ಚಳ್ಳಕೆರೆ ಜನಧ್ವನಿ ವಾರ್ತೆ ಅ.15. ಆಕಸ್ಮಿಕ ಗುಡಿಸಲಿಗೆ ಬೆಂಕಿ ಬಿದ್ದು ದಿನ ನಿತ್ಯ ಬಳಕೆಯ ವಸ್ತುಗಳು .ದವಸ ಧಾನ್ಯ ಸೇರಿದಂತೆ ಇತರೆ ವಸ್ತುಗಳು ಬೆಂಕಿಗೆ ಸುಟ್ಟಿವೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕೇನಹಳ್ಳಿ ಗ್ರಾಮದ ಬಸವೇಶ್ವರನಗರದ ವಾಸಿ ಸ್ವಾಮಿ ಲಿಂಗ ಎನ್ನುವವರ ಗುಡಿಸಲು ಆಕಸ್ಮಿಕ ಬೆಂಕಿ ಅವಘಡ ತುತ್ತಾಗಿದೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿರುತ್ತವೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿನೊಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲು ಯಶಸ್ವಿಯಾಗಿದ್ದಾರೆ.



0 Comments