ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಹಾಗೂ ಮನೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಪ್ರಕರಣ ದಾಖಲು.
by ಗೋಪನಹಳ್ಳಿಶಿವಣ್ಣ | 26/10/23 | ಕ್ರೈಂ
ಚಳ್ಳಕೆರೆ ಜನಧ್ವನಿ ವಾರ್ತೆ ಅ.26 ವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮನೆಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯ ಹಾಗೂ ಸಾಗಾಟ ಮಾಡುತ್ತಿದ್ದ ದ್ವಿಚಕ್ರವಾಹನ ವಶಕ್ಕೆ ಪಡೆದು ಒಬ್ಬರನ್ನು ಬಂದಿಸಲಾಗಿದೆ.
ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ. ಗೋಪನಹಳ್ಳಿ ಸೇರಿದಂತೆ ವಿವಿಧೆಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ರೈತ ಸಂಘಟನೆ ಹಾಗೂ ಸಾರ್ವಜನಿಕರು ದೂರೂ ಹಾಗೂ ಖಚಿತ ಮಾಹಿತಿ ಮೇರೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ, ಯಾದಲಗಟ್ಟೆ ಗ್ರಾಮಸ್ಥರು, ಹಾಗೂ ರೈತ ಸಂಘದ ಮುಖಂಡರು ಸಾಮೂಹಿಕವಾಗಿ ನೀಡಿದ್ದ ಅಕ್ರಮ ಮಧ್ಯ ಮಾರಾಟದ ದೂರು ನೀಡಿದ್ದರಿಂದ ಗುರುವಾರ ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಇವರ ನಿರ್ದೇಶನದ ಮೇರೆಗೆ, ಚಳ್ಳಕೆರೆ ವಲಯ ವ್ಯಾಪ್ತಿಯಲ್ಲಿ ಕೆ.ಟಿ ಧರ್ಮಪ್ಪ ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪ ವಿಭಾಗ ಇವರ ನೇತೃತ್ವದಲ್ಲಿ, ಚಳ್ಳಕೆರೆ ವಲಯದ ಅಬಕಾರಿ ನಿರೀಕ್ಷಕ ಸಿ .ನಾಗರಾಜು, ಹಾಗೂ ವಲಯದ ಸಿಬ್ಬಂದಿಯೊಂದಿಗೆ, ಜಿಲ್ಲಾ ವಿಚಕ್ಷಣ ದಳದ ಅಬಕಾರಿ ನಿರೀಕ್ಷಕಿ ಎ.ವನಿತಾ, ಹಿರಿಯೂರು ವಲಯದ ಅಬಕಾರಿ ನಿರೀಕ್ಷಕಿ ಭಾರತಮ್ಮ, ಮೊಳಕಾಲ್ಮೂರು ವಲಯದ ಅಬಕಾರಿ ನಿರೀಕ್ಷಕ ಸಾಧತ್ ಉಲ್ಲಾ , ಹಾಗೂ ಅಬಕಾರಿ ಉಪ ನಿರೀಕ್ಷಕರುಗಳಾದ ಟಿ.ರಂಗಸ್ವಾಮಿ, ಡಿ.ಟಿ.ತಿಪ್ಪಯ್ಯ, ಬಿ.ವೀರಣ್ಣ, ಸಿದ್ದೇಶ್ ನಾಯ್ಕ್ , ಎನ್.ನಾಗರಾಜ್ ಹಾಗೂ ಸಿಬ್ಬಂದಿಯವರು ಸಾಮೂಹಿಕ ಅಬಕಾರಿ ದಾಳಿಯಲ್ಲಿ ಭಾಗವಹಿಸಿ, ಯಾದಲಗಟ್ಟ ರೆಡ್ಡಿಹಳ್ಳಿ,ಯಲಗಟ್ಟೆ, ಗೋಪನಹಳ್ಳಿ. ಗ್ರಾಮಗಳಲ್ಲಿ ಸಾಮೂಹಿಕ ದಾಳಿ ನಡೆಸಿ , ಒಂದು ದ್ವಿಚಕ್ರವಾಹನ, ಐದು ಆರೋಪಿಗಳನ್ನು ಇಲಾಖಾ ವಶಕ್ಕೆ ಪಡೆದು, ಒಟ್ಟು 23.040 ಲೀಟರ್ ಮಧ್ಯವನ್ನು ವಶಪಡಿಸಿಕೊಂಡು, ಎರಡು ಘೋರ ಪ್ರಕರಣಗಳನ್ನು ಹಾಗೂ ಮೂರು ಪ್ರಕರಣಗಳನ್ನು ದಾಖಲಿಸಿದ್ದು, ಇಬ್ಬರು ಆರೋಪಿಗಳಿಗೆ ನೋಟಿಸ್ ನೀಡಿದ್ದು, ಮೂರು ಆರೋಪಿಗಳಿಗೆ ಇಲಾಖಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ, ವಶಪಡಿಸಿಕೊಂಡ ವಾಹನ ಮತ್ತು ಮದ್ಯದ ಅಂದಾಜು ಮೌಲ್ಯ ರೂ 35 ಸಾವಿರ ರೂಪಾಯಿಗಳು ಆಗಿರುತ್ತದೆ. ಚಳ್ಳಕೆರೆ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿ ಕೊಂಡಿದೆ. ಮತ್ತೆ ಅಕ್ರಮ ಮದ್ಯ ಮಾರಾಟ ಮಾಡಿದರೆ ಜಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ಅಬಕಾರಿ ಇಕಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
















0 Comments