ಎಚ್ಚೆತ್ತುಕೊಂಡು ಜಾಗೃತರಾಗಿ ಸರ್ಕಾರದಿಂದ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಜಪಾನಂದ ಜೀ ಮಹರಾಜರು .

by | 12/09/23 | ಸಾಮಾಜಿಕ

ಚಳ್ಳಕೆರೆ ಸೆ.12.ಸರಕಾರಗಳು ಅವಶ್ಯಕತೆ ಇಲ್ಲದ ಕಾರ್ಯಕ್ರಮಗಳಿಗೆಕೋಟಿ ಕೋಟಿ ಹಣ ಸುರಿಯುತ್ತವೆ ಆದರೆ ದೇಶದ ಸಂಪತ್ತು ಗೋಮಾತೆ ಎಂದು ಕರೆಯುವ ಜಾನುವಾರುಗಳಿಗೆ ಹಾಗೂ ದೇವರ ಎತ್ತುಗಳಿಗೆ ಹಿಡಿ ಮೇವು ಕೊಡಲು ಸರಕಾರಗಳು ಮುಂದೆ ಬರುತ್ತಿಲ್ಲಎಂದು ಜಪಾನಂದ ಜೀ ಮಹರಾಜರು ವಿಷಾದಿಸಿದರು.

ನಗರದ ಹೊರವಲಯದ ಶ್ರೀ ಜಗಲೂರಜ್ಜ ಸ್ವಾಮಿಯ ದೇವಾಲಯದ ಬಳಿ ಇರುವ ಬುಡಕಟ್ಟು ಸಮುದಾಯದ ದೇವರ ರಾಸುಗಳಿಗೆ ಸುಧಾ ಮೂರ್ತಿ ಫೌಂಡೇಶನ್ .ರಾಮಕೃಷ್ಣ ಆಶ್ರಮ ಸಹಯೋಗದೊಂದಿಗೆ ಉಚಿತ ಮೇವು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವರ ಹಸುಗಳಿಗೆ ಮೇವು ನೀಡಿ ಎಂದು ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಇಲ್ಲಿನ ಬುಡಕಟ್ಟು ಸಮುದಾಯದ ಕಿಲಾರಿಗಳು ತಮ್ಮ ವಂಶ ಪಾರಂಪರ್ಯವಾಗಿ ಬಂದಿರುವ ದೇವರ ಹಸುಗಳನ್ನು ಸಾಕುವ ಕಾಯಕದಲ್ಲಿ ತೊಡಗಿದ್ದಾರೆ ಇಂತಹ ಕಿಲಾರಿಗಳು ತಮ್ಮ ಆಶ್ರಮಕ್ಕೆ ಬಂದು ದೇವರ ಹಸುಗಳು ಹಸಿವಿನಿಂದ ಬಳಲುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿವೆ ತಮಗೆ ಉಚಿತ ಮೇವು ವಿತರಿಸಬೇಕು ಎಂದು ಕೇಳಿಕೊಂಡರು ನಾನು ಈಗಾಗಲೇ ಚಳ್ಳಕೆರೆ ಮೊಳಕಾಲ್ಮೂರು ನಾಯಕನಹಟ್ಟಿ ಕೂಡ್ಲಿಗಿ ಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿ ಸುಮಾರು 280 ಟನ್ ನಷ್ಟು ಮೇವು ಉಚಿತವಾಗಿ ವಿತರಿಸಿದ್ದೇನೆ ಒಬ್ಬ ಸ್ವಾಮೀಜಿಯಾಗಿ ಶ್ರೀಮತಿ ಸುಧಾ ಮೂರ್ತಿಯವರ ಮೂರ್ತಿ ಫೌಂಡೇಶನ್ ಸಹಕಾರದೊಂದಿಗೆ ನಾನು ನನ್ನ ಕೈಲಾದಷ್ಟು ಮಟ್ಟಿಗೆ ಇದುವರೆಗೂ ಇಂತಹ ದೇವರ ಹಸುಗಳನ್ನು ಸಾಕುವ ಕಿಲಾರಿಗಳಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ ಆದರೆ ಸರ್ಕಾರ ಇಂತಹ ಬರಪೀಡಿತ ಪ್ರದೇಶಗಳಲ್ಲಿಯೂ ಸಹ ದೇವರ ಹಸುಗಳಿಗೆ ಮೇವನ್ನು ವಿತರಿಸದೆ ಸ್ವಾಮೀಜಿಯವರು ನೀಡುತ್ತಿದ್ದರೆ ಅವರ ಬಳಿಯೇ ಹೋಗಿ ಕೇಳಿ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ರಾಜಕಾರಣಿಗಳು ಉದಾಸೀನದ ಮಾತುಗಳನ್ನು ಆಡುತ್ತಿರುವುದು ನೋವು ತರಿಸಿದೆ ಎಂದರು.

ಭಿಕ್ಷೆ ಬೇಡಿ ಮೇವು ವಿತರಣೆ
. ಈಗಾಗಲೇ ರಾಜ್ಯದ ಹಲವೆಡೆ ಮಳೆ ಬಾರದೆ ಬರದ ಛಾಯೆ ಆವರಿಸಿದೆ ಮೇವಿಗಾಗಿ ಹುಲ್ಲು ಎಲ್ಲಿಯೂ ದೊರೆಯುತ್ತಿಲ್ಲ ಆದರೂ ಕಿಲಾರಿಗಳು ತಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂಬ ದೃಷ್ಟಿಯಿಂದ ದೇವರ ಹಸುಗಳನ್ನು ಸಲಹುತ್ತಿದ್ದಾರೆ ಅವರ ಈ ನಿಸ್ವಾರ್ಥ ಕಾಯಕ ಕಂಡಾಗಿನಿಂದ ಭಿಕ್ಷೆ ಬೇಡಿ ಆದರೂ ಇವರಿಗೆ ಹುಲ್ಲು ತರಿಸುವ ಪ್ರಯತ್ನ ಮಾಡುತ್ತೇನೆ ಇದುವರೆಗೂ ನಾನು ಸರ್ಕಾರದ ಯಾವ ಸಚಿವರನ್ನು ಅಥವಾ ಅಧಿಕಾರಿಗಳನ್ನು ಮೇವು ವಿತರಿಸಿ ಎಂದು ಬೇಡಿಕೊಂಡಿಲ್ಲ ಮುಂದೆಯೂ ಸಹ ಬೇಡುವುದಿಲ್ಲ ಉತ್ತಮ ಮಳೆ ಬೆಳೆ ಆಗುವವರೆಗೂ ಈ ಕಿಲಾರಿಗಳ ಹಸುಗಳು ಹಸಿವಿನಿಂದ ಸಾಯಲು ಬಿಡದೆ ಸಾಧ್ಯವಾದಷ್ಟು ಮಟ್ಟಿಗೆ ಮೇವನ್ನು ವಿತರಿಸುವ ಪ್ರಯತ್ನ ಮಾಡಲಾಗುವುದು.


ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಆಂದೋಲನದ ರೂಪದಲ್ಲಿ ಕಾರ್ಯಕ್ರಮ ರೂಪಿಸಿ ಪಶುಸಂಪತ್ತನ್ನು ಉಳಿಸುವ ಕಾಯಕ ಮಾಡಲಾಗುವುದು ಕಿಲಾರಿಗಳು ಕೇವಲ ನನ್ನ ಮೇಲೆ ಅವಲಂಬಿತರಾಗದೆ ಎಚ್ಚೆತ್ತುಕೊಂಡು ಜಾಗೃತರಾಗಿ ಸರ್ಕಾರದಿಂದ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಉಪನ್ಯಾಸಕ ಓಬಣ್ಣ ಮಾತನಾಡಿ ಚಳ್ಳಕೆರೆ ಸೇರಿದಂತೆ ಸುಮಾರು 130ಕ್ಕೂ ಹೆಚ್ಚು ತಾಲೂಕುಗಳಲ್ಲಿ ಮಳೆಬಾರದೇ ಬರ ಸಂಭವಿಸಿದ್ದು ಮನುಷ್ಯರಾದ ನಾವು ಎಲ್ಲಿ ಬೇಕಾದರೂ ಬದುಕಬಹುದು ಆದರೆ ಮೂಕ ಪ್ರಾಣಿಗಳ ಹಸಿವನ್ನು ನೀಗಿಸುವವರು ಯಾರು ಎಂದು ಪ್ರಶ್ನಿಸಿದರು.

ಪಶುಸಂಪನ್ಮೂಲವನ್ನು ಉಳಿಸುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ ಬುಡಕಟ್ಟು ಸಮುದಾಯದ ಕಿಲಾರಿಗಳು ಹಸುಗಳನ್ನು ಸಾಕುತ್ತಿರುವುದು ಇಂದು ನಿನ್ನೆಯದಲ್ಲ ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಇಂದಿನ ಆಧುನಿಕತೆಯ ಬದಲಾದ ಪರಿಸ್ಥಿತಿಯಲ್ಲಿ ಹಸುಗಳನ್ನು ಸಾಕುವವರನ್ನು ಕೀಳಾಗಿ ಕಾಣುವುದರಿಂದ ಇಂತಹ ಕಾಯಕದಲ್ಲಿ ತೊಡಗುತ್ತಿರುವವರ ಸಂಖ್ಯೆ ವಿರಳವಾಗಿದೆ. ನಗರೀಕರಣದ ದೃಷ್ಟಿಯಿಂದ ಪರಿಸರ ನಾಶವಾಗಿ ಮೇವು ಸಿಗದೆ ಇಂತಹ ದೇವರ ಹಸುಗಳು ಅಸು ನೀಗುತ್ತಿವೆ ಸರ್ಕಾರ ಬರಪೀಡಿತ ಪ್ರದೇಶಗಳಲ್ಲಿ ಇಂತಹ ದೇವರ ಹಸುಗಳು ಸೇರಿದಂತೆ ಕಸಾಯಿಖಾನೆ ಸೇರುವ ಹಸುಗಳನ್ನು ರಕ್ಷಿಸಿ ಮೇವು ವಿತರಿಸಿದಾಗ ಮಾತ್ರ ಪಶು ಸಂಕುಲ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮದ ಕಾರ್ಯದರ್ಶಿ ಸಿಪಿ ಮಹೇಶ್ ಸಿದ್ದೇಶ್ ಕಿಲಾರಿಗಳಾದ ಸುರೇಶ್ ಪಾಲಯ್ಯ ಪಾಪಯ್ಯ ಕ್ಯಾಸಕ್ಕಿ ಪಾಪಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *