ಎಸ್.ಎಸ್.ಎಲ್.ಸಿ : ಪಿಯುಸಿಯಲ್ಲಿ ಹೆಚ್ಚುಅಂಕ ಪಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

by | 02/09/23 | ಶಿಕ್ಷಣ


ಹಿರಿಯೂರು ಸೆ.2
ಭಗೀರಥಪೀಠದ ಸುಕ್ಷೇತ್ರ ಮಧುರೆ ಹೊಸದುರ್ಗದಲ್ಲಿ ಸೆಪ್ಟೆಂಬರ್ 3ರಂದು ರಾಜ್ಯಮಟ್ಟದ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕವನ್ನು ಪಡೆದ ಭಗೀರಥ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ತಾಲ್ಲೂಕು ಉಪ್ಪಾರ ಸಮಾಜದ ಅಧ್ಯಲಕ್ಷರಾದ ಆಲೂರು ರಾಮಣ್ಣ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಭಗೀರಥ ಮಹಾಸಂಸ್ಥಾನ ಮಠದ ಡಾ.ಶ್ರೀಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿಯವರು ವಹಿಸಲಿದ್ದಾರೆ. ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರದ ಜೊತೆ ಸಚಿವರು ಶಾಸಕರು ಹಾಗೂ ಸಮಾಜದ ಹಿರಿಯನಿವೃತ್ತಿ ಪಡೆದ ಅಧಿಕಾರಿಗಳಿಗೆ, ನೌಕರರಿಗೆ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಶಾಸಕರು ಹಾಗೂ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಸಿ.ಪುಟ್ರಂಗ ಶೆಟ್ಟಿ ಅವರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭೆ ಸಭಾಪತಿ ಯುಟಿ ಖಾದರ ಅವರು ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ ಸನ್ಮಾನ್ಯ ಶ್ರೀ ಡಿ ಸುಧಾಕರ್ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಅನೇಕ ಮಂತ್ರಿಗಳು ಶಾಸಕರು ಸಮಾಜದ ಮುಖಂಡರು ಸಭೆಗೆ ಆಗಮಿಸಲಿದ್ದಾರೆ.
ಈ ಒಂದು ಅದ್ದೂರಿ ಸಮಾರಂಭಕ್ಕೆ ಸಾರ್ವಜನಿಕರು, ಹಾಗೂ ಸಮಾಜದ ಎಲ್ಲಾ ಬಂಧುಗಳು ತಪ್ಪದೇ ಆಗಮಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ಭಗೀರಥ ಯುವಕಸಂಘದ ಗೌರವಾಧ್ಯಕ್ಷ ಆಲೂರು ಕನಕದಾಸ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *