ಚಳ್ಳಕೆರೆ ಅ.18 ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿ ಕೊಂಡಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ನೀಡಿದ ಪರಿಣಾಮವಾಗಿ ಯಲಗಟ್ಟೆ ಗ್ರಾಮದಲ್ಲಿ ಚಿಲ್ಲರೆ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಶಿವಮ್ಮ ಕೋಂ ಮಲ್ಲೇಶಪ್ಪ(48) ಹಾಗೂ ಗೋಪನಹಳ್ಳಿ ಗ್ರಾಮದ ರೆಡ್ಡೆಪ್ಪ ಬಿನ್ ಈರಣ್ಣ ಎಂಬ ಇಬ್ಬರ ಮೇಲೆ ಚಳ್ಳಕೆರೆ ಪೋಲಿಸರು ದಾಳಿ ನಡೆಸಿ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.ದಾಳಿಯಲ್ಲಿ ಪೋಲಿಸ್ ವಿಶಾಲ್ ಹಾಗೂ ತಂಡದ ಅಧಿಕಾರಿಗಳು ಭಾಗವಹಿಸಿದ್ದರು.
0 Comments