ಕಂದಾಯ ಇಲಾಖೆಯಲ್ಲಿ ಒತ್ತಡ ತಪ್ಪಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ.

by | 19/12/23 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ಡಿ.19 ಸರಕಾರಿ ನೌಕರರು ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕರ್ತವ್ಯದಲ್ಲೂ ಸರ್ಕಾರಿ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ತಲುಪಿಸುವ ಕೆಲಸ ಮಾಡುತ್ತಿದ್ದ ಕೆಲದ ಒತ್ತಡದಿಂದ ನೌಕರರು ಆತ್ಮಹತ್ಯೆಗೆ ಶರಣಾಗಿ ಸಾವಿನ ಮನೆ ಕದ ತಟ್ಟುವಂತಾಗಿದೆ. ಹೌದು ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಚುನಾವಣೆ ಶಾಖೆಯಲ್ಲಿ ಕರ್ತವ್ಯ ವಿರ್ವಹಿಸುತ್ತಿದ್ದ ಗುರುಲಿಂಗಣ್ಣ ಡೆತ್ ನೋಟ್ ಬರೆದು ಕಚೇರಿಯಲ್ಲಿನ ಅವಮಾನ. ಹಾಗೂ ಕೆಲಸದ ಒತ್ತಡದಿಂದ ನಾನು ಸಾವಿಗೆ ಶರಣಾಗುತ್ತಿದ್ದೇನೆ ಬರೆದು ಭಟನುವಾರ ಅವರ ಮನೆಯಲ್ಲಿ ಮೃತ ಪಟ್ಟ ಬೆನ್ನಲ್ಲೇ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸರಕಾರಿ ನೌಕಕರು ಕೆಲದ ಒತ್ತಡ ತಗ್ಗಿಸುವಂತೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಸರಕಾರಿಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಕಡಿಮೆ ಸಂಖ್ಯೆಯಲ್ಲಿರು ನೌಕರರು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಷ್ಟಸಾಧ್ಯವಾಗಿದೆ. *ಕಂದಾಯ ಇಕಾಖೆ ನೌಕರರ ಮನವಿಯಲ್ಲೇನಿದೆ..* ಚಳ್ಳಕೆರೆ ತಾಲ್ಲೂಕು ತಹಶೀಲ್ದಾರ್‌ ರವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಎಂ.ಗುರುಲಿಂಗಪ್ಪ ಪ್ರ.ದ.ಸ. ಇವರು ದಿನಾಂಕ: 17/12/2023 ರಂದು ತಮ್ಮ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆತ್ಮಹತ್ಯೆಗೂ ಮುಂಚಿತವಾಗಿ ಡೆತ್‌ ನೋಟು ಬರೆದಿದ್ದು, ಈ ಡೆತ್‌ ನೋಟ್‌ ನಲ್ಲಿ ಕಛೇರಿಯಲ್ಲಾದ ಅವಮಾನ ಮತ್ತು ಕೆಲಸದ ನಿರಂತರ ಒತ್ತಡದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸ್ಪಷ್ಟವಾಗಿ ಬರೆದು ಪ್ರಾಣ ಬಿಟ್ಟಿರುತ್ತಾರೆ. ಸದರಿ ನೌಕರರು ಈ ಇಲಾಖೆಯಲ್ಲಿ 30 ವರ್ಷಗಳ ಕಾಲ ಸುಧೀರ್ಘ ಸೇವೆಯನ್ನು ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ನಿರ್ವಹಿಸಿರುತ್ತಾರೆ. ಇವರ ಸಾವಿನಿಂದ ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿರುತ್ತದೆ. ಅವರ ಕುಟುಂಬಕ್ಕೆ ಸರ್ಕಾರದಿಂದ ನೀಡಬಹುದಾದ ಎಲ್ಲಾ ಸೌಲಭ್ಯಗಳನ್ನು ಯಾವುದೇ ಅಡೆ ತಡೆ ಇಲ್ಲದೇ ಶೀಘ್ರವಾಗಿ ನೀಡುವುದು ಹಾಗೂ ಅವರ ಕುಟುಂಬಕ್ಕೆ ಅನುಕಂಪದ ನೌಕರಿಯನ್ನು ತುರ್ತಾಗಿ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿದೆ.
ಇವರ ಮರಣದಿಂದ ನಮ್ಮ ನೌಕರರೆಲ್ಲರಿಗೂ ಆಘಾತವಾಗಿರುತ್ತದೆ. ಮನೋ ಸ್ಥೈರ್ಯ ಸಂಪೂರ್ಣ ಕುಗ್ಗಿ ಹೋಗಿರುತ್ತದೆ. ಪ್ರಸ್ತುತ ದಿನಗಳಲ್ಲಿ ಮೇಲಾಧಿಕಾರಿಗಳು ಕೆಲಸದ ಬಗ್ಗೆ ಸಾಕಷ್ಟು ಒತ್ತಡ ಏರುತ್ತಿರುತ್ತಾರೆ. ಕಂದಾಯ ಇಲಾಖೆಯು ಮಾತೃ ಇಲಾಖೆಯಾಗಿದ್ದು, ಸಾಕೋಷ್ಟು ಕರ್ತವ್ಯದ ಜವಬ್ದಾರಿ ಇರುತ್ತದೆ. ಜವಬ್ದಾರಿ ಅರಿತು ಎಲ್ಲಾ ನೌಕರರು ಕರ್ತವ್ಯ ನಿರ್ವಹಿಸುತ್ತಿರುತ್ತೇವೆ. ಇಂತಹ ಜವಬ್ದಾರಿ ನಿರ್ವಹಣೆ ವೇಳೆ ಸಕಾಲ Rank, ತುರ್ತು ಎಂದು ಮೇಲಾಧಿಕಾರಿಗಳು ಒತ್ತಡ ಏರುವುದು ಸರ್ವೆ ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜವಾಗಿರುತ್ತದೆ. ಆದರೆ ಇಂತಹ ತಪ್ಪುಗಳನ್ನೇ ಹಿಡಿದು ನೌಕರರ ಮೇಲೆ ಅಮಾನತ್ತು, ಕ್ರಿಮಿನಲ್‌ ಕೇಸ್‌, FIR , ಮಾಡುತ್ತಿರುವುದು ನೌಕರರ ನೆಮ್ಮದಿಯನ್ನು ಹಾಳು ಮಾಡಿರುತ್ತದೆ. ಹಾಗೂ ಸರ್ಕಾರ ಎಲ್ಲಾ ಸರ್ಕಾರಿ ನೌಕರರಿಗೆ ಅನುಕೂಲವಾಗಲೆಂದು ಸಾರ್ವತ್ರಿಕ ರಜೆ ನೀಡಲಾಗಿದ್ದರೂ ಸಹ , ಮೇಲಾಧಿಕಾರಿಗಳು ಸದರಿ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸಲು ಆದೇಶಿಸುತ್ತಿರುತ್ತಾರೆ. ಇದರಿಂದಾಗಿ ನೌಕರರು ತಮ್ಮ ಕುಟುಂಬದೊಂದಿಗೆ ಸರಿಯಾಗಿ ವಿಶ್ವಾಸದಿಂದ ಮಾತನಾಡುವುದು, ಕಷ್ಟ ಸುಖಗಳನ್ನು ಕೇಳುವುದು ಮರೀಚಿಕೆಯಾಗಿರುತ್ತದೆ. ಮೇಲಾಧಿಕಾರಿಗಳು ಮಾಡುವ ದರ್ಪ, ದೌರ್ಜನ್ಯ, ಅಟ್ಟಹಾಸಗಳಿಂದ ಕೆಳಹಂತದ ನೌಕರರ ಮಾನಸಿಕ ನೆಮ್ಮದಿ ಹಾಳಾಗಿ ಕುಟುಂಬದೊಂದಿಗೆ ಕಲಹಗಳಾಗಿರುವ ಹಲವು ನಿದರ್ಶನಗಳಿವೆ. ಇಷ್ಟೇ ಅಲ್ಲದೇ ಅತಿಯಾದ ಕೆಲಸದ ಒತ್ತಡದಿಂದ ಸರ್ಕಾರಿ ನೌಕರರ ಆರೋಗ್ಯದಲ್ಲಿ ಏರು-ಪೇರುಗಳು ಆಗುತ್ತಿದ್ದು, ಬಿ.ಪಿ. – ಶುಗರ್‌ ಸೇರಿದಂತೆ ಇನ್ನಿತರ ತೊಂದರೆಗಳಿಂದ ನೌಕರರು ಸಾವಿಗೊಳಗಾಗುತ್ತಿರುತ್ತಾರೆ.
ಪ್ರಸ್ತುತ ಕಂದಾಯ ಇಲಾಖೆಯಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಲು ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
ಅನಾವಶ್ಯಕವಾಗಿ ಮೇಲಾಧಿಕಾರಿಗಳು ಮಾಡುತ್ತಿರುವ ಕಿರಿ ಕಿರಿಗಳನ್ನು ನಿಲ್ಲಿಸುವಂತೆ ಹಾಗೂ ಕೆಳ ಹಂತದ ನೌಕರರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸುವುದು.
ಅನಾವಶ್ಯಕವಾಗಿ ಮೇಲಾಧಿಕಾರಿಗಳು ದೂರಾವಾಣಿ ಕರೆಗಳನ್ನು ಮಾಡದಂತೆ ಸೂಕ್ತ ನಿರ್ದೇಶನವನ್ನು ನೀಡುವುದು.
ಸಕಾಲ Ranking ಪದ್ದತಿಯನ್ನು ಕಿತ್ತೊಗೆದು , ಸರ್ಕಾರ ನಿಗದಿ ಪಡಿಸಿದ ವೇಳೆಯಲ್ಲಿ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡ ಬೇಕು.
ಭೂಮಿ Ranking ಪದ್ದತಿಯನ್ನು ತೆಗೆದು ಸರ್ಕಾರ ನಿಗದಿ ಪಡಿಸಿದ ವೇಳೆಯಲ್ಲಿ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡ ಬೇಕು. ಇದರಿಂದ ಖಾತೆ ಬದಲಾವಣೆಯಲ್ಲಿ ಆಗಬಹುದಾದ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಅನ್ಯ ಇಲಾಖೆ ಕೆಲಸಗಳನ್ನು ಮಾಡದಂತೆ ಸೂಚಿಸುವುದು, ಉದಾಹರಣೆಗೆ ಎಫ್ ಐ ಡಿ, ಬೆಳೆ ಸಮಿಕ್ಷೆ
ಸರ್ಕಾರ ನಿಗದಿ ಪಡಿಸಿದ ಕಚೇರಿ ವೇಳೆಯನ್ನು ಹೊರತುಪಡಿಸಿ ಇತರೆ ಸಮಯದಲ್ಲಿ ನೌಕರರಿಗೆ ಕರ್ತವ್ಯದ ಒತ್ತಡವನ್ನು ಹೇರಬಾರದು.
ಸರ್ಕಾರ ನಿಗದಿ ಪಡಿಸಿದ ಸಾರ್ವತ್ರಿಕ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಏರಬಾರದು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಎಲ್ಲಾ ಕೆಲಸಗಳನ್ನು ಆನ್‌ ಲೈನ್‌ ನಲ್ಲಿ ಮಾಡುವಂತೆ ಒತ್ತಡ ಏರುತ್ತಿದ್ದು, ಮೂಲಭೂತ ಸೌಕರ್ಯಗಳಾದ ಲ್ಯಾಪ್‌ ಟಾಪ್‌ , ಪ್ರಿಂಟರ್, ಮೊಬೈಲ್‌ , ಹಾಗೂ ಕಚೇರಿಗಳ ವ್ಯವಸ್ಥೆಯೊಂದಿಗೆ ಸೂಕ್ತ ತರಬೇತಿ ನೀಡುವುದು ಅವಶ್ಯವಾಗಿರುತ್ತದೆ.
ಕಂದಾಯ ಇಲಾಖೆಯಲ್ಲಿ ಸೃಜನೆಯಾಗಿರುವ ಹುದ್ದೆಗಳು ಇಂದಿಗೂ ಅದೇ ಪ್ರಮಾಣದಲ್ಲಿದ್ದು, ಯಾವುದೇ ಬದಲಾವಣೆಗಳಾಗಿರುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ, ಹೆಚ್ಚುವರಿ ಕೆಲಸಗಳಿಗೆ ಅನುಗುಣವಾಗಿ ಇಲಾಖೆಯಲ್ಲಿ ಹುದ್ದೆಗಳನ್ನು ಸೃಷ್ಟಿಸುವ ಅವಶ್ಯಕತೆ ಇರುತ್ತದೆ.
ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ , ರಾಜಸ್ವ ನಿರೀಕ್ಷಕರು, ದ್ವಿತೀಯ ದರ್ಜೆ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಶಿರಸ್ತೇದಾರರು, ತಹಶೀಲ್ದಾರು ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು.
ಈ ಮೇಲ್ಕಂಡಂತೆ ತಾವುಗಳು ಕ್ರಮ ಕೈಗೊಂಡು ತಮ್ಮ ನೌಕರರ ಹಿತವನ್ನು ಕಾಪಾಡಬೇಕೆಂದು ತಮ್ಮಲ್ಲಿ ವಿನಂತಿಸುತ್ತಾ ಈ ಮನವಿ ಪತ್ರವನ್ನು ತಮ್ಮ ಅವಗಾಹನೆಗೆ ಸಲ್ಲಿಸುತ್ತಿರುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಅವಕಾಶ ಮಾಡಿಕೊಡಬಾರದೆಂದು ಕಂದಾಯ ಇಲಾಖೆ ನೌಕರರು ಮನವಿ ಮಾಡಿಕೊಂಡಿದ್ದಾರೆ.

Latest News >>

ಕಾಣೆಯಾದ ಐದು ವರ್ಷದ ಬಾಲಕಿ ಪತ್ತೆ ಕುಟುಂಬಸ್ಥರ ಮಡಿಲು ಸೇರಿದ ಬಾಲಕಿ

ಚಳ್ಳಕೆರೆ ಮಾ.3 ಮನೆಯಿಂದ ಕಾಣೆಯಾಗಿದ್ದ 5 ವರ್ಷದ ಬಾಲಕಿ‌ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾಳೆ. ಹೌದು ಇದು ಚಳ್ಳಕೆರೆ ನಗರದ ಶಾಂತಿನಗರದ...

ಚಳ್ಳಕೆರೆಯಲ್ಲಿ 700 ಮನೆಗಳ ಲೋಕಾರ್ಪಣೆ ಮನೆ ಹಂಚಿಕೆ, ಹಕ್ಕುಪತ್ರಗಳ ವಿತರಣಾ ಸಮಾರಂಭ

ಚಿತ್ರದುರ್ಗ ಮಾ.01: ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ‘ಸರ್ವರಿಗೂ ಸೂರು’...

ಸಹಕಾರ ಸಂಘಗಳು ಲೆಕ್ಕಪರಿಶೋಧಕರ ನೇಮಕ ಮಾಹಿತಿ ಸಲ್ಲಿಸಲು ಸೂಚನೆ

ಚಿತ್ರದುರ್ಗ ಫೆ.29: ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 29-ಬಿ(8)ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ...

ಬಾಲನಟರ ಪಾತ್ರಕ್ಕಾಗಿ ಮಕ್ಕಳ ಬಳಕೆ: ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ

ಚಿತ್ರದುರ್ಗ ಫೆ.28: ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ, 2016ರನ್ವಯ ಕರ್ನಾಟಕ...

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ...

ಇ-ಆಸ್ತಿ ಆಂದೋಲನ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತ ಚಂದ್ರಪ್ಪ.

ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ...

ನೀರಿನ ಅಸಮರ್ಪಕ ಬಳಕೆಯಿಂದ ಬರ ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಿ

ಚಿತ್ರದುರ್ಗ ಫೆ.23: ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಸಮಸ್ಯೆ ಹಾಗೂ ಬರ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ...

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ಜೂನ್ ವೇಳೆಗೆ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ: ವರ್ಷಾಂತ್ಯಕ್ಕೆ ನೇರ ರೈಲು ಕಾಮಗಾರಿ ಆರಂಭ

ಚಿತ್ರದುರ್ಗ. ಫೆ.26: ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page