ಚಳ್ಳಕೆರೆ ಸೆ.30.ಹಸಿರಿನಿಂದ ಕಂಗೊಳಿಸುವ ಶಾಲೆಯ ವಾತಾವರಣವು ಕಲಿಕೆಗೆ ಮತ್ತು ಸಾಧನೆಗೆ ಹೆಚ್ಚು ಪ್ರೇರಣೆ ನೀಡುತ್ತದೆ. ಎಲ್ಲರೂ ಒಗ್ಗಟ್ಟಾಗಿ ಪರಿಸರವನ್ನು ಉಳಿಸಿದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಗಾಳಿ, ಮಳೆ ಮತ್ತು ಪ್ರಕೃತಿಯ ಲಾಭವನ್ನು ಪಡೆಯಬಹುದು ಎಂದು ಪ್ರಾಚಾರ್ಯ ಎಂರವೀಶ್ ಕಿವಿಮಾತು ಹೇಳಿದರು.
ನಗರದ ಸೋಮಗುದ್ದು ರಸ್ತೆಯ ಸರಕಾರಿ ಪಿ.ಯು.ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ಕಾಲೇಜು ಸಂಯುಕ್ತಾಶ್ರಯದಲ್ಲು ಆಯೋಜಿಸಿದ್ದ ಸಸ್ಯ ಶ್ಯಾಮಲ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಮಾತನಾಡಿದರು.
ಮಾನವರ ದುರಾಸೆಗೆ ಮಿತಿ ಇಲ್ಲದಂತಾಗಿದ್ದು ತಮ್ಮ ಸ್ವಾರ್ಥಕ್ಕಾಗಿ ಗಿಡ ಮರಗಳನ್ನು ಕಡಿದು ಕಾಡನ್ನು ನಾಶಪಡಿಸಿ ಬರದ ನಾಡನ್ನಾಗಿ ಪರಿವರ್ತನೆ ಮಾಡುತ್ತಿದ್ದಾರೆ.
ಹಸಿರೇ ಉಸಿರು ಎಂಬ ಮಾತು ಕೇವಲ ತಮ್ಮ ತುಟಿಗಳಲ್ಲಿ ಪರಿಸರ ದಿನಾಚರಣೆ ಸಸ್ಯ ಶಾಮಲಾದಂತಹ ಕಾರ್ಯಕ್ರಮಗಳಲ್ಲಿ ಹರಿದಾಡುತ್ತದೆ ಆದರೆ ಅದನ್ನು ಜಾರಿಗೊಳಿಸುವ ಮನಸ್ಸನ್ನು ಯಾರು ಮಾಡುವುದಿಲ್ಲ ಇಂದಿನ ವಿದ್ಯಾರ್ಥಿಗಳು ತಮ್ಮ ಕಾಲೇಜು ಹಾಗೂ ಮನೆಗಳ ಸುತ್ತಮುತ್ತ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸಿದರೆ ಸಾವಿರ ಜನಕ್ಕೆ ನೆರಳು ನೀಡಿ ಉತ್ತಮ ವಾತಾವರಣ ನಿರ್ಮಾಣವಾಗಲು ಕಾರಣವಾಗುತ್ತದೆ ಕಾಲೇಜಿನ ಆವರಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಕ 50ಕ್ಕೂ ಹೆಚ್ಚು ಸಸಿ ನೆಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳಿಗೆ ಅವುಗಳನ್ನು ದತ್ತು ನೀಡಿವ ಮೂಲಕ ಪೋಷಿಸುವ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಹಬೀಬ್, ಪುಷ್ಪಲತ ಜಿ ಟಿ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಶಾಂತಕುಮಾರಿ ಬಿ, ಕೆ ವಿ ಚಂದ್ರಶೇಖರ್, ರವಿಕುಮಾರ್ ಎಸ್, ಜಗದೀಶ್, ಪುಟ್ಟರಂಗಪ್ಪ, ಜಾನಕಿ, ಈರಣ್ಣ, ಮಹಂತೇಶ್, ರಾಜಶೇಖರ್, ಡಿ ಕೆ ಚಂದ್ರಶೇಖರ್, ತಿಪ್ಪೇಸ್ವಾಮಿ, ನಾಗರಾಜ್ ಬೆಳಗಟ್ಟೆ, ಮಂಜುನಾಥ್, ಲೋಕೇಶ್, ಮಲ್ಲೇಶ್ , ಈಶ್ವರಪ್ಪ ಹಾಗೂ ಎನ್ ಎಸ್ ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 Comments