ಇಂದಿನಿಂದಲೇ ರೈತರ ಪಂಪ್‌ಸೆಟ್‌ಗಳಿಗೆ 7 ತಾಸು ವಿದ್ಯುತ್‌ ನೀಡಲು ಸಿಎಂ ಸಿದ್ದರಾಮಯ್ಯ ಆದೇಶ

by | 06/11/23 | ಕರ್ನಾಟಕ

ಬೆಂಗಳೂರು ನ.06 ರಾಜ್ಯದಲ್ಲಿ ಮಳೆಯ ಅಭಾವದಿಂದ ವಿದ್ಯುತ್‌ ಉತ್ಪಾದನೆ ಕುಂಠಿತವಾದ ಹಿನ್ನೆಲೆಯಲ್ಲಿ ರೈತರಿಗೆ ಪೂರೈಕೆ ಮಾಡುವ 3 ಫೇಸ್‌ ವಿದ್ಯುತ್‌ ಅನ್ನು 5 ಗಂಟೆ ಕೊಡಲು ನಿರ್ಧಾರ ಮಾಡಿದ್ದೆವು. ಆದರೆ, ಈಗ 5 ಗಂಟೆ ವಿದ್ಯುತ್‌ ಸಾಕಾಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರತಿನಿತ್ಯ 7 ಗಂಟೆಯ ಕಾಲ ತ್ರಿಫೇಸ್‌ ವಿದ್ಯುತ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಧನ ಇಲಾಖೆಯ ಜೊತೆ ಪರಿಶೀಲನೆ ಸಭೆ ನಡೆಸಿದ್ದೇನೆ. 7 ಗಂಟೆ ವಿದ್ಯುತ್ ಕೊಡ್ತೀವಿ ಅಂತ ಹೇಳಿದ್ದೆವು. ಆದರೆ, ನಾವು 5 ಗಂಟೆ ಕೊಡುತ್ತಿದ್ದೆವು. ಏಕೆಂದರೆ ಕೆಲವರು ರೈತರ ಪಂಪ್‌ಸೆಟ್‌ಗಳಿಗೆ 5 ಗಂಟೆ ಸಾಕು ಎಂದಿದ್ದರು. ಹೀಗಾಗಿ, 5 ಗಂಟೆ ತ್ರಿಫೇಸ್‌ ವಿದ್ಯುತ್‌ ನೀಡಿ ಎಂದು ಸೂಚನೆ ನೀಡಿದ್ದೆನು. ಆದರೆ, ಈಗ 5 ಗಂಟೆಗೆ ಸಾಕಗಲ್ಲ ಎಂಬ ಬೇಡಿಕೆ ಸಹ ಬಂದಿತ್ತು. ಆದ್ದರಿಂದ ಭತ್ತ ಬೆಳೆಯುವಂತಹ ಪ್ರದೇಶ ಸೇರಿ ಕೆಲವು ಭಾಗಗಳಲ್ಲಿ 7 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈಗ ರಾಜ್ಯದ ಎಲ್ಲಾ ಕಡೆ 7 ಗಂಟೆ ವಿದ್ಯುತ್ ಕೊಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ರೈಲು ಪ್ರಯಾಣಿಕರೇ ಎಚ್ಚರ: ನಿಮ್ಮನ್ನು ರಕ್ಷಣೆ ಮಾಡೋ ಪೊಲೀಸಪ್ಪನೇ ರಾತ್ರಿ ದರೋಡೆ ಮಾಡೋಕೆ ಬರ್ತಾನೆ!

ಸರ್ಕಾರಿ ಪ್ರಾಥಮಿಕ ಶಾಲೆ, ಜೂನಿಯರ್‌ ಕಾಲೇಜುಗಳಿಗೆ ಉಚಿತ ವಿದ್ಯುತ್:
ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಯಡಿ ವಿದ್ಯುತ್‌ ಬಳಸಿದ 389.66 ಕೋಟಿ ರೂ. ಬಾಕಿ ಉಳಿದಿತ್ತು. ಹೀಗಾಗಿ, ಬಾಕಿ ಹಣವನ್ನ ನಾವು ಒನ್ ಟೈಂ ಮನ್ನಾ ಮಾಡಿದ್ದೇವೆ. ಇನ್ನು ಸರ್ಕಾರಿ ಪ್ರಾಥಮಿಕ ಸ್ಕೂಲ್, ಜೂನಿಯರ್ ಕಾಲೇಜುಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದ ದಿನದಂದು ಘೋಷಣೆ ಮಾಡಿದ್ದೆನು. ಅದರಂತೆ ಸರ್ಕಾರದಿಂದಲೇ ಪ್ರಾಥಮಿಕ ಶಾಲೆಗಳು ಮತ್ತು ಜೂನಿಯರ್‌ ಕಾಲೇಜುಗಳಲ್ಲಿ ಬಳಕೆಯಾಗುವ ವಿದ್ಯುತ್‌ ಅನ್ನು ಸರ್ಕಾರದಿಂದ ಭರಿಸಲಾಗುತ್ತದೆ ಎಂದು ತಿಳಿಸಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *