ಕಂದಾಯ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ- ಸಿಬ್ಬಂದಿಗಳು.ಗ್ರಾಮಲೆಕ್ಕಾಧಿಕಾರಿಗಳು ಹೈರಾಣು.

by | 21/12/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಡಿ.21 ಸರಕಾರಿ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಇಲಾಖೆಯ ಅಧಿಕಾರಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡುವ ಸರಕಾರ ಅದಕ್ಕೆ ಪೂರಕವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಲು ವಿಫಲವಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಅನಿವಾರ್ಯವಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕು ಅತಿ ಹೆಚ್ಚು ಭೌಗೋಳಿಕ ಪ್ರದೇಶ ಹಾಗೂ ಅತಿ ಹೆಚ್ಚು ದೊಡ್ಡ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ನಾಲ್ಕು ಹೋಬಳಿ ಕೇಂದ್ರಗಳನ್ನು ಹೊಂದಿದ್ದು ಕ್ಷೇತ್ರ ವಿಂಗಡಯ ನಂತರ ತಾಲೂಕಿನಲ್ಲಿ ಇಬ್ಬರು ಶಾಸಕರು ಆಡಳಿತ ನಡೆಸುತ್ತಿದ್ದಾರೆ.
ತಾಲೂಕು ಕಚೇರಿಯಲ್ಲಿ 122 ಮಂಜುರಾತಿ ಹುದ್ದೆಗಳಲ್ಲಿ 95 ಹುದ್ದೆಗಳು ಕರ್ತವ್ಯ ನಿರ್ವಹಿಸಿದರೆ, 27 ಹುದ್ದೆಗಳು ಖಾಲಿಯಾಗಿದ್ದು ಒಬ್ಬ ಒಬ್ಬ ಸಿಬ್ಬಂದಿ ಎರಡು ಮೂರು ಶಾಖೆಗಳನ್ನು ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವಂತಾಗಿದೆ.
ತಾಲೂಕಿನ 67 ಫಿರ್ಕಾಗಳಿದ್ದು ತಾಲಾ ಒಬ್ಬರಂತೆ 67 ಗ್ರಾಮಲೆಕ್ಕಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕಿದೆ ಆದರೆ ನಿವೃತ್ತಿ, ವರ್ಗಾಣೆ ನಂತರ 17 ಗ್ರಾಮಲೆಕ್ಕಾಧಿಕಾರಿಗಳು ಹುದ್ದೆಗಳು ಖಾಲಿ ಇದ್ದು ಒಬ್ಬ ಗ್ರಾಮಲೆಕ್ಕಾಧಿಕಾರಿ ಎರಡರಿಂದ ಮೂರು ಫಿರ್ಕಾಗಳ ಹೊಣೆ ಹೊತ್ತು ಒತ್ತಡಗಳ ನಡುವೆ ರ್ಕವ್ಯ ನಿರ್ವಹಿಸುತ್ತಿದ್ದ ಸರಕಾರದ ಯೋಜನೆಗಳನ್ನು ಜರಿಗೆ ತಲುಪಿಸಲುವಲ್ಲಿ ಸರಕಾರದ ಹಾಗೂ ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಕಂದಾಯ ಇಲಾಖೆಯಲ್ಲಿ ಹುಸಿರು ಗಟ್ಟಿಸುವ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವುದು ಅನಿವಾರ್ಯವಾಗಿದೆ.
ನಗರದ ತಾಲೂಕು ಕಚೇರಿಯ ಗ್ರೇಡ್-2 ತಹಶೀಲ್ದಾರ್ ಸಂಧ್ಯ ಹೆರಿಗೆ ರಜೆ ಮೇಲೆ ಹೋಗಿ ನಂತರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಾಯಕ ನಿರ್ಧೆಶಕರಾಗಿ ಬಳ್ಳಾರಿಗೆ ವರ್ಗಾವಣೆಯಾಗಿದ್ದಾರೆ ಸುಮಾರು ಒಂದು ವರ್ಷದಿಂದ ಖಾಲಿ ಇರುವ ಗ್ರೇಡ್ -2 ತಹಶೀಲ್ದಾರ್ ಹುದ್ದೆ ಖಾಲಿ ಇರುವುದರಿಂದ ಆಧಾಯ ಜಾತಿ, ಪ್ರಮಾಣ ಪತ್ರ ಸಾಮಾಜಿಕ ಭದ್ರಾತ ಪಿಂಚಿಣಿ, ಸಕಾಲ , ಪಡಶಾಲೆ, ರೈತರ ಜಮೀನಿನ ಭೂ ದಾಖಲೆ (ಅಭಿಲೇಖಾಯ) ಪ್ರಕೃತಿ ವಿಕೋಪ,ಸೇರಿದಂತೆ ಗ್ರೇಡ್-2 ತಹಶೀಲ್ದಾರ್ ಹೊಣೆಯನ್ನು ತಹಶೀಲ್ದಾರ್ ಹೆಗಲ ಮೇಲೆ ಬಿದ್ದಿರುವುದರಿಂದ ಕಚೆರಿ ಬಿಟ್ಟು ಪೀಲ್ಡ್ ಹೋಗಲು ಸಾಧ್ಯವಾಗದಂತಾಗಿದೆ.
ಪ್ರಕೃತಿ ವಿಕೋಪ ಬೆಳೆ ನಷ್ಟ, ಮನೆಗಳು ಬಿದ್ದಾಗ, ಪವತಿ ಖಾತಿ, ಜಾತಿ ಆಧಾಯ ಪ್ರಮಾಣ ಪತ್ರ, ಪಿಂಚಣಿ ಯೋಜನೆ, ಪಹಣಿ ಚುನಾವಣೆ ಸಂದರ್ಭದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ, ಸೇರಿಂದ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಇರುವ ಸಿಬ್ಬಂದಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸರಕಾರದ ಆದೇಶಗಳ ಅನ್ವಯ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಕರ್ತವ್ಯದ ಒತ್ತಡಗಳಿಗೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಚುನಾವಣೆಯ ಶಾಖೆಯ ಪ್ರ.ದ.ಸಹಾಯಕೊರೊಬ್ಬರು ಕಚೇರಿಯಲ್ಲಿನ ಕೆಲಸದ ಒತ್ತಡ ಹಾಗೂ ಅಪಮಾನ ತಾಳಲಾರದೆ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ.
ಖಾಲಿ ಇರುವ ಫಿರ್ಕಾಗಳು
ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ್, ರಾಜಸ್ವ ನಿರೀಕ್ಷರು-1. ಪ್ರಥಮ ದರ್ಜೆ ಸಹಾಯಕ 1, ದ್ವಿತೀಯ ದರ್ಜೆ ಸಹಾಯಕ 2, ಬೆರಳಚ್ಚುಗಾರ 1,ವಾಹನ ಚಾಲಕ 1, ಡಿ ಗ್ರೂಪ್ ನೌರರು-2, ಆರ್ ಆರ್ ಅಡೆಂಡರ್ 1, ಗ್ರಾಮ ಆಡಳಿತ ಅಧಿಕಾರಿ 17 ಒಟ್ಟು 122 ಮಂಜುರಾತಿ ಹುದೆಗಳಲ್ಲಿ 27 ಹುದ್ದೆಗಳು ಖಾಲಿ ಇವೆ.
ಗ್ರಾಮಲೆಕ್ಕಾಧಿಕಾರಿಗಳ ಹುದ್ದೆ ಖಾಲಿ.
ನಾಡ ಕಚೇರಿ ತಳಕು, ಭೂಮಿ ಕೇಂದ್ರ, ಆರ್.ಆರ್. ಗ್ರಾಮಲೆಕ್ಕಾಧಿಕಾರಿ, ಗೊರ‍್ಲಕಟ್ಟೆ, ಟಿ.ಎನ್.ಕೋಟೆ, ಬೆಳೆಗೆರೆ, ಗಂಜಿಗುಂಟೆ, ಕರೀಕೆರೆ, ಕೊರ‍್ಲಕುಂಟೆ,ದೊಡ್ಡಬೀರನಹಳ್ಳಿ, ನೇರಲಗುಂಟೆ, ದೊಣೆಹಳ್ಳಿ, ಅಬ್ಬೇನಹಳ್ಳಿ, ನೆಲಗೇತನಹಟ್ಟಿ, ಚನ್ನಮ್ಮನಾಗತಿಹಳ್ಳಿ, ಗೋಪನಹಳ್ಳಿ ಹೀಗೆ 17 ಗ್ರಾಮಲೆಕ್ಕಾಧಿಕಾರಿಗಳ ಹುದ್ದೆಗಳು ಖಾಲಿಯಾಗಿರುವುದು ಬೆಳೆಕಿಗೆ ಬಂದಿದೆ.
ಗ್ರಾಮೀಣ ಭಾಗದ ರೈತರು ಹಲವು ಸೌಲಭ್ಯಗಳನ್ನು ಪಡೆಯಲು ತಾಲೂಕು ಕಚೇರಿಗೆದ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಭೂಮಿ ಕೇಂದ್ರದಲ್ಲಿ ರೈತರು ಪಹಣಿ, ಮ್ಯುಟೇಷನ್ ಸೇರಿದಂತೆ ಹಲವು ಸೌಲಭ್ಯಗಳು ಸಕಾಲಕ್ಕೆ ದೊರೆಯದೆ ಅಲೆದಾಡುವ ಪರಿಸ್ಥತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಕಂದಾಯ ಇಲಾಖೆಯಲ್ಲಿ ರೈತರಿಗೆ ಸುಲಭವಾಗಿ ಪಡೆಯಲು ಹಾಗೂ ಗ್ರಾಮಲೆಕ್ಕಾಧಿಗಳು ರೈತರಿಗೆ ತಲುಪಿಸಲು ವಿಳಂಭವಾಗುತ್ತಿದ್ದು ಈಗಲಾದರು ಸರಕಾರ ಜನಸಂಖ್ಯೆಗನುಗುಣವಾಗಿ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದೇ ಕಾದು ನೋಡ ಬೇಕಿದೆ.
.

Latest News >>

ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ: ಸರಳ ಆಚರಣೆ

ಚಿತ್ರದುರ್ಗ ಮಾರ್ಚ್28: ಚಿತ್ರದುರ್ಗ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ...

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಭೇಟಿ. ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ.

ನಾಯಕನಹಟ್ಟಿ:. ಕಳೆದ ಐದು ವರ್ಷದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಎನ್....

ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಖಾಸಗಿ ಬೋರ್‍ವೆಲ್ ಹಾಗೂ ಟ್ಯಾಂಕರ್‍ಗಳನ್ನು ಗುರುತಿಸಿ

ಚಿತ್ರದುರ್ಗ ಮಾ.27: ಚಿತ್ರದುರ್ಗ ತಾಲ್ಲೂಕಿನ ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಗ್ರಾಮಗಳ ಪಟ್ಟಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು...

ಗ್ರಾಮೀಣ ಭಾಗದಲ್ಲಿ‌ಕುಡಿಯುವ ನೀರಿನ ಸಮಸ್ಯೆ ಹಾಗೂ ಕಾರ್ಮಿಕರು ಗುಳೆ ಹೋಗದಂತೆ ನರೇಗಾ ಕೂಲಿ ಕೆಲಸ ನೀಡುವಂತೆ ತಾಪಂ ಇಒ ಲಕ್ಷ್ಮಣ್.

ಚಳ್ಳಕೆರೆ ಮಾ.27. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಾಪಂ ಇಒ ಲಕ್ಷ್ಮಣ್...

ವೃದ್ಧ ದಂಪತಿಗಳು ಬೀದಿಯಲ್ಲಿ ಬಿಕ್ಷೆ.- ಮನೆಗೆ ಕಳಿಸಿ ಎರಡೊತ್ತು ಊಟದ ವ್ಯವಸ್ಥೆ ಕಲ್ಪಿಸುವ ಸಿಡಿಪಿಒ ಹರಿಪ್ರಸಾದ್.

ಚಳ್ಳಕೆರೆ ಮಾ.27. ಸಾಕಿ ಸಲುಹಿದ ತಂದೆ ತಾಯಿಗಳು ವೃದ್ದರಾದ ಮೇಲೆ ಹೆತ್ತವರವನ್ನು ನೋಡಿಕೊಳ್ಳದೆ ಬೀದಿಗೆ ಬಿಟ್ಟಿರುವ ದಾರುಣ ಕರುಣಾಜಕ...

ತೀವ್ರತರ ಖಾಯಿಲೆಯಿಂದ ಬಳಲುವ ಶಿಕ್ಷಕರು, ದೈಹಿಕ ಅಂಗವಿಕಲತೆಯುಳ್ಳ ಶಿಕ್ಷಕರು, ಗರ್ಭಿಣ ಯರು ನವಜಾತ ಶಿಶುವುಳ್ಳ ಶಿಕ್ಷಕಿಯರನ್ನು ಚುನಾವಣೆ ಕರ್ತವ್ಯಕ್ಕೆ ನೆಮಕ ಮಾಡಿಕೊಳ್ಳದಂತೆ ಮನವಿ.

ಚಿತ್ರದುರ್ಗ ಮಾ.27 ಮುಂಬರುವ ಲೋಕಸಭಾ ಚುನಾವಣೆಗೆ ದೈಹಿಕ ಅಂಗವಿಕಲ ಶಿಕ್ಷಕರು, ಗರ್ಭಿಣ ಯರು, ನವಜಾತ ಶಿಶು ಹೊಂದಿರುವ ಶಿಕ್ಷಕಿಯರು ಹಾಗೂ...

ನಗರದ 6ನೇ ವಾರ್ಡ್ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಸಮಸ್ಯೆಗಳ ಆಗರವಾಗಿದೆ : ಯುವ ಮುಖಂಡ ಜಿ. ದಾದಾಪೀರ್

ಹಿರಿಯೂರು: ನಗರದ ವೇದಾವತಿ ನದಿಗೆ ಹೊಂದಿಕೊಂಡಿರುವ 6ನೇ ವಾರ್ಡ್ ನಲ್ಲಿ ಅತ್ಯಂತ ಬಡವರು ಬೀದಿ ಬದಿ ವ್ಯಾಪಾರಸ್ಥರು, ಅಲ್ಪಸಂಖ್ಯಾತರು ಹೆಚ್ಚಿನ...

ಹಟ್ಟಿತಿಪ್ಪೇಶನ ರಥೋತ್ಸವಕ್ಕೆ ಹೋಗುವ ಭಕ್ತರಿಗೆ ಉಚಿತ ಮಜ್ಜಿಗೆ ವಿತರಣೆ.

ಚಳ್ಳಕೆರೆ ಮಾ.26 ನಗರದ ನೆಹರು ವೃತ್ತದಲ್ಲಿ ಸ್ನೇಹ ಬಳಗದವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂಸ ಉಚಿತ ಮಜ್ಜಿಗೆ ಹಾಗೂ ನೀರು ವಿತರಣೆ ಮಾಡಿದರು....

ನಗರದ ಮಹಿಳೆಯರು ಪಾದಯಾತ್ರೆ ಮೂಲಕ ಹಟ್ಟಿತಿಪ್ಪೇಶನ ದರ್ಶನ.

ಚಳ್ಳಕೆರೆ 25, ಸೌಹಾರ್ದತಾ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ಅಂಗವಾಗಿ ಚಳ್ಳಕೆರೆ ಟೌನ್ ಗಾಂಧಿನಗರದ ಮಹಿಳೆಯರು ಸ್ವಾಮಿ ಯ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page