ಹಿರಿಯೂರು :
ಇಂದಿನ ಮಕ್ಕಳೇ ಭವಿಷ್ಯತ್ತಿನ ಭವ್ಯಭಾರತದ ಪ್ರಜೆಗಳು ಅವರಿಗೆ ಗುಣಮಟ್ಟದ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸುವುದು ನಮ್ಮೆಲ್ಲ ಶಿಕ್ಷಕ-ಶಿಕ್ಷಕಿಯರ ಹಾಗೂ ಮಕ್ಕಳ ಪೋಷಕರ ಹೊಣೆಗಾರಿಕೆಯಾಗಿದೆ ಎಂಬುದಾಗಿ ಗೌತಮ್ ಅಕಾಡೆಮಿ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಎಂ.ದೀಪ ಹೇಳಿದರು.
ನಗರದ ಟಿಬಿ ಸರ್ಕಲ್ ಸಮೀಪದ ಗೌತಮ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತದ ಪ್ರಥಮ ಪ್ರಧಾನಿ ದಿವಂಗತ ಜವಾಹರ್ ಲಾಲ್ ನೆಹರು ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ “ಮಕ್ಕಳ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಬಗ್ಗೆ ಅಪಾರ ಪ್ರೀತಿ ಮತ್ತು ವಾತ್ಸಲ್ಯ ಹೊಂದಿದ್ದ ನೆಹರು ಮಕ್ಕಳೇ ದೇಶದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದು ಪರಿಗಣಿಸಿದ್ದರು, ಮಕ್ಕಳಿಗೆ ಅಗತ್ಯವಾದ ಶಿಕ್ಷಣವನ್ನು ಕೊಡಿಸಬೇಕೆಂಬುದು ಅವರ ಜೀವನದ ಪ್ರಮುಖ ಧ್ಯೇಯವಾಗಿತ್ತು ಎಂದರಲ್ಲದೆ,
ನೆಹರುರವರ ಜನ್ಮದಿನದ ಸ್ಮರಣಾರ್ಥ ಪ್ರತಿವರ್ಷ ನವೆಂಬರ್ 14ನ್ನು ಮಕ್ಕಳದಿನಾಚರಣೆಯಾಗಿ ಆಚರಿಸಲಾಗುತ್ತಿದೆ, ಆಧುನಿಕ ಭಾರತದ ನಿರ್ಮಾತೃ ನೆಹರು ಅವರು ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದಂತಹ ಮಹಾನ್ ಚೇತನ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರುಗಳಾದ ವಿದ್ಯಾಯಾದವ್, ಸುನಿತಾಕುಮಾರಿ ರಾಜೇಶ್ವರಿ, ನೂರ್ ಜಾನ್, ಸಂಧ್ಯಾಭಾಸ್ಕರ್, ಪ್ರಿಯಾಂಕ, ವೆಂಕಟೇಶ್, ಮಂಜು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಇಂದಿನಮಕ್ಕಳೇ ಭವಿಷ್ಯತ್ತಿನ ಭವ್ಯಭಾರತದ ಪ್ರಜೆಗಳು ಗೌತಮ್ ಅಕಾಡೆಮಿಯ ಮುಖ್ಯಶಿಕ್ಷಕಿಯಾದ ಎಂ.ದೀಪ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments