ಚಳ್ಳಕೆರೆಜನಧ್ವನಿ ವಾರ್ತೆ ಮಾ.6
ಸಾಂದರ್ಭಿಕ ಚಿತ್ರ
ಅಕ್ರಮ ಮಟ್ಕಾ ಚೀಟಿ ಹಾಗೂ ಇಸ್ಪೀಟ್ ಅಡ್ಡೆಮೇಲೆ ಪ್ರತ್ಯೇಖ ದಾಳಿ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಸಿಕೊಂಡಿರುವುದು ವರದಿಯಾಗಿದೆ.
ಚಳ್ಳಕೆರೆ ನಗರದ ಮದಕರಿ ನಗರದಲ್ಲಿ ಮನೆಯ ಮುಂದೆ ಸಂಜೆ4.30 ರ ಸುಮಾರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಾಗವೇಣಿ(50) ಗೃಹಿಣಿ ಮಟ್ಕಾ ಚೀಟಿ ಬರೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಹಿಳಾ ಪಿಎಸ್ಐ ಪ್ರಮೀಳಮ್ಮ ದಾಳಿ ನಡೆಸಿ ಮಟ್ಕಾ ಚೀಟಿ ಹಾಗೂ 1210 ರೂ ರೂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ.
ಸಾಂದರ್ಭಿಕ ಚಿತ್ರ
ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿ ಕಾವಲರಹಟ್ಟಿ ಯಲ್ಲಿ ಭಾನುವಾರ ತಡ ರಾತ್ರಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ಚಳ್ಳಕೆರೆ ಠಾಣೆಯ ಪಿಐ ದೇಸಾಯಿ, ಪಿಎಸ್ಐ ಸತೀಶ್ನಾಯ್ಕ ಹಾಗೂ ಸಿಬ್ಬಂದಿ ದಾಳಿ ನಡೆಸಿ ಸುರೇಶ್ ಹಾಗೂ ಇತರೆ ಒಟ್ಟು ಮೂರು ಜನ ಹಾಗೂ 1200 ರೂ ಗಳನ್ನು ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments