ಚಿತ್ರದುರ್ಗ ಜನಧ್ವನಿ ವಾರ್ತೆ ಡಿ ೨೮. ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ, ಖಾಲಿ ಜಾಗ ಹಾಗೂ ಪಾಲು ವಿಭಾಗದ ನಂತರ ಇ- ಸ್ವತ್ತು ಪಡೆಯುವಲ್ಲಿ ಆಗುತ್ತಿರುವ ವಿಳಂಬದಿAದ ಫಲಾನುಭವಿಗಳು ದಿನ ನಿತ್ಯ ಗ್ರಾಪಂ ಕಚೇರಿಗೆ ಅಲೆದಾಟ, ಮತ್ತೊಂದು ಕಡೆ ಕಷ್ಟ ನಷ್ಟಕ್ಕೆ ಪರಭಾರೆ ಮಾಡಲಿಕ್ಕೂ ಆಗದೇ ಜನ ಪರದಾಡುವುದನ್ನು ತಪ್ಪಿಸಲು ಜಿಲ್ಲಾ ಪಂಚಾಯತ್ ವಿನೂತ ಯೋಜನೆ ಜಾರಿಗೊಳಿಸಿದೆ.
ಗ್ರಾಪಂ ಸಿಬ್ಬಂದಿಗಳು ನಿಮ್ಮ ಮನೆ ಬಳಿ ಬಂದಾಗ ಕಂದಾಯ ಪಾವತಿಸಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಪ್ರತಿಯೊಬ್ಬರು ಇ-ಸ್ವತ್ತು ಖಾತೆ ಮಾಡಿಸಿಕೊಳ್ಳುವಂತೆ ಜಿಪಂ ಸಿಇಒ ದಿವಾಕರ್ ಹೇಳಿದರು.
ಚಿತ್ರದರ್ಗು ತಾಲೂಕಿನ ಮಠದ ಕುರಬರಹಟ್ಟಿ ಗ್ರಾಪಂ ವ್ಯಾಪ್ತಿಯ ಗುತ್ತಿನಾಡು ಹಾಗೂ ಎಂ.ಆರ್ ಕಾಲೋನಿಯ ಮನೆಗಳಿಗೆ ಭೇಟಿ ನೀಡಿ ಇ-ಸ್ವತ್ ಪ್ರತಿಯನ್ನು ವಿತರರಿಸಿ ಮಾತನಾಡಿದರು.
ಗ್ರಾಮಪಂಯತ್ ಸಿಬ್ಬಂದಿಗಳು ಮನೆ ಮನೆಗಳಿಗೆ ಭೇಟಿ ನೀಡಿ ಆಸ್ತಿ ಮಾಲಿಕರಿಂದ ಕಂದಾಯ ಹಾಗೂ ಅಗತ್ಯ ದಾಖಲೆಗಳನ್ನು ಪಡೆದು ೧೫ ದಿನಗಳ ಒಳಗಾಗಿಇ-ಸ್ವತ್ತು ಪ್ರಮಾಣ ಪತ್ರವನ್ನು ಮನೆ ಬಾಗಿಲಿಗೆ ತಲುಪಿಸ ಬೇಕು ಎಂದು ತಾಕೀತು ಮಾಡಿದರು.
ಗ್ರಾಮ ಪಂಚಾಯ್ತಿಯಲ್ಲಿ ಇ-ಸ್ವತ್ತು ವಿತರಣೆ ಮಾಡುವಾಗ ಅನಾವಶ್ಯಕ ವಿಳಂಬ,ಮದ್ಯವರ್ತಿಗಳ ಹಾವಳಿ ಹಣ ನೀಡಿದರೆ ಮಾತ್ರ ಇ-ಸ್ವತ್ ದೊರೆಯುತ್ತದೆ ಎಂಬ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಠದ ಕುರುಬರಹಟ್ಟಿ ಗ್ರಾಮಪಂಚಾಯಿತಯನ್ನು ಪ್ರಯೋಗಿಕವಾಗಿ ಮನೆ ಮನೆಗೆ ಇ-ಸ್ವತ್ ವಿತರಣೆಯನ್ನು ಬುಧವಾರ ಮಾಡಲಾಗಿದೆ.
ಇದೇ ರೀತಿ ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯ ಗ್ರಾಮಠಾಣೆ ವ್ಯಾಪ್ತಿಯ ಆಸ್ತಿಗಳನ್ನು ಇ-ಸ್ವತ್ತು ಮಾಡಲಾಗುವುದು ಇ-ಸ್ವತ್ತು ನಿಮ್ಮಮನೆ ಬಾಗಿಲಿಗೆ ಬಂದು ವಿತರಣೆ ಮಾಡುತ್ತಿರುವುದರಿಂದ ಗ್ರಾಮೀಣ ಭಾಗದ ಪ್ರತಿಯೊಬ್ಬರು ಈ ಯೋಜನೆನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತೆರಿಗೆ ಕಟ್ಟಿ ನಿಮ್ಮ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನಿವಾಸಿಗಳು ಇ-ಸ್ವತ್ತು ಪಡೆಯಲು ಕಷ್ಟವಾಗುತ್ತಿತ್ತು. ಆದರೆ ಮನೆ ಬಾಗಿಲಿಗೆ ಬಂದು ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷರು/ಸದಸ್ಯರು ಮಾತನಾಡಿ, ಪಂಚಾಯ್ತಿಗಳಲ್ಲಿ ನಡೆಯುವ ಬ್ರಷ್ಟಾಚಾರ ಹಾಗೂ ವಿಳಂಬ ನೀತಿಯಿಂದ ಜಿಲ್ಲಾ ಪಂಚಾಯ್ತಿಯನ್ನು ನೋಡುವ ದೃಷ್ಟಿಕೋನವೇ ಬದಲಾಗಿದ್ದು, ಈಗ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ೧೫ ದಿನಗಳಲ್ಲಿ ಸುಮಾರು ೪ಲಕ್ಷ ತೆರಿಗೆ ಸಂಗ್ರಹವಾಗಿದ್ದು, ತೆರಿಗೆಯನ್ನು ಜನರು ತಾವೇ ಸ್ವತ: ಬಂದು ಪಾವತಿಸಿರುತ್ತಾರೆ.
ಜಿಪಂ ಉಪಕಾರ್ಯದರ್ಶಿ ಡಾ.ರಂಗನಾಥ್, ಪಿಡಿಒ ಹಾಗೂ ಸಿಬ್ಬಂದಿಗಳು ಇತರರಿದ್ದರು.
ಇ-ಸ್ವತ್ತು ಮನೆ ಬಾಗಿಲಿಗೆ ಜನರ ಮೆಚ್ಚಿಗೆ ಗ್ರಾಮಪಂಚಾಯಿತಿ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ವಸೂಲಿ ಜಿಪಂ ನೂತನ ಕಾರ್ಯಕ್ಕೆ ಸದಸ್ಯರ ಸಂತೋಷ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments