ಚಳ್ಳಕೆರೆ ಮಾ21 ಅಕ್ರಮಮದ್ಯ ಸಾಗಾಟಮಾಡುತ್ತಿದ್ದ ವಾಹನ ಮದ್ಯ ಹಾಗೂ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಗರದಿಂದ ಸಾಣೀಕೆರೆಗೆ ಅಕ್ರಮ ಮದ್ಯ ಮಾರಾಟ ಮಾಡಲು ಸಾಗಿಸುತ್ತಿದ್ದವೇಳೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತರು, ನಿರ್ಧೇನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪ ವಿಭಾಗ ಮತ್ತು ಅಬಕಾರಿ ನಿರೀಕ್ಷಕರು ಚಳ್ಳಕೆರೆ ವಲಯ ರವರ ಅಬಕಾರಿ ಉಪ ನಿರೀಕ್ಷಕರು-2 ಚಳ್ಳಕೆರೆ ವಲಯ ಇವರು ಮತ್ತು ಚಳ್ಳಕೆರೆ ವಲಯ ಸಿಬ್ಬಂದಿಯೊಂದಿಗೆ 2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚಳ್ಳಕೆರೆ ನಗರದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿರುವಾಗ ಬಂದ ಖಚಿತ ಮಾಹಿತಿ ಮೇರೆಗೆ ಪಾವಗಡ ರಸ್ತೆಯ ಜೈರಾಂ ಚಿತ್ರಮಂದಿರದ ಮುಂಭಾಗದ ಬಸ್ ನಿಲ್ದಾಣದಲ್ಲಿ ಹೋಂಡಾ ಶೈನ್ ವಾಹನದಲ್ಲಿ 8.640 ಲೀಟರ್ ಅಕ್ರಮ ಮದ್ಯ ಮದ್ಯವನ್ನು ಹಾಗೂ ಸದರಿ ದ್ವಿಚಕ್ರ ವಾಹನವನ್ನು ಜಪ್ತುಪಡಿಸಿ ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುದೆ. ಪ್ರಕರಣ ದಾಖಲಿಸಿ ಒಟ್ಟು 11.310 ಲೀಟರ್ ಅಕ್ರಮ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಒಟ್ಟು ಜಪ್ತುಪಡಿಸಿದ ಮುದ್ದೆಮಾಲಿನ ಮೌಲ್ಯ-105110. 00 ರೂಪಾಯಿಗಳು ಆಗಿರುತ್ತದೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments