ಇಂಡಿಯಾಕ್ಕೆ ಟಾಪರ್ ಆಗಿ ಚಿನ್ನದ ಪದಕವನ್ನು ಪಡೆದಿರುವ ರಾಮಕೃಷ್ಣಯ್ಯರ ಪುತ್ರಿ ತುಮಕೂರಿನ ವಿದ್ಯಾರ್ಥಿನಿ ಶ್ವೇತಾ

by | 10/10/23 | ಶಿಕ್ಷಣ


ತುಮಕೂರು:
ಪುಣೆಯ ಎನ್.ಐ.ಸಿ.ಎಂ.ಎ.ಆರ್ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕನ್ಸ್ಟ್ರಕ್ಷನ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್) ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 6 ರಂದು ನಡೆದ ಘಟಿಕೋತ್ಸವದಲ್ಲಿ ತುಮಕೂರಿನ ವಿದ್ಯಾರ್ಥಿನಿ ಕುಮಾರಿ ವೈ.ಆರ್.ಶ್ವೇತಾರವರು ಪ್ರಾಜೆಕ್ಟ್ ಎಂಜಿನಿಯರಿಂಗ್ ಮತ್ತು ನಿರ್ವಹಣೆಯ ಸ್ನಾತಕೋತ್ತರ ವಿಭಾಗದಲ್ಲಿ ಆಲ್ ಇಂಡಿಯಾ ಟಾಪರ್ ಆಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ವೈ.ಆರ್.ಶ್ವೇತಾರವರು ನಗರದ ಹನುಮಂತಪುರದ ಡಯಟ್ನ ಹಿರಿಯ ಉಪನ್ಯಾಸಕ ವೈ.ಎನ್.ರಾಮಕೃಷ್ಣಯ್ಯ ಹಾಗೂ ನಿರ್ಮಲರವರ ಸುಪುತ್ರಿಯಾಗಿದ್ದಾರೆ.
ಪದಕ ಮತ್ತು ಪದವಿ ಪ್ರಮಾಣಪತ್ರವನ್ನು ಎನ್.ಐ.ಸಿ.ಎಂ.ಎ.ಆರ್ ಅಧ್ಯಕ್ಷ ಮತ್ತು ಹಿಂದೂಸ್ಥಾನ್ ನಿರ್ಮಾಣ ಮಂಡಳಿಯ ಅಧ್ಯಕ್ಷ ಅಜಿತ್ ಗುಲಾಬ್ ಚಂದ್ ಅವರು ನೀಡಿ ಗೌರವಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *