ಕನ್ನಡಿ ಪರಿಸರ

by | 16/11/22 | ವೈರಲ್

ಕನ್ನಡಿ ( ಫೇಸ್ ಬುಕ್ ಕೃಫೆ)

ಹುಟ್ಟು ಕುರುಡಿ ಅಜ್ಜಿ
ಸಂಜೆಯಾಗುತ್ತಲೆ ದೀಪ ಹಚ್ಚುತ್ತಿದ್ದಾಳೆ.
ಬೇರೆಯವರು ನನ್ನನ್ನು ಎಡವದಿರಲಿ ಎಂದು.

ಹಳ್ಳಿಯ ಅನಕ್ಷರಸ್ಥ ಅಜ್ಜಿ
ಸಸಿಗಳನೆಟ್ಟು ಗಿಡ-ಮರ ಬೆಳೆಸಿದ್ದಾಳೆ.
ಸಕಲ ಜೀವಸಂಕುಲಕ್ಕೂ ನೆರವಾಗಲೆಂದು.

ಅಯೋಗ್ಯ ಭ್ರಷ್ಟನೊಬ್ಬ
ಚುನಾವಣೆ ಗೆದ್ದು ಕುಣಿಯುತ್ತಿದ್ದಾನೆ.
ಬಡವರ ಬೆವರಿನ ಸಂಪತ್ತ ದೋಚಲೆಂದು.

ದುರಾಸೆಗೆ ಬಿದ್ದ ಮಗನೊಬ್ಬ
ಹಿಂಬಾಗಿಲಿನಿಂದ ಹುದ್ದೆ ಪಡೆದಿದ್ದಾನೆ.
ತನ್ನ ಜೀವನ ಪೂರ್ತಿ ಹಣಮಾಡಲೆಂದು.

ಹತ್ತು ಮಕ್ಕಳ ತಾಯಿ
ಬೀದಿಗೆ ಬಿದ್ದು ರೋಧಿಸುತ್ತಿದ್ದಾಳೆ.
ಯಾರಾದರೂ ಆಶ್ರಯ ನೀಡಿರೆಂದು.

ಅಕ್ಷರ ಕಲಿಯದ ಅಪ್ಪ
ಖಾಸಗಿ ಶಾಲೆಗೆ ಮಗುವ ತಳ್ಳಿದ್ದಾನೆ.
ತಿಳಿಯದ ಭಾಷೆ ಕಲಿತು ಮಗು ಬೀಗಲೆಂದು.

✍️ ವೆಂಕಟ್ರಮಣ ಬೆಳಗೆರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *