ಇತ್ತೀಚೆಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಮರೆಕ್ಕನವರ ರವರನ್ನು ಜಾಗನೂರಹಟ್ಟಿ ಗ್ರಾಮಸ್ಥರಿಂದ ಸನ್ಮಾನ.

by | 06/10/23 | ಸುದ್ದಿ


ನಾಯಕನಹಟ್ಟಿ ಅ.6 ಶಿಕ್ಷಕರ ಪಾತ್ರ ತುಂಬಾ ಮಹತ್ವವಾದದ್ದು ಗ್ರಾಮೀಣ ಪ್ರದೇಶದಲ್ಲಿ ಉತ್ತಮವಾದ ಶಿಕ್ಷಣವನ್ನ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಸಂತಸ ತಂದಿದೆ ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಸ್ ಓಬಯ ಹೇಳಿದ್ದಾರೆ.


ಅವರು ಶುಕ್ರವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಮರೆಕ್ಕನವರ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಶಿಕ್ಷಕ ರಾಮಚಂದ್ರಪ್ಪ ಮರೆಕ್ಕ ನವರ ನಮ್ಮ ಗ್ರಾಮದಲ್ಲಿ ಸುಮಾರು ಹತ್ತು ಹದಿನೈದು ವರ್ಷದಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು ಶಾಲೆಯನ್ನು ಅಭಿವೃದ್ಧಿ ಪದದತ್ತ ಕೊಂಡಯುವ ಮೂಲಕ ನಮ್ಮ ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದಾರೆ ಅವರು ಇನ್ನು ಹೆಚ್ಚಿನ ಪ್ರಶಸ್ತಿಗಳನ್ನು ರಾಜ್ಯ ರಾಷ್ಟ್ರಮಟ್ಟಗಳಲ್ಲಿ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಇನ್ನೂ ಇದೆ ವೇಳೆ ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಅಧ್ಯಕ್ಷ ಬಿ ಟಿ ಪ್ರಕಾಶ್ ಮಾತನಾಡಿ

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯ ಎಸ್ ಓಬಯ್ಯ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಪಾಲಯ್ಯ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಎಸ್ ಪಿ ಪಾಲಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ .ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯಎಸ್ ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಟಿ ತಿಪ್ಪೇಸ್ವಾಮಿ, ಸ್ನೇಹಜೀವಿ ಸಂಸ್ಥಾಪಕ ಪಾಲಯ್ಯ, ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಅಧ್ಯಕ್ಷ ಬಿ ಟಿ ಪ್ರಕಾಶ್, ಎಸ್ ಡಿ ಎಂ ಸಿ ಅಧ್ಯಕ್ಷೆ ಜಯಮ್ಮ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ಬೊಮ್ಮಣ್ಣ, ಕರವೇ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ, ಕರವೇ ಯುವ ಘಟಕ ಅಧ್ಯಕ್ಷ ಸುರೇಶ್, ಕರವೇ ಪ್ರಧಾನ ಕಾರ್ಯದರ್ಶಿ ಎಸ್ ಕಾಟಯ್ಯ, ಗ್ರಾಮಸ್ಥರಾದ ದೇವೇಗೌಡ ,ನಿಜಲಿಂಗಪ್ಪ, ಗೋಪಾಲಿ ತಿಪ್ಪೇಸ್ವಾಮಿ, ಸ್ವಾಮಿ,
ಶಾಲೆಯ ಶಿಕ್ಷಕರಾದ ಬಿ. ತಿಪ್ಪೇಸ್ವಾಮಿ, ಕೆ ಟಿ ಚಂದ್ರಣ್ಣ, ಕೆ ಸುಬ್ಬಲಕ್ಷ್ಮಿ, ಬಿ ಪ್ರೇಮಕ್ಕ ಬಿ ಕುಬೇರಪ್ಪ, ಸೇರಿದಂತೆ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *