ಹೊಸದುರ್ಗ :
ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಭಾಗದಲ್ಲಿ ನೆಲೆ ನಿಂತಿರುವ ಶ್ರೀ ಹಾರನಕಣಿವೆ ರಂಗನಾಥಸ್ವಾಮಿ ದೇವರ ಅಂಬಿನೋತ್ಸವ ಹಾಗೂ ಜಾತ್ರಾ ಮಹೋತ್ಸವ ಅಕ್ಟೋಬರ್ 24 ರಿಂದ 27ರವರೆಗೆ ನಡೆಯಲಿದೆ ಎಂಬುದಾಗಿ ದೇವಸ್ಥಾನದ ಸಮಿತಿ ತಿಳಿಸಿದೆ.
ಹೊಸದುರ್ಗ ಗಡಿಭಾಗದಲ್ಲಿ ವಾಣಿವಿಲಾಸ ಜಲಾಶಯಕ್ಕೆ ಹೊಂದಿಕೊಂಡಿರುವ ಶ್ರೀರಂಗನಾಥಸ್ವಾಮಿ ಈ ಭಾಗದ ಜನರ ಆರಾಧ್ಯ ದೈವ, ಕಾಡುಗೊಲ್ಲ ಸಮುದಾಯ ವಿಶೇಷವಾಗಿ ಆರಾಧಿಸುವ ದೈವವಾಗಿದ್ದು, ಇಲ್ಲಿ ಪ್ರತಿವರ್ಷ ನಡೆಯುವ ಅಂಬಿನೋತ್ಸವಕ್ಕೆ ಲಕ್ಷಾಂತರ ಭಕ್ತರು ಬಂದು ಭಾಗವಹಿಸುತ್ತಾರೆ.
ಅಕ್ಟೋಬರ್ 24ರಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 3:30ರ ವರೆಗೆ ಗಂಗಾಪೂಜೆ, ಕುದುರೆಪೂಜೆ ನಡೆಯಲಿದೆ. ಅಕ್ಟೋಬರ್ 25ರಂದು ಬೆಳಗ್ಗೆ 8 ಗಂಟೆಗೆ ಹೊಸದುರ್ಗ ತಾಲ್ಲೂಕಿನ ಅಂಚಿಬಾರಿಹಟ್ಟಿಯಿಂದ ಶ್ರೀರಂಗನಾಥಸ್ವಾಮಿ ಉತ್ಸವಮೂರ್ತಿಯನ್ನು ಹಾರನಕಣಿವೆ ದೇವಸ್ಥಾನದ ಬಳಿಗೆ ಅಸಂಖ್ಯಾತ ಭಕ್ತರ ಜೊತೆ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು.
ಅಂದು ಬೆಳಗ್ಗೆ 10 ಗಂಟೆಗೆ ಜಾತ್ರೆ ಮತ್ತು ಅಂಬಿನೋತ್ಸವ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. ನಂತರ ಸಂಜೆ ಆರು ಗಂಟೆಗೆ ಶ್ರೀರಂಗನಾಥಸ್ವಾಮಿ ಉತ್ಸವಮೂರ್ತಿ ಗ್ರಾಮಕ್ಕೆ ಹಿಂದಿರುಗಲಿದೆ ಅಕ್ಟೋಬರ್ 26ರಂದು ರಾತ್ರಿ 9:00ಗೆ ಅಂಚಿಬಾರಿಹಟ್ಟಿಯಲ್ಲಿ ಮಹಾಮಂಗಳಾರತಿ ಕಾರ್ಯಕ್ರಮ ಜರುಗಲಿದೆ.
ಅಕ್ಟೋಬರ್ 27 ರಂದು ಭಕ್ತಾದಿಗಳಿಂದ ಅನ್ನದಾಸೋಹ, ಹೂವಿನ ಪಲ್ಲಕ್ಕಿ ಮತ್ತು ದೇವರ ಉತ್ಸವ, ಓಕುಳಿಆಟ ಸೇರಿದಂತೆ ವಿವಿಧ ರೀತಿಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂಬುದಾಗಿ ದೇವಸ್ಥಾನ ಸಮಿತಿಯವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದೇ ಅಕ್ಟೋಬರ್ 24 ರಿಂದ 27 ರವರೆಗೆ ನಡೆಯಲಿರುವ ಶ್ರೀಹಾರನಕಣಿವೆ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments