಾಗದಂತೆ ನೋಡಿಕೊಳ್ಳಬೇಕು ಕಳೆದ ಸಾಲಿನಲ್ಲಿ ಬೆಳೆ ವಿಮೆ ರೈತರ ಹೆಸರಿನಲ್ಲಿ ವಂಚನೆ ಮಾಡಿದ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ ಸೂಕ್ತ ಕ್ರಮ ಕೈಕೊಳ್ಳ ಬೇಕು . ತಾಲೂಕು ಪಂಚಾಯಿತಿಗೆ ಸದಸ್ಯರಿಲ್ಲದ ಕಾರಣ ನಿವೇ ಅಧ್ಯಕ್ಷರಾಗಿದ್ದೀರಿ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡ ಬೇಕು
ಬರಗಾಲವಿರುವುದರಿಂದ ಕೂಲಿ ಕಾರ್ಮಿಕರು ಗುಳೆ ಹೋಗದಂತೆ ಪ್ರತಿಹಳ್ಳಿಯಲ್ಲೂ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡ ಬೇಕು ಎಂದು ತಿಳಿಸಿದರು.
ಜಿಪಂ ಇಎಎ ಕಾವ್ಯ ಸಭೆಗೆ ಗೈರು ಹಾಜರಿಯಿಂದ ಕೂಡಲೆ ಇವರಿಗೆ ನೋಟಿಸ್ ಜಾರಿ ಮಾಡಿ ಇವರನ್ನು ಖಾಯಂ ಆಗಿ ಕಳಿಸಿ ಸಭೆಗೂ ಬಾರದೆ ಜನಸಂಪರ್ಕ ಸಭೆಗಳು ಬಾರದೆ ಇರುವುದು ಇವರ ಕರ್ತವ್ಯ ನಿರ್ಲಕ್ಷತೆ ಎದ್ದು ಕಾಣುತ್ತಿದೆ ಎಂದು ಆಡಳಿತ ಅಧಿಕಾರಿಗರಿಗೆ ಸೂಚನೆ ನೀಡಿದರು.
ತಾಪಂ ಇಒ ಶಶಿಧರ್ ಮಾತನಾಡಿ ಮೇವಿನ ಕೊರತೆಯನ್ನು ನೀಗಿಸಲು ನರೇಗಾ ಯೋಜನೆಯಡಿ ಪ್ರತಿ ಗ್ರಾಮದಲ್ಲೂ ೧೦ ಎಕರೆ ಪ್ರದೇಶದಲ್ಲಿಮೇವನ್ನು ಬೆಳೆಯಲು ಹಾಗೂ ಮನೆಗಳ ಮುಂದೆ ಖಾಲಿ ಜಾಗದಲ್ಲಿ ನಲ್ಲಿಯ ನೀರು, ವ್ಯರ್ಥವಾದ ನೀರು ಮ ಕೆರೆ, ನದಿ ದಡದಲ್ಲಿ ಮೇವು ಬೆಳೆಯಲು ಅವಕಾಶವಿದ್ದು ಹೆಚ್ಚಿನ ಪ್ರಚಾರ ಮಾಡಿ ಮೇವು ಬೆಳೆಯಲು ಉತ್ತೇಜನ ನೀಡುವಂತೆ ತಿಳಿಸಿದರು.
ನಾವು ಈಗ ನವಂಬರ್ ತಿಂಗಳಲ್ಲಿದ್ದೇವೆ ಇನ್ನು ನಾಲ್ಕು ತಿಂಗಳು ಮಾತ್ರ ಆರ್ಥಿಕ ವರ್ಷಕ್ಕೆ ಬಾಕಿ ಇದ್ದು ಸರಕಾರದಿಂದ ಬಂದ ಅನುದಾನವನ್ನು ಅಗತ್ಯವರಿವ ಕಾಮಗಾರಿಗಳನ್ನು ನಿಗಧಿತ ಸಮಯಕ್ಕೆ ಕ್ರಿಯಾಯೋಜನೆ ರೂಪಿಸುವಂತೆ ತಾಪಂ ಇಒ ಶಶಿಧರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ಸಮಾಜಕಲ್ಯಾಣಾಧಿಕಾರಿ ಮಂಜಪ್ಪ, ಎಸ್ಟಿ ಇಲಾಖೆ ಶಿವರಾಜ್, ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *