ಕಡಲೆ ಬೆಂಬಲ ಬೆಲೆ ಮಾರಾಟ ಕೇಂದ್ರದಲ್ಲಿ 15 ರಿಂ20 ಕ್ವಿಂಟಲ್ ಹೆಚ್ಚಿಸುವಂತೆ ಕಡಲೆ ಬೆಳೆಗಾರ ರೈತರು ಜಿಲ್ಲಾಧಿಕಾರಿಗೆ ರೈತರ ಮನವಿ

by | 23/02/23 | ಪ್ರತಿಭಟನೆ


ಚಿತ್ರದುರ್ಗ ಜನಧ್ವನಿ ವಾರ್ತೆ ಫೆ.23 ಕಡಲೆ ಬೆಂಬಲ ಬೆಲೆ ಮಾರಾಟ ಕೇಂದ್ರದಲ್ಲಿ 15 ರಿಂ20 ಕ್ವಿಂಟಲ್ ಹೆಚ್ಚಿಸುವಂತೆ ಕಡಲೆ ಬೆಳೆಗಾರ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾತೆ. ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರ ಕಡಲೆ ಖರೀದಿ ಬೆಂಬಲ ಬೆ ಖರೀದಿ ಕೇಂದ್ರ ಪ್ರಾರಂಭಿಸಿದ್ದು. ಖಾಸಗಿ ವರ್ತಕರು ಕಡಲೆಕಾಳು ಮಾರುಕಟ್ಟೆಯಲ್ಲಿ ರೂಪಾಯಿ 4,500 ರಿಂದ 4,600 ರೂ ಗಳವರೆಗೆ ಖಾಸಗಿ ವರ್ತಕರು ಖರೀದಿಸುತ್ತಿದ್ದಾರೆ ಇದರಿಂದ ರೈತರಿಗೆ ನಷ್ಟವಾಗುತ್ತಿದ್ದು. ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ 5335 ರೂ ಗಳಿಗೆ ಖರೀದಿ ಮಾಡುವುದರಿಂದ ರೈತರಿಗೆ ತುಂಬಾ ಅನುಕೂಲಕರವಾಗುತ್ತಿದೆ ಆದ್ದರಿಂದ ಒಬ್ಬ ರೈತರಿಗೆ ಪ್ರತಿ ರೈತರಿಂದ 15 ಕ್ವಿಂಟಲ್ ಖರೀದಿಸುವ ಅವಕಾಶವಿದ್ದು ಇದನ್ನು 20 ಕ್ವಿಂಟಲ್ಗೆ ಹೆಚ್ಚಿಸಿದರೆ ರೈತರು ಮಧ್ಯವರ್ತಿಗಳ ಮೊರೆ ಹೋಗುವುದು ತಪ್ಪುತ್ತದೆ .ರೈತರ ಕೃಷಿ ಬೆಳೆಯ ಖರ್ಚು ವೆಚ್ಚಗಳನ್ನು ನಿಭಾಯಿಸಲು ತುಂಬಾ ಅನುಕೂಲವಾಗುತ್ತದೆ. ಆದ್ದರಿಂದ ಕೂಡಲೆ 20 ಕ್ವಿಂಟಲ್ ಖರಿದಿ ಮಾಡಲು ಅವಕಾಶ ಮಾಡುಕೊಡುವಂತೆ ರಾಮಜೋಗಿಹಳ್ಳಿ ಗ್ರಾಮದ ಕಡಲೆ ಬೆಳೆಗಾರರಾದ ಆರ್ ಭೀಮಾರೆಡ್ಡಿ, ಜಿಎಸ್ ದೇವರಾಜ್ ರೆಡ್ಡಿ, ನಾಗರಾಜ್ ಟಿ ಎಚ್, ಮಧುಸೂದನ್ ರೆಡ್ಡಿ ರವೀಂದ್ರ, ಶಶಿಕುಮಾರ್ ಇತರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *