ಅಕ್ರಮ ಜೂಜಾಟ ಮಟ್ಕ, ಮದ್ಯಮಾರಾಟಕ್ಕೆ ಕಡಿವಾಣ ಹಾಕುವಂತೆ ರಕ್ಷಣಾ ವೇಧಿಕೆ ಮನವಿ

by | 18/02/23 | ಪ್ರತಿಭಟನೆ

ಚಳ್ಳಕೆರೆ ಫೆ 17.
ನಗರದಲ್ಲಿ ನಡೆಯುವ ಮಟ್ಕಾ ಜೂಜಾಟಕ್ಕೆ ಕಡಿವಾಣ ಹಾಕುವಂತೆ ನಗರ ಪೊಲೀಸ್ ಠಾಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ನಗರದ ಗಾಂಧಿನಗರ, ಅಂಬೇಡ್ಕರ್, ಮದಕರಿ, ರಹೀಂ ನಗರಗಳಲ್ಲಿ ಮಟ್ಕಾ ದಂಧೆಯು ಜೋರಾಗಿದ್ದು, ಈಗ ಹಳ್ಳಿಗಳಲ್ಲೂ ಮಟ್ಕಾ ದಂಧೆಯು ನಡೆಯುತ್ತಿದೆ. ಯುವಕರು, ಕಾರ್ಮಿಕರು ನಿತ್ಯ ದುಡಿದ ಹಣವನ್ನು ಮಟ್ಕಾ ಜೂಜಾಟಕ್ಕೆ ಹಾಳುಮಾಡುತ್ತಿರುವುದರಿಂದ ಕುಟಂಬಗಳು ಬೀದಿಗೆ ಬೀಳುತ್ತಿವೆ. ಮಟ್ಕಾ ದಂಧೆಯಿAದ ಅಪರಾಥ ಕೃತ್ಯಗಳು ಕೂಡ ಹೆಚ್ಚಾಗಿವೆ.
ಮಟ್ಕಾ ಜೂಜಾಟಗಳಿಗೆ ಕೆಲವು ಮೊಬೈಲ್‌ಗಳಲ್ಲಿ ಹ್ಯಾಪ್‌ಗಳು ಬಂದಿದ್ದು ಪೋನ್ ಫೇ ಮೂಲಕ ಮಟ್ಕಾ ಹ್ಯಾಪ್‌ಗೆ ಹಣ ವರ್ಗಾವಣೆ ಮಾಡಿಕೊಂಡು ಹಾಗು ವಾಟ್ಸಪ್‌ಗಳಲ್ಲಿ ಮಟ್ಕಾ ನಂಬರ್‌ಗಳನ್ನು ಶೇರ್ ಮಾಡಿಕೊಂಡು ಮಟ್ಕಾ ಜೂಜಾಟವಾಡುತ್ತಾರೆ.
ಮಹಿಳೆಯರು ಕೂಡ ಮಟ್ಕಾ ಜೂಜಾಟದಲ್ಲಿ ಭಾಗಿಯಾಗುತ್ತಾರೆ ಎನ್ನುವ ಮಾತುಗಳ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಕೂಡಲೇ ನಗರ ಹಾಗು ಗ್ರಾಮೀಣ ಪ್ರದೇಶದಲ್ಲಿ ಮಟ್ಕಾ ಜೂಜಾಟಕ್ಕೆ ಕಡಿವಾಣ ಹಾಕಬೇಕು ಎಂದು ಕರವೇ ಪ್ರವೀಶ್ ಶೆಟ್ಟಿ ಬಣದ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ವೇಳೆ ಕರ್ನಾಟಕ ರಕ್ಷಣ ವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ಮಂಜುನಾಥ, ಯುವ ಘಟಕದ ಅಧ್ಯಕ್ಷ ಲಿಂಗರಾಜು, ಕಾರ್ಮಿಕ ಘಟಕದ ಅಧ್ಯಕ್ಷ ವಿರೇಶ್, ಮಧು, ರಘು ಸೇರಿದಂತೆ ಮುಂತಾದವರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *