ಇತಿಹಾಸವನ್ನು ತಿರುಚಬಹುದು ಆದರೆ ಇತಿಹಾಸವನ್ನು ನಾಷಪಡಿಸಲು ಸಾಧ್ಯವಿಲ್ಲ ಕಡಿಮೆ ಜೀವಿತಾವಧಿಯಲ್ಲಿ ಇತಿಹಾಸ ಪುಟ ಸೇರಿದ ಮೈಸೂರಿನ ಹುಲಿ’ ಎಂದೇ ಪ್ರಖ್ಯಾತರಾಗಿದ್ದ ದೊರೆ ಟಿಪ್ಪು ಸುಲ್ತಾನ್ ಸ್ವಾತ್ರಂತ್ರ್ಯ ಹೋರಾಟಗಾರ ಎಂದು ಶಾಸಕ ಟಿ.ರಘುಮೂರ್ತಿ

by | 19/11/23 | ಚರಿತ್ರೆ


ಚಳ್ಳಕೆರೆ ನ.19 ಇತಿಹಾಸವನ್ನು ತಿರುಚಬಹುದು ಆದರೆ ಇತಿಹಾಸವನ್ನು ನಾಷಪಡಿಸಲು ಸಾಧ್ಯವಿಲ್ಲ ಕಡಿಮೆ ಜೀವಿತಾವಧಿಯಲ್ಲಿ ಇತಿಹಾಸ ಪುಟ ಸೇರಿದ ಮೈಸೂರಿನ ಹುಲಿ’ ಎಂದೇ ಪ್ರಖ್ಯಾತರಾಗಿದ್ದ ದೊರೆ ಟಿಪ್ಪು ಸುಲ್ತಾನ್ ಸ್ವಾತ್ರಂತ್ರ್ಯ ಹೋರಾಟಗಾರ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.


ನಗರದ ಸರಕಾರಿ ನೌಕರರ ಭವನದಲ್ಲಿ ಟಿಪ್ಪ ಸುಲ್ತಾನ್ ಅಭಿಮಾನಿಗಳ ಮಹಾವೇಧಿಕೆ ಮತ್ತು ಮುಸ್ಲೀಂ ಬಾಂದವರು ಆಯೋಜಿಸಿದ್ದ 273 ನೇ ಸುಲ್ತಾನ್ ಜಯಂತಿ ಹಾಗೂ 68 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಚಳುವಳಿ ಹೋರಾಟದಲ್ಲಿ ಮುಸ್ಲೀಂ ಸಮುದಾಯದ ಪಾತ್ರವಿದೆ ಎಷ್ಟೋ ಮುಸ್ಲೀಂ ಸ್ವಾಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಹುತಾತ್ಮರಾಗಿರುವುದನ್ನು ಇತಿಹಾಸದ ಪುಟದಲ್ಲಿ ನೋಡ ಬಹುದು. ರಾಕೇಟ್ ಉಡಾವಣೆ, ರೇಷ್ಮೆ, ಬನ್ನೂರು ಕುರಿ,ಅಮೃತಮಹಾಲ್ ತಳಿ ಹಸುಗಳ ಉತ್ತೇಜನಕ್ಕೆನೀಡಿದ ಟಿಪ್ಪೂ ಮೊದಲಿಗರು.
ರಾಜಕೀಯಕ್ಕಾಗಿ ಜಾತಿ ಜಾತಿಗಳ ಮಧ್ಯೆ ಹತ್ತಿಕ್ಕಲು ಕೆಲವರು ಟಿಪ್ಪು ಹಿಂದು ವಿರೋಧಿ ಎಂದು ಬಿಂಬಿಸಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ .
ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ ಎಂದು ತಿಳಿಸಿದರು.


ಟಿಪ್ಪು ಸುಲ್ತಾನ್ ಆಭಿಮಾಜಿಗಳ ಸಂಘದ ರಾಜ್ಯ ವೇಧಿಕೆ ಅಧ್ಯಕ್ಷ ಟಿಪ್ಪು ಖಾಸೀಂವಲಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಮೈಸೂರು ಸಂಸ್ಥಾನ ಉಳಿಸುವ ಸಲುವಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟಿರುವ ಮಹಾನ್ ವ್ಯಕ್ತಿ. ದಲಿತರ ಭೂಮಿ ಒಡೆತನ, ಆನೇಕ ಪ್ರಸಿದ್ದ ಹಿಂದೂ ದೇವಾಲಯಗಳ ನಿರ್ಮಾಣ ದೇವಾಲಯಗಳಲ್ಲಿ ಟಿಪ್ಪುವಿನ ಇತಿಹಾಸ ಇದೆ,ಬಾಬ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲೂ ಟಿಪ್ಪೂಸುಲ್ತಾನ್ ಇತಿಹಾಸ ಇದೆ. ಟಿಪ್ಪುಸುಲ್ತಾನ್ ಅಪ್ಪಟ ಸ್ವಾತಂತ್ರ್ಯಾ ಹೋರಾಟಗಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ರಾಜನಾಗಿದ್ದನು ಮೈಸೂರು ಹುಲಿ ಎಂದ ಯಾವ ಅರಸು ನೀಡಿದ ನಾಮಾಂಕಿತವಲ್ಲ ಜನಸಾಮಾನ್ಯರು ಟಿಪ್ಪುವಿಗೆ ಮೈಸೂರು ಹುಲಿ ಎಂದು ಹೆಸರುಕೊಟ್ಟವರು ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನ.10ರಂದು ಸರಕಾರದಿಂದಲೇ ಟಿಪ್ಪು ಜಯಂತಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ.ತಿಸ್ವಾಮಿ,ಎಚ್.ಎಸ್. ಸೈಯಾದ್, ಕಮಿನಿಸ್ಟ್ ಪಕ್ಷದ ಸಿ.ವೈ.ಶಿವರುದ್ರಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಸ್ಲೀಂ ಸಮಾಜದ ಮುಖಂಡರಾದ ಕೆ.ಜಿ,ಎನ್ .ಮುಜೀಬುಲ್ಲಾ, ಅತಿಕ್ ರೆಹಮಾನ್,ಎಂ.ದಾದಾಪಿರ್, ಎಸ್ ಪಿ.ಜುಬೇರ್, ಸಿ.ಬಷೀರ್ ಹಯಾತ್ ಜಾಕೀರ್ ಹಸೇನ್ ಇತರರಿದ್ದರು,


ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಪಿ.ತಿಪ್ಪೇಸ್ವಾಮಿ ಹಾಗೂ ಸಮಾಜದ ಮುಖಂಡರಿಗೆ ಸನ್ಮಾನಿಸಿ ಗೌರವಿಸಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *