ಅರಣ್ಯ ಗಿಡಗಳನ್ನು ಬೆಳೆಸಲು ನಮ್ಮ ಮನೆ ಮುಂದೆ ಜಾಗವಿಲ್ಲ ಚಿಂತೆ ಬಿಡಿ ಪ್ರತಿಯೊಬ್ಬರ ಮನೆ ಮುಂದೆ , ಹಿತ್ತಲ್ಲಲ್ಲಿ ಬೆಳೆಯುವಂತಹ ಹಣ್ಣಿನ ಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ ಶಿಕ್ಷಕಿ ಹಾಗೂಗ್ರೀನ್ ಸ್ಟೆಪ್ ನ ಸಂಸ್ಥಾಪಕಿ ಎಚ್ ಕೆ ಸವಿತಾ.

by | 05/06/24 | ಪರಿಸರ


ಚಳ್ಳಕೆರೆ ಜನಧ್ವನಿ ವಾರ್ತೆ ಜೂ.6 ಪ್ರತಿಯೊಬ್ಬರ ಮನೆ ಮುಂದೆ ಹಣ್ಣಿನ ಹಾಗೂ ತರಕಾರಿ ಗಿಡ ಮರಗಳನ್ನು ಬೆಳೆಸುವುದರಿಂದ ಪರಿಸರ ರಕ್ಷಣೆಯ ಜತಗೆ ನಿಮ್ಮ ಆರೋಗ್ಯ ಸದೃಢ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಗ್ರೀನ್ ಸ್ಟೆಪ್ ನ ಸಂಸ್ಥಾಪಕಿ ಎಚ್ ಕೆ ಸವಿತಾ ಕಿವಿಮಾತು ಹೇಳಿದರು.

ತಾಲೂಕಿನ ದೊಡ್ಡ ಉಳ್ಳಾರ್ತಿದಲ್ಲಿ ಗ್ರೀನ್ ಸ್ಟೆಪ್ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 450 ಉಚಿತ ಹಣ್ಣಿನ ಸಸಿಗಳನ್ನು ವಿತರಿಸಿ ಮಾತನಾಡಿದರು.
ಅರಣ್ಯ ಗಿಡಗಳನ್ನು ಬೆಳೆಸಲು ನಮ್ಮ ಮನೆ ಮುಂದೆ ಜಾಗವಿಲ್ಲ ಚಿಂತೆ ಬಿಡಿ ಪ್ರತಿಯೊಬ್ಬರ ಮನೆ ಮುಂದೆ , ಹಿತ್ತಲ್ಲಲ್ಲಿ ಬೆಳೆಯುವಂತಹ ಸೀಮೆ, ನಿಂಬೆ, ಅಂಜೂರ, ಕರಿಬೇವು, ಮಾವಿನ ಗಿಡಗಳನ್ನು ಪ್ರತಿ ಮನೆಗಳಿಗೆ ಹಾಗೂ ಶಾಲೆಗಳಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದ ಪ್ರತಿಯೊಬ್ಬರು ಗಿಡನೆಟ್ಟು ಪಾಲನೆ ಪೋಷಣೆ ಮಾಡಿದರೆ ಪರಿಸರ ರಕ್ಷಣೆ ಹಾಗೂ ಅದರಿಂದ ಬರುವ ಫಲಗಳನ್ನು ಸೇವನೆ ಮಾಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ನಾನೊಬ್ಬ ಸಮಾಜ ಶ್ರಾಸ್ತದ ಶಿಕ್ಷಕಿಯಾಗಿ ಮಕ್ಕಳಿ ಪಾಠ ಮಾಡುವ ಜತಗೆ ಗ್ರೀನ್ ಸ್ಟೆಪ್ ಎಂಬ ಸಂಸ್ಥಾಪಕಿಯಾಗಿ ಕಳೆದ ಮೂರು ವರ್ಷಗಳಿಂದ ಬಯಲು ಸೀಮೆಯಾದ ನಮ್ಮ ಹಳ್ಳಿಗಳಲ್ಲಿ ನಿರಂತರವಾಗಿ ಸಾರ್ವಜನಿಕ ಅರಣ್ಯೀಕರಣ ಮಾಡುವುದು ನನ್ನ ಉದ್ದೇಶವಾಗಿದ್ದು.ಜನರಿಗೆ ಉಚಿತವಾಗಿ ಹಣ್ಣಿನ ಗಿಡಗಳನ್ನು ನೀಡಿದರೆ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವಂತೆ ಸಿಗುವ ಮೂಲಕ ಉತ್ತಮ ವಾತಾವರಣವನ್ನು ನಿಲ್ಲಿಸುವುದೇ ಆಗಿದೆ.


ಕಳೆದ ಮೂರು ವರ್ಷಗಳಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾಯಕನಹಟ್ಟಿ,ಸಾಣಿಕೆರೆ ಚಳ್ಳಕೆರೆ ನಗರ ಪ್ರದೇಶಗಳಲ್ಲಿ 1200 ಕ್ಕೂ ಹೆಚ್ಚು ಗಿಡಗಳನ್ನು ವಿತರಣೆ ಮಾಡಿ ಇಂದು ದೊಡ್ಡ ಉಳ್ಳಾರ್ತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರದಿನಾಚರಣೆ ಹಮ್ಮಿಕೊಂಡು ಗ್ರಾಮದ ಜನತೆಗೆ ಹಣ್ಣಿನ ಸಸಿಗಳನ್ನು ವಿತರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಕ್ಷೆ ಕರಿಯಮ್ಮ, ಹೆಚ್ ವಿ ಕೃಷ್ಣಮೂರ್ತಿ,ಲಿಂಗರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಶ್ರೀನಿವಾಸ್ , ಗ್ರಾಪಂ ಪಿಡಿಒ ಸುರೇಶ್ ಮಾತನಾಡಿದರು.
ಶಿವಕುಮಾರ್, ರವಿತೇಜ, ಅಭಿನಂದನ್, ಪೃಥ್ವಿ, ನಾಗೇಶ ,ಸಿದ್ದಾರ್ಥ, ಅಜಿತ್ ,ಪ್ರತಿಕ್ಷ, . ಬೋರಯ್ಯ ವೆಂಕಟೇಶ್. ಸಣ್ಣ ತಿಮ್ಮಯ್ಯ. ಇತರರಿದ್ದರು.
ಕಾರ್ಯಕ್ಕೂ ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪರಿಸರ ಜಾಗೃತಿ ಜಾಥ ಮೂಲಕ ಸಾರ್ವಜನಿಕರಲ್ಲಿ ಪರಿಸರ ದಿನಾಚರಣೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Latest News >>

ತಂತ್ರಜ್ಞಾನ ಮತ್ತು ಆಧುನಿಕತೆಯ ಭರಾಟೆಯಲ್ಲಿ ಮನುಷ್ಯರ ವ್ಯವಧಾನ ಕಡಿಮೆಯಾಗುತ್ತಿದ್ದು,ಓದುಗರ ಸಂಖ್ಯೆ ಕ್ಷೀಣಿಸುತ್ತದೆ ಜಿಲ್ಲಾಕ.ಸಾ.ಪ.ಅಧ್ಯಕ್ಷ ಶಿವಸ್ವಾಮಿ

ಹಿರಿಯೂರು : ತಂತ್ರಜ್ಞಾನ ಮತ್ತು ಆಧುನಿಕತೆಯ ಭರಾಟೆಯಲ್ಲಿ ಮನುಷ್ಯರ ವ್ಯವಧಾನ ಕಡಿಮೆಯಾಗುತ್ತಿದ್ದು, ದಿನೇ ದಿನೇ ಓದುಗರ ಸಂಖ್ಯೆ ಕಡಿಮೆ...

ನಗರದ ನಗರಸಭೆಗೆ ಜಿಲ್ಲಾಧಿಕಾರಿ ವೆಂಕಟೇಶ್ ಭೇಟಿ ನಗರಸಭೆಯ ಆಯುಕ್ತರು,ಅಧಿಕಾರಿಗಳೊಂದಿಗೆ ಸಭೆ

ಹಿರಿಯೂರು: ಇದೀಗ ಪ್ರಸ್ತುತ ತಿಂಗಳು ಮಳೆಗಾಲ ಆಗಿರುವುದರಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ನಗರದ ಜನರ ಉತ್ತಮ...

ಲಕ್ಕೇನಹಳ್ಳಿ: ಸ್ವಾಮಿತ್ವ ಯೋಜನೆಯ ಕುರಿತು ಗ್ರಾಮ ಸಭೆ ಗ್ರಾಮ ಪಂಚಾಯಿತಿಗೆ ಒಳಪಡುವ ಆಸ್ತಿಗಳಿಗೆ ಪಿ.ಆರ್.ಕಾರ್ಡ್ (ಹಕ್ಕುಪತ್ರ) ನೀಡುವ ಯೋಜನೆ

ಹಿರಿಯೂರು ಜೂ.21: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜೆ.ಜಿ.ಹಳ್ಳಿ ಹೋಬಳಿಯ ದಿಂಡಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ...

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಶೇ.75ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿ

ಚಿತ್ರದುರ್ಗ ಜೂನ್.21: ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ಹಿರಿಯೂರು ತಾಲ್ಲೂಕಿನಲ್ಲಿ...

10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಅಭಿಮತ ಮಾನಸಿಕ ಸದೃಢತೆ ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿ

ಚಿತ್ರದುರ್ಗ ಜೂನ್21: ಯೋಗ ದೈಹಿಕವಾಗಿ ಶಕ್ತಿ ಹಾಗೂ ಚೈತನ್ಯ ತುಂಬುವದರ ಜೊತೆಗೆ ಮಾನಸಿಕವಾಗಿ ಸಹ ಸದೃಢರನ್ನಾಗಿಸುತ್ತದೆ. ಇಂದಿನ ನಿತ್ಯದ...

ವಿದ್ಯಾರ್ಥಿಗಳು ಪ್ರತಿ ದಿನ ಯೋಗಾಸನ ಮಾಡುವುದು ಅಭ್ಯಾಸ ಮಾಡಿಕೊಳ್ಳಿ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ.

ನಾಯಕನಹಟ್ಟಿ:: ವಿದ್ಯಾರ್ಥಿಗಳು ಪ್ರತಿಯೊಬ್ಬರು ಯೋಗಾಸನ ಮಾಡುವುದು ರೂಡಿಸಿಕೊಂಡಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ. ಎಂದು ಶ್ರೀ...

ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: -ಮುಖ್ಯಮಂತ್ರಿ ಸಿದ್ದರಾಮಯ್ಯ

ಬಳ್ಳಾರಿ,ಜೂ.20 ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ವಿಷಯ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸೋಲಿನ ಹೊಣೆಯನ್ನು ನಾನೇ ಹೊರುವೆ: ಪರಾಜಿತ ಅಭ್ಯರ್ಥಿ ಬಿ ಎನ್ ಚಂದ್ರಪ್ಪ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯು ಕಳೆದ ಹತ್ತು ವರ್ಷಗಳಿಂದ ನನ್ನ ಕರ್ಮಭೂಮಿಯಾಗಿದ್ದು ಇಲ್ಲಿನ ಜನತೆ ಮನೆ ಮಗನಂತೆ ನೋಡಿದ್ದು ಒಂದು ಬಾರಿ...

ಜಾತಿನಿಂದನೆ, ದೌರ್ಜನ್ಯಗಳಂತಹ ಆರೋಪಗಳನ್ನು ಪರಿಶಿಷ್ಟರು ಕೈಬಿಟ್ಟಾಗ ಮಾತ್ರ ಸಮಾಜದಲ್ಲಿಬೆಳೆಯಲು ಸಾಧ್ಯ: ನೂತನ ಸಂಸದರಾದ ಗೋವಿಂದ ಕಾರಜೋಳ

ಹಿರಿಯೂರು: ಜಾತಿ ನಿಂದನೆ ಮತ್ತು ದಲಿತ ದೌರ್ಜನ್ಯಗಳಂತಹ ವೃತಾ ಆರೋಪಗಳನ್ನು ಪರಿಶಿಷ್ಟರು ಕೈ ಬಿಟ್ಟಾಗ ಮಾತ್ರ ಸಮಾಜದಲ್ಲಿ ಬೆಳೆಯಲು ಸಾಧ್ಯ...

ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಭರವಸ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

ಚಿತ್ರದುರ್ಗ. ಜೂನ್.19: ಚಿಕ್ಕಾಲಘಟ್ಟ ಗ್ರಾಮದ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಜಾಗ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page