ಚಿತ್ರದುರ್ಗ ಅ.30
ಆಯುಷ್ಮಾನ್ ಭವ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಕ್ಟೋಬರ್ 31ರಂದು ವಿಶೇಷ ಆರೋಗ್ಯ ಮೇಳಗಳು ನಡೆಯಲಿವೆ.
ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಾದ ಭರಮಸಾಗರ, ಸಿರಿಗೆರೆ, ಬಿ. ದುರ್ಗ, ಬೆಲಗೂರು, ಕಿಟ್ಟದಾಳ್ ಕಂಚಿಪುರ ಶ್ರೀರಾಂಪುರ, ಧರ್ಮಪುರ, ಮರಡಿಹಳ್ಳಿ, ನಾಯಕನಹಟ್ಟಿ, ಪರಶುರಾಮಪುರ ಮತ್ತು ರಾಂಪುರ ಆಸ್ಪತ್ರೆಗಳಲ್ಲಿ ಕಣ್ಣಿನ ಪರೀಕ್ಷೆ ಮತ್ತು ದಂತ ಪರೀಕ್ಷಾ ಸೇವೆಗಳ ಬಗ್ಗೆ ವಿಶೇಷ ಆರೋಗ್ಯ ಮೇಳಗಳು ನಡೆಯಲಿವೆ.
ಹೆಚ್ಚುವರಿಯಾಗಿ ಸಮುದಾಯ ಆರೋಗ್ಯ ಕೇಂದ್ರ ಬಿ ದುರ್ಗ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತಜ್ಞರಿಂದ ತಪಾಸಣೆ ನಡೆಯಲಿದೆ. ಸಾರ್ವಜನಿಕರು ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಪಡೆದು ಆರೋಗ್ಯ ಮೇಳ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕೋರಿದ್ದಾರೆ.
ಅ.31ರಂದು ಆಯುಷ್ಮಾನ್ ಭವ ವಿಶೇಷ ಆರೋಗ್ಯ ಮೇಳ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments