ಚಳ್ಳಕೆರೆ ಆ. 31.ಕುರಿ ಮೇಕೆ ಹಾಗೂ ಜಾನುವಾರುಗಳು ಆಕಸ್ಮಿಕವಾಗಿ ಮೃತ ಪಟ್ಟರೆ ಸರಕಾರ ರೈತರ ನೆರವಿಗೆ ಮತ್ತೆ ಅನುಗ್ರಹ ಯೋಜನೆ ಜಾರಿಗಿಳಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ.ರೇವಣ್ಣ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಜಾನುವಾರುಗಳು ಆಕಾಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುವ ಸಂಕಷ್ಟ ನಿವಾರಣೆಗೆ ʻಅನುಗ್ರಹʼ ಯೋಜನೆಯನ್ನು ಮತ್ತೆ 2023-24 ನೇ ಸಾಲಿನಲ್ಲಿ ಸರಕಾರ ಜಾರಿಗೊಳಿದ್ದು. ಸಿಡಿಲು. ರೋಗಬಾದೆ ಆಕಾಸ್ಮಿಕವಾಗಿ ಮೃತಪಟ್ಟ ಕುರಿ ಮೇಕೆಗಳಿಗೆ 5 ಸಾವಿರ ರೂ. ಹಸು ಎತ್ತು ಮೃತ ಒಟ್ಟರೆ 10 ಸಾವಿರ ರೂ ಅನುಗ್ರಹ ಯೋಜನೆಯಡಿ ಪರಿಹಾರ ನೀಡಲಾಗುವುದು ಈ ಯೋಜವೆ ವಿಮೆ ಮಾಡಿಸಿದ. ಕುರಿ ಮೇಕೆ ಹಾಗೂ ಜಾನುವಾರುಗಳಿಗೆ ವರತು ಪಡಿಸಿ ನೀಡಲಾಗುವುದು ಈ ಯೋಜನೆಯನ್ನು ಪುನರ್‌ಸ್ಥಾಪಿಸಿ ಕುರಿ ಮತ್ತು ಮೇಕೆಗಳಿಗೆ 5,000 ರೂ. ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ 10,000 ರೂ. ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ಹೇಗೆ?
ಆಕಸ್ಮಿಕವಾಗಿ ಕುರಿ/ಮೇಕೆ ಅಥವಾ ಕುರಿ ಮರಿ ಮೃತಪಟ್ಟರೆ ಅದನ್ನು ಪಶುಸಂಗೋಪನೆ ಇಲಾಖೆಯ ಪಶುವೈದ್ಯರು ಮರಣೋತ್ತರ ಪರಿಕ್ಷೆ ಮಾಡಿ ಮುಂದಿನ ಪ್ರಕ್ರಿಯೆ ಆರಂಭವಿಸುತ್ತಾರೆ. ಅಗತ್ಯ ದಾಖಲೆಗಳನ್ನು ಹಣ ಪಡೆಯುವ ಫಲಾನುಭವಿಗಳು ನೀಡಬೇಕಾಗುತ್ತದೆ. ಆಧಾರ ಕಾರ್ಡ್ ಮತ್ತು ಬ್ಯಾಂಕ್ ಪಾಸ್ಬುಕ್ ಅಗತ್ಯ. ಆಧಾರ ಕಾರ್ಡ್ ನೊಂದಿಗೆ ಫಲಾನುಭವಿಯ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಒಳ್ಳೆಯದು. ಹಣ ನೇರವಾಗಿ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ
ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುಸಂಗೋಪನೆ ಇಲಾಖೆ ಸಂಪರ್ಕಿಸಲು ಕೋರಿದೆ.
ಅನುಗ್ರಹ ಯೋಜನೆ ಮತ್ತೆ ಜಾರಿ. ಕುರಿ ಮೇಕೆ ಜಾನುವಾರು ಮೃತಪಟ್ಟರೆ ಈ ಯೋಜನೆ ಸದುಪಯೋಗ ಪಡಿಸಿಕೊಳ್ಳುವಂತೆ ಡಾ.ರೇವಣ್ಣ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments